ಬೆಂಗಳೂರು; ಜಾತಿ ಗಣತಿ ಬಗ್ಗೆ ಏನು ಚರ್ಚೆ ಹೊರ ಬರುತ್ತೊ ಅದರ ಮೇಲೆ ತೀರ್ಮಾನ ಆಗುತ್ತೆ ಎಂದು ಬೆಂಗಳೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಜಾತಿ ಜನಗಣತಿ ಚರ್ಚೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಚರ್ಚೆ ಅಪೂರ್ಣವಾಗಿದೆ, ಅಲ್ಲಿ ಚರ್ಚೆ ಆಗಬಹುದು.ಅಥವಾ ಮುಂದಿನ ಕ್ಯಾಬಿನೆಟ್ ಸಭೆಯಲ್ಲಾದ್ರೂ ಚರ್ಚೆ ಆಗಬಹುದು. ಎಲ್ಲ ಮಂತ್ರಿಗಳಿಗೂ ಸಿಎಂ ಹೇಳಿದ್ದಾರೆ, ಮೊನ್ನೆ ಚರ್ಚೆ ಅಪೂರ್ಣವಾಗಿದೆ. ಮುಂದಿಗೆ ಸಭೆಗೆ ಅಪ್ರೂವ್ ಆಗಿದೆ.ಏನು ಚರ್ಚೆ ಹೊರ ಬರುತ್ತೊ ಅದರ ಮೇಲೆ ತೀರ್ಮಾನ ಆಗುತ್ತೆ ಎಂದಿದ್ದಾರೆ.
ತಮ್ಮ ಸಮುದಾಯದ ಅಂಕಿ ಅಂಶ ಸರಿಯಾಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲ ಸಮುದಾಯದ್ದು ನನ್ನದೇ, ನಂದೇ ಸಮುದಾಯ ಅಂತ ಎಲ್ಲೂ ಹೇಳಿಲ್ಲ. ನನ್ನ ಪ್ರಕಾರ ಪ್ರತಿಯೊಬ್ಬರು ಸಮುದಾಯವೂ ಕರಾರು ಒಕ್ಕಾಗಿ ಸರ್ವೇ ಮಾಡಿ ಇಟ್ಟಿಕೊಂಡಿಲ್ಲ.ಸುಮ್ಮನೇ 50 ಲಕ್ಷ, 80 ಲಕ್ಷ ಜನಸಂಖ್ಯೆ ಅಂತ ಹೇಳ್ತಿದ್ದಾರೆ ಅಷ್ಟೆ. ಯಾರ ಸರ್ವೇ ಮಾಡಿಕೊಂಡಿದ್ದಾರೆ?. ನನ್ನ ಮಾಹಿತಿಯ ಪ್ರಕಾರ ಈ ಸಮೀಕ್ಷೆ ವೈಜ್ಞಾನಿಕವಾಗಿದೆ. ಅದರ ಅಧ್ಯಯನ ಆಗಬೇಕು, ಮಂತ್ರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.ಇದರ ಬಗ್ಗೆ ಅಧ್ಯಯನ ಆಗಬೇಕು, ಮೊನ್ನೆಯ ಸಭೆಯಲ್ಲಿ ಆರೋಗ್ಯಕರವಾದ ಚರ್ಚೆ ಆಗಿದೆ ಎಂದರು.
ಪ್ರಬಲ ಸಮುದಾಯಗಳಿಂದ ಜಾತಿಗಣತಿ ವರದಿ ಜಾರಿಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ವಸ್ತು ಸ್ಥಿತಿಯಲ್ಲಿ ಯಾರು ಎಷ್ಟು ಎಷ್ಟಿದ್ದಾರೆ ಅನ್ನೋದು ಅಷ್ಟೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ. ಯಾರ ಬದುಕಿನ ಸ್ಥಿತಿ ಏನೇನಿದೆ ಅನ್ನೋದರ ವೈಜ್ಞಾನಿಕ ಸಮೀಕ್ಷೆ ಆಗಿದೆ. ಸಮೀಕ್ಷೆ ಮಾಡುವಾಗ ಯಾರು ಯಾರು ಎಷ್ಟಿದ್ದಾರೆ ಅನ್ನೋ ಸಮೀಕ್ಷೆ ಮಾಡಿದ್ದಾರೆ. ಈ ರೀತಿಯ ಸಮೀಕ್ಷೆ ಯಾರ ಕಾಲದಲ್ಲೂ ಯಾರ ಮಾಡಿರಲಿಲ್ಲ. ನಮ್ಮಷ್ಟಕ್ಕೆ ನಾವೇ ನಾವು ಇಷ್ಟಿದ್ದೇವೆ ಅಂತ ಅಂದುಕೊಂಡಿದ್ವಿ. ಈಗ ವೈಜ್ಞಾನಿಕವಾದ ಸಮೀಕ್ಷೆ ಆಗಿದೆ, ಇದರ ಮೇಲೆ ವಿಸ್ತೃತವಾದ ಚರ್ಚೆ ಆಗುತ್ತೆ ಎಂದು ತಿಳಿಸಿದ್ರು.
ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿ ಸುಟ್ಟಕೊಂಡ ಬಗ್ಗೆ ಕೆಲ ಸಚಿವರ ಸಲಹೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅಲ್ಲಿ ಆ ರೀತಿಯ ಸಲಹೆಗಳೇನು ಬಂದಿಲ್ಲ. ಚರ್ಚೆ ಆರೋಗ್ಯಕರವಾಗಿಯೇ ಇತ್ತು. ಎಲ್ಲ ಮಂತ್ರಿಗಳಿಗೂ ಒಮ್ಮತ ಇದೆ. ಮುಂದೆ ಅಪೂರ್ವವಾದ ಚರ್ಚೆ ಪೂರ್ಣಗೊಳಿಸಿ ನಂತರ ತೀರ್ಮಾನ ಮಾಡ್ತೀವಿ ಎಂದ ಅವರು ಒಳ ಮೀಸಲಾತಿಗೆ ಜಾತಿ ಜನಗಣತಿ ಸಮೀಕ್ಷೆಯ ವರದಿ ಪರಿಗಣನೆ ವಿಚಾರದ ಬಗ್ಗೆ ಮಾತನಾಡಿ ಈ ಅಂಕಿ ಅಂಶಗಳು ಒಳ ಮೀಸಲಾತಿಗೆ ತೆಗೆದುಕೊಳ್ಳಬಹುದು. ಎಸ್ ಸಿ 101 ಜಾತಿ ಇದೆ. ಎಸ್ ಸಿ ಅಂತ ಬರೆದುಕೊಳ್ತಾರೆ, ಎಸ್ ಸಿ ನಲ್ಲಿ ಯಾವ್ದು?.ಆದಿ ದ್ರಾವಿಡ, ಲಮಾಣಿ, ಆದಿ ಕರ್ನಾಟಕ ಇವರಲ್ಲಿ ನೀವು ಯಾವುದು ಅಂತ ಮಾಡಿಲ್ಲ.ಈ ಮಾಹಿತಿಯನ್ನು ಹೆಗಡೆ ಸಮೀಕ್ಷೆಯಲ್ಲೂ ಮಾಡಿಲ್ಲ.ಇದನ್ನ ಕರಾರುವಕ್ಕಾಗಿ ಹೇಳಬೇಕು.ಸರ್ವೇ ಮಾಡದೆಯೇ ನೀವು ಜಾಸ್ತಿ, ನಾವು ಜಾಸ್ತಿ ಹೇಳ್ತಿದ್ದಾರೆ .ಖಚಿತವಾಗಿ ಆಗಬೇಕು ಅಲ್ವಾ ? ದತ್ತಾಂಶಬೇಕು ಹೀಗಾಗಿ ನಾಗಮೋಹನ್ ದಾಸ್ ಕಮಿಟಿ ಮಾಡಿದ್ವಿ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಿ ಅಂದಿದ್ದಾರಲ್ಲ, ಆಗಬೇಕು ಅಲ್ವಾ .ಸಂಪೂರ್ಣವಾಗಿ ಒಳ ಮೀಸಲಾತಿ ಜಾರಿಗೆ ಸಮಿತಿ ಮಾಡಿದ್ದೀವಿ.ಸವಲತ್ತುಗಳನ್ನು ಕೊಡ್ತಾ ಇದ್ದೀವಿ, ಕಾಲ ನಿಗದಿ ಮಾಡಿದ್ದೀವಿ ಎಂದರು.
ಬಿಜೆಪಿ, ಆರ್ ಎಸ್ ಎಸ್ ಕೆಲವರು ಎತ್ತಿ ಕಟ್ಟಿ ರಾಜಕೀಯ ಮಾಡೋಕೆ ಇದು ಸರಿಯಲ್ಲ. ಬಿಜೆಪಿಯಲ್ಲಿನ ಸಚಿವರು ಯಾರೂ ಉಸಿರು ಬಿಡ್ತಾ ಇರಲಿಲ್ಲ.ಈಗ ಇದ್ದಕ್ಕಿದ್ದಂತೆ ಶೂರರಾಗಿಬಿಟ್ಟಿದ್ದಾರೆ. ನಾರಾಯಣಸ್ವಾಮಿ ಕೇಂದ್ರ ಒಳ ಮೀಸಲಾತಿ ಕೊಡೋಕೆ ಆಗ್ತಿಲ್ಲ ಅಂತ ಪಾರ್ಲಿಮೆಂಟ್ ನಲ್ಲಿ ಹೇಳಿಕೆ ಕೊಟ್ರು. ಕಾರಜೋಳ ಸದಾಶಿವ ವರದಿ ಕ್ಲೋಸ್ ಅಂತ ಹೇಳಿದ್ರು. ಯಾರು ಮಾತನಾಡದೆಯೇ ಇದ್ದಕ್ಕಿದ್ದ ಹಾಗೇ ಶೂರತನ ಬಂದಿದ್ಯಲ್ಲ. ನಾವು ನಿಮ್ಮ ಜೊತೆಗಿದ್ದೀವಿ, ಸಾಯೋಕೆ ರೆಡಿ ಇದ್ದೀವಿ ಅಂತಿದ್ದಾರೆ. ಬದುಕಿದ್ರೆ ಅಲ್ವಾ ಸಾಯುವ ಪ್ರಯತ್ನ ಮಾಡೋದು. ರಾಜಕೀಯ ಹೇಳಿಕೆ ಸರಿಯಲ್ಲ. ವಸ್ತು ಆಧಾರಿತ ರಾಜಕೀಯ ನಿಲುವುಗಳನ್ನ ಪ್ರದರ್ಶಿಸಬೇಕು, ಯಾವುದೇ ಪಕ್ಷ ಆಗಿರಲಿ.ಸಂವಿಧಾನಕ್ಕೆ ಕೆಲಸ ಮಾಡಬೇಕು, ನಾನು ಹೀಗಿದ್ದರೂ ಕೆಲವರು ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ. ನಮಗೂ ಮಾತನಾಡಲು ಬರುತ್ತೆ, ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿಕೊಟ್ಟಿಲ್ಲ. ಅಂಬೇಡ್ಕರ್ ನ ತುಂಬಾ ಅವಮಾನಿಸಿದ್ರು ಎಂದ್ರು.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಧಾರ್ಮಿಕ ಆಚರಣೆಗೆ ಮುಕ್ತ ಅವಕಾಶ ಇರುವುದಕ್ಕೆ ಈ ರೀತಿ ಮಾಡಬಾರದು. ಅಂಬೇಡ್ಕರ್ ಏನು ಹೇಳಿದ್ದಾರೆ? I love Brahmin, I hate Brahmanism. ಅಂಬೇಡ್ಕರ್ ಯಾವ ದಾರಿಯಲ್ಲಿ ನಡೆದಿದ್ದಾರೆ ಅದೇ ದೇಶಕ್ಕೆ ಮಾರ್ಗದರ್ಶನ.ಅವರು ದೇಶಕ 140 ಕೋಟಿ ಜನರಿಗೆ ಸದೃಢ ಭಾರತ ಕಟ್ಟಲು ಮಾರ್ಗಗಳನ್ನ ಕೊಟ್ಟಿದ್ದಾರೆ, ಆ ರೀತಿ ನಡೆಯಬೇಕು ಎಂದರು.