ಬೆಂಗಳೂರು ; ಜಾತಿಗಣತಿ ವಿರೋಧ ವಿಚಾರವಾಗಿ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ವಿಕಾಸ ಸೌಧದಲ್ಲಿ ಮಾತನಾಡಿದ ಅವರು ಸರ್ವೆ ಸರಿಯಾಗಿ ಆಗಿಲ್ಲ ಅಂತ ನಾನು ಹೇಳಿಲ್ಲ, ಜನರಿಗೆ ಜಾಗೃತಿ ಇರಲಿಲ್ಲ.ಜನರು ಸ್ವಯಿಚ್ಛೆಯಿಂದ ನೋಂದಣಿ ಮಾಡಿಲ್ಲ.ಈಗ ಜಾಗೃತಿ ಉಂಟಾಗಿದೆ ಇದರ ಬಗ್ಗೆ ಸಂಪೂರ್ಣ ಅರಿವು ಇರೋದ್ರಿಂದ, ಎಲ್ಲರೂ ಈಗ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಜನಸಂಖ್ಯೆ ಎಷ್ಟಿದೆ ಅನ್ನೋದು ಸತ್ಯಾಂಶ ಹೊರಗಡೆ ಬರುತ್ತೆ . ಸಚಿವರಿಗೆ ಶಾಸಕರಿಗೆ ವರದಿ ಹೋಗುವುದರಿಂದ ಪ್ರಯೋಜನ ಇಲ್ಲ. ಮರು ಸಮೀಕ್ಷೆ ಮಾಡಬೇಕು ಸರಿಯಾದ ವರದಿ ತರಿಸಿಕೊಳ್ಳಬೇಕು. ಯಾರಿಗೆ ಅನ್ಯಾಯ ಆಗಿದೆ ಅನ್ಯಾಯ ಸರಿಪಡಿಸಬೇಕು ಅಷ್ಟೇ. ಇದೇ ವರದಿ ಜಾರಿಯಾದರೆ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಹೈಕಮಾಂಡ್, ನಮ್ಮ ನಾಯಕರು, ಜನಾಂಗದ ನಾಯಕರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ನಮ್ಮ ಅದನ್ನ ತೀರ್ಮಾನ ಮಾಡುವಷ್ಟು ದೊಡ್ಡವರಲ್ಲ. ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ನಾವು ಹೇಳಿದ್ದೀವಿ.ಸರ್ವೆ ಆಗಿ ಸರಿಯಾದ ವರದಿ ಆಚೆ ಬರಲಿ ನಮ್ಮ ವಿರೋಧಿಗಳು ವರದಿಯನ್ನು ಸರಿಯಾಗಿ ಮಾಡಿಲ್ಲ ಎಂದು ಕ್ಷೇತ್ರಗಳಲ್ಲಿ ನಮ್ಮ ವಿರೋಧಿಗಳು ಅಪಪ್ರಚಾರ ಮಾಡ್ತಿದ್ದಾರೆ. ಆ ವಿರೋಧಿಗಳನ್ನ ಬಾಯಿ ಮುಚ್ಚಿಸಬೇಕಾದರೆ ಮರು ಸರ್ವೆ ಆಗ್ಬೇಕು.ಯಾರಿಗೆ ಅನ್ಯಾಯ ಆಗಿದೆ ಅವರಿಗೆ ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿಯಲ್ಲಿ ಅಹಿಂದ ಸಮುದಾಯಗಳ ಸಂಖ್ಯೆ ಹೆಚ್ಚಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಸಮೀಕ್ಷೆ ಮಾಡಿದರೆ ಅಲ್ವೇನ್ರಿ ಗೊತ್ತಾಗೋದು . ಅವರು ನಮ್ಮ ಅಣ್ಣತಮ್ಮಂದ್ರು ಇರ್ಲಿ ಬಿಡ್ರಿ . ಜಾಸ್ತಿ ಆದ್ರೆ ಏನು? ಸಮೀಕ್ಷೆ ಸರಿಯಾಗಿ ಆಗಿ ವರದಿ ಬರಲಿ .ಸಿಎಂ ವರದಿಯಲ್ಲಿ 10, 20 ಸಾವಿರ ಅಹಿಂದದವರನ್ನ ಸೇರಿಸಿ ಅಂತ ಹೇಳಿ ಬಿಟ್ಟಿದ್ದಾರಾ..? ಎಂದು ಆರ್.ಅಶೋಕ್ ಆರೋಪಕ್ಕೆ ಶಾಸಕ ಬಾಲಕೃಷ್ಣ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮನೆಯಲ್ಲಿ ಜಾತಿಗಣತಿ ಮೂಲ ದಾಖಲೆ ಇದೆ ಎಂಬ ಆರ್.ಅಶೋಕ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಅಶೋಕ್ ಬಗ್ಗೆ ಯಾಕ್ರೀ ಮಾತಾಡ್ತಿರಾ.ಸಿದ್ದರಾಮಯ್ಯ ಮನೆಯಲ್ಲಿ ವರದಿ ಆಗಿಬಿಡುತ್ತಾ. ಆಗಿರೋ ವರದಿಯನ್ನು ಸರಿಯಾಗಿ ಮಾಡಿ ಎಂದು ಒತ್ತಾಯ ಮಾಡಲಿ. ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಒತ್ತಾಯ ಮಾಡಲಿ. ಬಾಯಿಗೆ ಬಂದದ್ದು ಮಾತಾಡೋದು ಬಿಟ್ಟು ಎಲ್ಲಿ ಲೋಪ ಆಗಿದೆ.ಏನಾಗಿದೆ ಅದನ್ನ ಸರಿಪಡಿಸೋ ಬಗ್ಗೆ ವಿಪಕ್ಷಗಳು ಚರ್ಚೆ ಮಾಡಲಿ.ವಿರೋಧ ಪಕ್ಷದ ನಾಯಕರು ಅಧಿವೇಶನ ಕರೆಯಲು ಹೇಳಲಿ.ಅದನ್ನು ಬಿಟ್ಟು ಅವರ ಮನೆಲಿ ಆಗಿದೆ ಇವರ ಮನೆಲಿ ಆಗಿದೆ ಎಂದು ಚರ್ಚೆ ಮಾಡೋದು ಬೇಡ ಎಂದಿದ್ದಾರೆ.
ಪೊಲೀಸರಿಗೆ ಸರ್ಕಾರ ಕೊಲೆ ಭಾಗ್ಯ ಕೊಡ್ತಿದೆ ಎಂಬ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿ ತೂಕಕ್ಕೆ ತಕ್ಕದಾಗಿ ಮಾತನಾಡಲಿ.ಯಾರೊ ಚಿಲ್ಲರೆಗಳು ಮಾತಾಡಿದ ರೀತಿ ಮಾತಾಡೋದು ಬೇಡ. ತೂಕ ಬರುವಂತೆ ಮಾತಾಡಲಿ ಎಂದು ಮನವಿ ಮಾಡ್ತೀನಿ.ಲಿಂಗಾಯತ ಸಮುದಾಯದ ನಾಯಕರು ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿ ಮಾಡಲಿ, ಪ್ರತಿ ಸಮುದಾಯದವರು ಭೇಟಿ ಮಾಡಬೇಕು.ನಮ್ಮ ಮುಖಂಡರು ಕರೆದ್ರೆ ನಾವೂ ಹೈಕಮಾಂಡ್ ನ ಭೇಟಿ ಮಾಡ್ತೀವಿ ಎಂದಿದ್ದಾರೆ.