ಬೆಂಗಳೂರು; ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸ್ಪೀಕರ್ಗೆ ಮನವಿ ಮಾಡಲಾಯಿತು. ಅಮಾನತು ಆದೇಶ ಹಿಂಪಡೆಯುವಂತೆ ಸ್ಪೀಕರ್ ಯು.ಟಿ. ಖಾದರ್ಗೆ ಮನವಿ ಮಾಡಲಾಯಿತು.ಶಾಸಕರಾದ ಡಾ. ಅಶ್ವಥ್ ನಾರಾಯಣ್, ಎಸ್. ಮುನಿರಾಜು, ಸಿ.ಕೆ. ರಾಮಮೂರ್ತಿ, ಮುನಿರತ್ನ, ಎಸ್.ಆರ್. ವಿಶ್ವನಾಥ್, ಬಿ.ಪಿ. ಹರೀಶ್, ಬೈರತಿ ಬಸವರಾಜ್, ಧೀರಜ್ ಮುನಿರಾಜು ಈ ವೇಳೆ ಉಪಸ್ಥಿತಿರಿದ್ದರು. ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಕೆ. ಮಾಡಲಾಯಿತು.
ಭೇಟಿಗೂ ಮುನ್ನ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ವೀಕರ್ ಮತ್ತು ಶಾಸಕರದ್ದು ಆತ್ಮೀಯ ಸಂಬಂಧ ಇದೆ. ಪ್ರತಿಪಕ್ಷ ಶಾಸಕರು ನನ್ನ ಆತ್ಮೀಯ ಮಿತ್ರರೇ. ಬೇರೆ ಬೇರೆ ವಿಚಾರಗಳಿವೆ, ನಾವು ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಲು ಎಲ್ಲರಿಗೂ ಅವಕಾಶ ಇದೆ . ಇಂದು ಯಾವ ವಿಚಾರಕ್ಕೆ ಭೇಟಿ ಮಾಡುತ್ತಾರೆ ಅಂತಾ ಗೊತ್ತಿಲ್ಲ ಎಂದರು.
ಭೇಟಿಯಾದ ಬಳಿಕ ಮಾತವಾನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ ಸಭಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ.ಅಮಾನತು ಮರು ಪರಿಶೀಲನೆ ಮಾಡಬೇಕು ಅಂತ ಮನವಿ ಮಾಡಿದ್ದೇವೆ. ಕೋರ್ಟ್ ನಲ್ಲಿ ಕೂಡ ಇದು ಊರ್ಜಿತ ಆಗಲ್ಲ. ನಾವು ಕೋರ್ಟ್ ಗೆ ಹೋಗುವ ಮುನ್ನ ವಾಪಸ್ ಪಡೆಯಬೇಕು. ನಮ್ಮ ಅಭಿಪ್ರಾಯ ಕೂಡಾ ಹೇಳಿದ್ದೇವೆ.ಅವರು ಮರುಪರಿಶೀಲನೆ ಮಾಡಿ ಹೇಳುವುದಾಗಿ ತಿಳಿಸಿದ್ದಾರೆ ಎಂದರು.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮಾತನಾಡಿ ಸ್ಪೀಕರ್ ಬಳಿ ಮನವಿ ಮಾಡಿದ್ದೇವೆ. ಧನ ವಿನಯೋಗ ವಿಧೇಯಕಕ್ಕೆ ತಡೆ ಒಡ್ಡಿದ್ದೇವೆ ಅಂತ ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಆರು ತಿಂಗಳ ಅಮಾನತು ಸರಿಯಲ್ಲ. ಸಮಿತಿ ಸಭೆಗಳಿಗೆ ಭಾಗಿಯಾಗಬೇಕಿದೆ. ಹಾಗಾಗಿ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದ್ರು. ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಸ್ಪೀಕರ್ ಅನುಮತಿ ವಿಚಾರದ ಬಗ್ಗೆ ಮಾತನಾಡಿದ ಅವರು ಸ್ಪೀಕರ್ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ, ಇವರು ಕೊಟ್ಟಿದ್ದಾರೆ. ಅದು ಕೋರ್ಟ್ ವಿಚಾರ. ಕೋರ್ಟ್ ನಲ್ಲೇ ತೀರ್ಮಾನ ಆಗಲಿದೆ. ಸ್ಪೀಕರ್ ಬಳಿ ವೈಯಕ್ತಿಕ ವಿಚಾರ ಯಾವುದೂ ಚರ್ಚೆ ಮಾಡಿಲ್ಲ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಸ್ಪೀಕರ್ ಭೇಟಿ ಮಾಡಿದ್ದೇವೆ. ಅಮಾನತು ಆಗಿರುವುದರಿಂದ ಕಮಿಟಿ ಸಭೆಗೆ ಹೋಗಲಾಗುತ್ತಿಲ್ಲ. ಆರು ತಿಂಗಳ ಸಸ್ಪೆಂಡ್ ಸರಿಯಲ್ಲ. ಹಿಂದೆ ಈ ರೀತಿಯ ಅನೇಕ ಘಟನೆ ನಡೆದಿದೆ. ಪಕ್ಷದಿಂದ ರಾಜಣ್ಣ ಅವರ ಹನಿಟ್ರಾಪ್ ಬಗ್ಗೆ ಮಾತಾಡಬೇಕಿತ್ತು ಮಾತಾಡಿದ್ದೇವೆ. ಅದು ಬಿಟ್ಟರೆ ಸ್ಪೀಕರ್ ಕುರ್ಚಿ ಮೇಲೆ ನಮಗೆ ಅಗೌರವ ಇಲ್ಲ.ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.ವಿಧಾನಸಭೆ ಒಳಗೆ ಆಗಿರುವುದರಿಂದ ಸರ್ಕಾರದ ಜೊತೆ ಚರ್ಚೆ ಮಾಡಿ ಮಾತಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ರು.
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ವಿಚಾರದ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಅನೇಕ ಮರ್ಡರ್ ನಡೆಯುತ್ತಿದ್ದವು. ಈಗ ಪೊಲೀಸ್ ಅಧಿಕಾರಿಗೆ ಸಾವಿನ ಭಾಗ್ಯ ಬಂದಿದೆ .ಇದರಿಂದ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಅಂತ ಗೊತ್ತಾಗಿದೆ. ಪೊಲೀಸರು ಇದ್ದಾರೆ, ಕ್ರಮ ಕೈಗೊಳ್ಳುತ್ತಾರೆ ಅನ್ನೋ ಭಯ ಹೋಗಿದೆ. ಹಾಗಾಗಿ ಈ ಘಟನೆಗಳು ನಡೆಯುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆ ಯಾರು ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಬೇಕು ಎಂದ್ರು.