ಮನೆ Latest News ಜನಿವಾರ ಬಿಚ್ಚಿಸಿದ್ದನ್ನು ನಾನು ಕೂಡ ಖಂಡಿಸುತ್ತೇನೆ; ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ

ಜನಿವಾರ ಬಿಚ್ಚಿಸಿದ್ದನ್ನು ನಾನು ಕೂಡ ಖಂಡಿಸುತ್ತೇನೆ; ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಜನಿವಾರ ಬಿಚ್ಚಿಸಿದ್ದನ್ನು ನಾನು ಕೂಡ ಖಂಡಿಸುತ್ತೇನೆ ಎಂದು  ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಘಟನೆಯ ಕುರಿತಂತೆ ಮಾತನಾಡಿದ ಅವರು ನನಗೆ ಹೆಚ್ಚು ಮಾಹಿತಿ ಇಲ್ಲ. ನಾನೂ ಕೂಡ ಖಂಡಿಸಿದ್ದೇನೆ. ಯಾಕೆ ಆ ರೀತಿ ಮಾಡಿದ್ರು, ಯಾರು ಸೂಚನೆ ಕೊಟ್ರು ಅನ್ನೋದು ಗೊತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಯಾಕೆ ತೆಗಿಸಿದ್ರು, ಏನು ಕಾರಣನೋ ಗೊತ್ತಿಲ್ಲ ಎಂದ್ರು.

ಜಾತಿ ಜನಗಣತಿ ವರದಿ ಜಾರಿಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಅವ್ರ ವೈಯಕ್ತಿಕ ಅಭಿಪ್ರಾಯ ಸಚಿವರು ಹೇಳಿದ್ದಾರೆ.ಅಂತಿಮವಾಗಿ ಕ್ಯಾಬಿನೆಟ್ ತೀರ್ಮಾನ ಮಾಡುತ್ತೆ. ಜಟಿಲ ಅಂಥಾ ನನಗೇನೂ ಕಾಣ್ತಿಲ್ಲ.ಕೆಲವು ಸಚಿವರು ಕೇಳಿದ್ದಾರೆ, ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ.ಮೇ 2 ಕ್ಕೆ ಸಭೆ ಕರೆದಿದ್ದಾರೆ. ಯಾವಾಗ ತೀರ್ಮಾನ ಆಗುತ್ತೋ ಗೊತ್ತಿಲ್ಲ.ಎಂದ್ರು. ರಿಕ್ಕಿ ರೈ ಮೇಲೆ ಶೂಟೌಟ್ ಪ್ರಕರಣದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಯಾರು ಮಾಡಿದ್ರು ಅಂತಾ ತನಿಖೆ ಮಾಡ್ತಿದ್ದಾರೆ. ಸಿಕ್ಕಿದ್ಮೇಲೆ ಗೊತ್ತಾಗುತ್ತೆ. ಇಂತಹ ವಿಚಾರದಲ್ಲಿ ಊಹಾಪೋಹ ಮಾಡೋಕೆ ಆಗಲ್ಲ. ಗುಂಡು ಹಾರಿಸಿದವರು ಸಿಕ್ಕಿದ ನಂತರ ಗೊತ್ತಾಗುತ್ತೆ.. ರಾಕೇಶ್ ಮಲ್ಲಿ ಭಾಗಿ ಬಗ್ಗೆ ಗೊತ್ತಿಲ್ಲ ಎಂದ್ರು.

ನಿನ್ನೆ ತುಮಕೂರಿನಲ್ಲಿ ಸಿಎಂ ರನ್ನ ಹೊಗಳಿದ ವಿಚಾರದ ಬಗ್ಗೆ ಮಾತನಾಡಿದ ಅವರು  ಒಂದಿಷ್ಟು ಸತ್ಯ ಹೇಳಿದ್ರೆ ಹೊಗಳೋದು ಏನು ಬಂತು. ಅವ್ರು ಹದಿನಾರು ಬಜೆಟ್ ಕೊಟ್ಟಿದ್ದು ಸತ್ಯ ಅಲ್ವಾ. ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ. ಅದನ್ನ ಹೊಗಳಿಕೆ ಅಂದುಕೊಂಡ್ರೆ ಅಂದುಕೊಳ್ಳಲಿ. ಸಿಎಂ ಬದಲಾವಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಬಿಎಂಐಸಿ ಉಪ ಸಮಿತಿ ರಚನೆ ವಿಚಾರದ ಬಗ್ಗೆ ಮಾತನಾಡಿ ನೈಸ್ ಕಳೆದ ಹಲವಾರು ವರ್ಷಗಳಿಂದ ಬಗೆಹರಿಯದ ಸಮಸ್ಯೆ.ಸರ್ಕಾರ ಜಮೀನು ಕೊಟ್ಟಿದ್ದು. ಮುನ್ನೂರಕ್ಕೂ ಹೆಚ್ಚು ಪ್ರಕರಣ ಕೋರ್ಟ್ ನಲ್ಲಿದೆ. ಅರ್ಧ ಗಂಟೆಯಲ್ಲಿ ಸಂಪುಟದಲ್ಲಿ ಬಗೆಹರಿಸಲು ಆಗಲ್ಲ. ಹೆಚ್ಚಿನ ಮಾಹಿತಿ ಬಗ್ಗೆ ಚರ್ಚೆ ಆಗಬೇಕು.ಅದಕ್ಕೆ ಸಮಿತಿ ಮಾಡಿದ್ದಾರೆ. ನನ್ನ ಸಿಎಂ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ರಾಮಲಿಂಗಾರೆಡ್ಡಿ, ಹೆಚ್ ಕೆ ಪಾಟೀಲ್ ಸೇರಿ ಹಿರಿಯ ಸಚಿವರೂ ಸದಸ್ಯರು ಇದ್ದಾರೆ. ಜಯಚಂದ್ರ ವರದಿಯನ್ನ ಕೂಡ ನಾವು ಅಧ್ಯಯನ ಮಾಡಿ ಒಂದು ವರದಿ ಕೊಡ್ತೀವಿ ಎಂದರು.