ಮನೆ Latest News ವಕ್ಪ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ನಡೆದಿದ್ರೆ ಜೀವಾವಧಿ ಶಿಕ್ಷೆ ತನ್ನಿ : ಮಾಜಿ‌ ಸಚಿವ ಸಿ.ಎಂ...

ವಕ್ಪ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ನಡೆದಿದ್ರೆ ಜೀವಾವಧಿ ಶಿಕ್ಷೆ ತನ್ನಿ : ಮಾಜಿ‌ ಸಚಿವ ಸಿ.ಎಂ ಇಬ್ರಾಹಿಂ ಹೇಳಿಕೆ

0

ಬೆಂಗಳೂರು; ವಕ್ಪ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ನಡೆದಿದ್ರೆ ಜೀವಾವಧಿ ಶಿಕ್ಷೆ ತನ್ನಿ ಎಂದು ಮಾಜಿ‌ ಸಚಿವ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಭಾರತ ಸರ್ಕಾರ ತಂದ ವಕ್ಫ್ ಕಾಯ್ದೆ ಇಡೀ ದೇಶದ ತುಂಬ ವಿರೋಧ ಇದ್ರೂ ಕಾಯ್ದೆ ತಂದಿದ್ದಾರೆ. ಯಾವುದೇ ಕಾಯ್ದೆ ತಂದರೂ ಜನರ ಪರ ಇರಬೇಕು.ಜನರ ವಿರೋಧಿ ಇರಬಾರದು, ಇದೇ ರೀತಿ ರೈತರ ವಿರೋಧಿ ನೀತಿ ಮಾಡಿದ್ರು. ಪ್ರಧಾನಿ ಮಂತ್ರಿಗಳಿಗೆ ಬುದ್ದಿವಂತರು, ಕಾನೂನು ತಜ್ಞರು ಅಸಂವಿಧಾನಿಕ ಅಂತ. ವಕ್ಫ್ ಅನ್ನೋದು ಸಮಾಜ, ಧರ್ಮಕ್ಕೆ ಸೀಮಿತವಾದದ್ದು, ದಾನ ಮಾಡಿರುವಂತದ್ದು.ದಾನಿಯ ಹಕ್ಕು ಮಟ್ಟಗೋಲು ಹಾಕಿಕೊಳ್ಳಬಾರದು. ಅನ್ಯ ಧರ್ಮದ ಸದಸ್ಯರನ್ನ ಹಾಕಬಾರದು. ಉಡುಪಿಗೆ ಮುಸಲ್ಮಾನರನ್ನ ಹಾಕ್ತೀರಾ?. ತಿರುಪತಿಗೆ ಮುಸಲ್ಮಾನರನ್ನ ಹಾಕ್ತೀರಾ?. ಅದು ಮುಜರಾಯಿಗೆ ಬರಲ್ವಾ? ನಿನ್ನೆ ಸುಪ್ರೀಂ ಕೋರ್ಟ್ ಮೂಲಭೂತ ಪ್ರಶ್ನೆ ಎತ್ತಿದೆ. ನ್ಯಾಯಾಂಗ ಜೀವಂತವಾಗಿದೆ ಅದಕ್ಕೆ ನಿನ್ನೆ ಸುಪ್ರೀಂ ತೀರ್ಪು ಉದಾಹರಣೆ ಎಂದಿದ್ದಾರೆ.

ದಯವಿಟ್ಟು ಕಾನೂನು ಜನಹಿತಕ್ಕೆ ತನ್ನಿ . ಭ್ರಷ್ಟಾಚಾರ ವಕ್ಪ್ ಬೋರ್ಡ್ ನಲ್ಲಿ ನಡೆದಿದ್ರೆ ಜೀವಾವಧಿ ಶಿಕ್ಷೆ ತನ್ನಿ. ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ಳಿ, ಇದಕ್ಕೆ ವಿರೋಧ ಇಲ್ಲ. ಸಂವಿಧಾನಕ್ಕೆ ವಿರುದ್ಧವಾದ ಕಾಯ್ದೆ ಭಾರತದಲ್ಲಿ ಕಾನೂನಾಗಿ ನಿಲ್ಲಲು‌ ಸಾಧ್ಯವಿಲ್ಲ. ನೀವು ಹೆಚ್ಚು ಜನ ಇರ್ತೀರಿ‌‌ಅಂತ ಪಾರ್ಲಿಮೆಂಟ್ ನಲ್ಲಿ ಜಾರಿ ಮಾಡಬಹುದು. ನೀವು ಎಷ್ಟು ದಿನ ಇರ್ತೀರಿ. ಅನ್ವರ್ ಮಾಣಿಪ್ಪಾಡಿ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಿದೆ. ಅವರು ಕೋರ್ಟ್ ಗೆ ಬರಲಿಲ್ಲ. ಕೇಂದ್ರ ವಿಚಾರಣೆ ಮಾಡಲಿ. ಇಲ್ಲ‌ ಅಂದ್ರೆ ಸಿಬಿಐಗೆ ವಹಿಸಿ. 1976 ರಲ್ಲಿ ಈ ಖಾತೆಯ ಮಂತ್ರಿಯನ್ನಾಗಿ ಮಾಡಿಸಿಕೊಂಡ್ರು ಅಂದ್ರು. ಆಗ ನಾನು ಎಮರ್ಜನ್ಸಿ ವಿಚಾರವಾಗಿ ಜೈಲಿನಲ್ಲಿದ್ದೆ. ಆಪಾದನೆ ಕುರಿತು ನಾನು ವಕ್ಫ್ ಬೋರ್ಡ್ ಗೆ ಪತ್ರ ಬರೆದೆ. ಯಾವುದೇ ವಿವಾದ ಇದರಲ್ಲಿ ಇಲ್ಲ. ಯಾವುದೇ ವಕ್ಫ್ ಆಸ್ತಿ ನಾನು ತೆಗೆದುಕೊಂಡಿಲ್ಲ. ಬಾಡಿಗೆ ತೆಗೆದು ಬಳಿಕ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದರು.

ಕೂಡಲೇ ಸಿಬಿಐ ವಿಚಾರಣೆ ಮಾಡಿ. ಇಲ್ಲವಾದ್ರೆ ನಾನು ಮತ್ತೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ.ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಸಾರ್ವಜನಿಕರ ಗಮನಕ್ಕೆ ತರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೋ ಒಂದು ಸರ್ಕಾರ ತನಿಖೆ ಆಗಲಿ.ದಯವಿಟ್ಟು ಸಿಬಿಐ ವಿಚಾರಣೆ ಮಾಡಿ. ಮೂಡಾ ಸಿಬಿಐ ಮಾಡ್ತಾ ಇದ್ದೀರಿ. ಇದರಲ್ಲೂ ಸಿಬಿಐ ಮಾಡಿಸಿ.ಅನ್ ಫಿಟ್ ಇರುವ ಕಡೆ ಮಾಡ್ತಿದ್ದೀರಿ. ಫಿಟ್ ಇರುವ ಕಡೆ ಮಾಡೋಕೆ ಹೊಗುತ್ತಿಲ್ಲ. ವಕ್ಫ್ ಕಾಯ್ದೆ ಜಾರಿಯಾದ್ರೆ ಭಯ ಇದ್ಯಾ. ಬಿಜೆಪಿ ಮುಸಲ್ಮಾನರ ಬಳಿ ಬಿಜೆಪಿ ಮೂಲಕ ಹೇಳಿಸುತ್ತಿದ್ದಾರೆ. ಹಿಂದೂ ದೇವಸ್ಥಾನಕ್ಕೆ ಮುಸಲ್ಮಾನರನ್ನ ಹಾಕ್ತಾರಾ?. ಸಂವಿಧಾನ ಗೌರವಿಸುವ ಸರ್ಕಾರ ಬಂದ್ರೆ ಈ ಕಾಯ್ದೆ ಇರಲ್ಲ. ಮೋದಿ ಇರುವವರೆಗೆ ಮಾತ್ರ ಈ ಕಾಯ್ದೆ. ನನ್ನ ಜಾಗವನ್ನ ನಾನು ವಕ್ಫ್ ಮಾಡಿದ್ದೀನಿ ಎಂದರು.

ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿ ಪಂಚರ್ ವಾಲಾ, ಬಡವರು ಅಂತ ಮೋದಿ ಮೊನ್ನೆ ಹೇಳಿದ್ರು. ಬಡವರ ಬಗ್ಗೆ ಯಾಕೆ ಇವರಿಗೆ ಆಗಲ್ಲ. ಕೆಳ ಹಂತದರಿಗೆ ಮೀಸಲಾತಿ ಸಿಗುತ್ತೆ. ಈ ಹಿಂದೆ ದಲಿತರಿಗೂ ಮಾಡಿದ್ದಾರೆ. ಕೂಲಿ ಮಾಡುವವರು, ಪಂಚರ್ ಹಾಕುವವರು ಅಂತ ಬಿಜೆಪಿಯವರೇ ಟೀಕೆ ಮಾಡಿದ್ರು. ಈಗ ಕಾಂಟ್ರ್ಯಾಕ್ಟರ್ ಅಂತ ಅಪ್ಡೇಟ್ ಆಗುತ್ತಿದ್ದೇವೆ. ಮುಸ್ಲಿಂರು 75 ಲಕ್ಷ ಅಲ್ಲ , 1 ಕೋಟಿ ಇದ್ದಾರೆ. ಉಪ ಪಂಗಡ ಇಲ್ಲ, ಕಸುಬುಗಳು ಇರಬಹುದು.

ಜನಸಂಖ್ಯೆ ಗೊತ್ತಾದರೆ ಯಾಕೆ ಕೆಡಿಸಿಕೊಳ್ಳಬೇಕು?.ನಾವೇ ನಂಬರ್ ಜಾತಿ ಇದ್ದರೂ ಅಸೆಂಬ್ಲಿನಲ್ಲಿ 7-8 ನಾತ್ರ ಇರೋದು ಅಲ್ವಾ ?. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಯಾವುದೇ ಕಾನೂನು ಮಾಡಿ‌ ಸಾಧಕ ಬಾಧಕ ನೋಡಿ ಮಾಡ್ಬೇಕು. ಕಾಂಗ್ರೆಸ್ ಪಕ್ಷದ ನಿಲುವೇ ಅದು. ಜನಸಂಖ್ಯೆ ಎಷ್ಟಿದೆ ಅಂತ ವರದಿ ಮಾಡಿದ್ದಾರೆ ಇದು ತಪ್ಪಾ?ಎಂದ ಅವರು ಪ್ರಬಲ ಸಮುದಾಯಗಳ ವಿರೋಧ ವಿಚಾರದ ಬಗ್ಗೆ ಮಾತನಾಡಿ ಸಾಬ್ರು ವಿರೋಧ ಮಾಡ್ತಾ ಇದ್ದೀರಾ?.ವಿಧಾನಸೌಧದ ಕೇಳಿದ್ವಾ?. ಜಾಸ್ತಿ ಇರುವವರು ಕೇಳಲಿ ಬಿಡಿ. ನನಗೆ 9 ಜನ ಮಕ್ಕಳಿದ್ದಾರೆ. ಅವರಿಗೆ 9 ಜನ ಮಕ್ಕಳಿದ್ದಾರೆ ಅಂತ ಕೇಳಿದ್ರೆ ಹೇಗೆ?.ಯಾರೂ ಪಾಕಿಸ್ತಾನಕ್ಕೆ ಹೋಗಿಲ್ಲ. ಅಬ್ದುಲ್ ಕಲಾಂ ಇಲ್ಲೇ ಹುಟ್ಟಿದ್ದು, ತಮಿಳುನಾಡಿನಲ್ಲಿ. ವರದಿಯನ್ನ ಸ್ವಾಗತ ಮಾಡಿದ್ದೇವೆ.ಒಕ್ಕಲಿಗ, ಲಿಂಗಾಯತರೇ ಸರ್ವೇ ಮಾಡಿ ಸರ್ಕಾರಕ್ಕೆ ಕೊಡಲಿ ಬಿಡಿ ಎಂದರು.