ಮನೆ Latest News ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಸಚಿವ ಮಧು ಬಂಗಾರಪ್ಪ

ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಸಚಿವ ಮಧು ಬಂಗಾರಪ್ಪ

0

ಬೆಂಗಳೂರು; ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಸಚಿವ ಮಧು ಬಂಗಾರಪ್ಪ ಭೇಟಿ ಮಾಡಿದರು. ಸದಾಶಿವನಗರದ ಗೃಹ ಸಚಿವರ ನಿವಾಸದಲ್ಲಿ ಭೇಟಿಯಾದರು.

ಗೃಹ ಸಚಿವರ ಬಳಿಕ ಸಚಿವ ಮಧು ಬಂಗಾರಪ್ಪ ಸಿಇಟಿ ಪರೀಕ್ಷೆಗೆ ಜನಿವಾರ ಹಾಕಿದ್ದಕ್ಕೆ ಅವಕಾಶ ನೀಡದ ವಿಚಾರದ ಬಗ್ಗೆ ಮಾತನಾಡಿ ಮಾಧ್ಯಮಗಳಲ್ಲಿ ವಿಚಾರ ಗಮನಿಸಿದ್ದೇನೆ. ಈ ರೀತಿಯ ನಿರ್ದೇಶನ ಕೊಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಈ ರೀತಿ ಮಾಡೋದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ನಡೆದಿದ್ರೆ ನನ್ನ ಇಲಾಖೆ ಅಲ್ಲದಿದ್ದರೂ ನಾನು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿ. ನನ್ನ ಜಿಲ್ಲೆಯಲ್ಲೂ ಈ ಘಟನೆ ಆಗಿರುವುದರಿಂದ ಕ್ರಮ ತೆಗೆದುಕೊಳ್ಳಲು ಹೇಳುತ್ತೇನೆ. ಈ ರೀತಿ ಮಾಡೋದು ಸರಿಯಲ್ಲ. ಮಕ್ಕಳು ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಈ ವಿಚಾರ ಬಹಳ ಸೂಕ್ಷ್ಮ. ಜಾತಿ, ಧರ್ಮಕ್ಕೆ ಗೌರವ ಕೊಡಬೇಕು.ಸಿಇಟಿ ಆಗಿರಲಿ ಯಾವುದೇ ಪರೀಕ್ಷೆ ಆಗಿರಲಿ. ನಮ್ಮ ಸರ್ಕಾರದಲ್ಲಿ ಈ ರೀತಿ ಆಗುತ್ತೆ ಅಂದಾಗ ಅದನ್ನ ಕಠಿಣವಾಗಿ, ತೀಕ್ಷ್ಣವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಯಾಕೆ ಶುರು ಆಯ್ತು, ಯಾರು ಮಾಡಿರೋದು ಅದು ಗಮನಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು ಗಣಿತಶಾಸ್ತ್ರದ ಪರೀಕ್ಷೆಗೆ ಅವಕಾಶ ನೀಡದ ವಿಚಾರದ ಬಗ್ಗೆ ಮಾತನಾಡಿ ನನ್ನ ಇಲಾಖೆಗೆ ಬರುವುದಿಲ್ಲ. ಮಕ್ಕಳ ತಪ್ಪು ಇಲ್ಲ ಅಂದ್ರೆ ಕಷ್ಟ. ಸಂಬಂಧಪಟ್ಟ ಇಲಾಖೆ ಸಚಿವರ ಜೊತೆ ಮಾತನಾಡುತ್ತಾನೆ. ಎಂ.ಸಿ ಸುಧಾಕರ್ ಜೊತೆ ಮಾತನಾಡುತ್ತೇನೆ.ಇಂತಹ ಘಟನೆಗಳನ್ನ ಖಂಡನೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದರು.

ಸಿಇಟಿ ಪರೀಕ್ಷೆಗೆ ಜನಿವಾರ ಹಾಕಿದ್ದಕ್ಕೆ ಪ್ರವೇಶ ನಿರಾಕರಿಸಿದ ಸಿಬ್ಬಂದಿ ಅಥವಾ ಅಧಿಕಾರಿಗಳ ವಿರುದ್ಧ ಕಠಿಣವಾದ ಶಿಕ್ಷೆ ಆಗ್ಬೇಕು. ನಮ್ಮ ದೇಶ, ರಾಜ್ಯದಲ್ಲಿ ಎಲ್ಲದಕ್ಕೂ ಕಾನೂನು ಇದೆ. ಕಾನೂನು ಗೆಲ್ಲಬೇಕು, ಕಾನೂನು ರೀತಿಯಾದ ಕ್ರಮ ಆಗುತ್ತೆ ಎಂದರು.1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆಗೆ ಖಾಸಗಿ ಶಾಲಾ ಒಕ್ಕೂಟ ವಿರೋಧ ವಿಚಾರದ ಬಗ್ಗೆ ಮಾತನಾಡಿ ನಾನು ಎಲ್ಲರಿಗೂ ಉತ್ತರ ಕೊಡುತ್ತಾ ಕೂರಕ್ಕಾಗಲ್ಲ . ಏನು ಸಮಸ್ಯೆ ಇತ್ತೋ ಅದಕ್ಕೆ ನಮ್ಮ ಶಿಕ್ಷಣ ನೀತಿಯನ್ವಯ ತೀರ್ಮಾನ ತಗೊಂಡಿದ್ದೇವೆ. ಒಟ್ಟಾರೆ ಹೆಚ್ಚು ಜನಕ್ಕೆ ತೊಂದರೆ ಆಗದಂತೆ ಕ್ರಮ ತಗೊಂಡಿದ್ದೇವೆ ಎಂದರು.

ಕ್ಯಾಬಿನೆಟ್ ನಲ್ಲಿ ಜಾತಿಗಣತಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಜಾತಿ ಜನಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಏನು ಚರ್ಚೆ ಆಯ್ತು ಅಂತ ನಾನು ಮಾತಾಡಲ್ಲ. ಸಿಎಂ ಏನು ಸೂಚನೆ ಕೊಟ್ಟಿದ್ದಾರೆ, ನಮಗೇನು ಸ್ವಾತಂತ್ರ್ಯ ಇದೆ ಅಂತ ಚರ್ಚೆ ಬೇಡ ಎಂದ್ರು. ಜಾತಿ ಜನಗಣತಿಯ ವರದಿ ಬಗ್ಗೆ ಕುಮಾರಸ್ವಾಮಿ ಟೀಕೆ ವಿಚಾರದ ಬಗ್ಗೆ ಮಾತನಾಡಿ  ಈ ಸರ್ಕಾರ ಕುಮಾರಸ್ವಾಮಿ ಅವರದ್ದಲ್ಲ, ಈ ಸರ್ಕಾರ ನಮ್ಮದು. ನಮ್ಮ ಸರ್ಕಾರ ಜನರಿಂದ ಆಯ್ಕೆ ಆಗಿ ಬಂದಿದೆ, ಎಲ್ಲವನ್ನೂ ಹೇಳಿಕೊಂಡು ಕೂರಲು ಆಗಲ್ಲ. ಅವರೂ ಸಿಎಂ ಆಗಿದ್ರು, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ರು. ಅವರ ಅಧಿಕಾರಿಗಳೇ ಸೈನ್ ಮಾಡಿದ್ರು, ಕೆಲವರು ಸೈನೂ ಮಾಡಿಲ್ಲ. ಇದರ ಚರ್ಚೆ ಎಲ್ಲ ಮಾಡ್ಕೊಂಡು ಕೂರಲು ಆಗಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ನ್ಯಾಯ ಕೊಡಬೇಕು, ನ್ಯಾಯಬದ್ಧವಾಗಿ ಸಮಾನತೆ ಸಿಗಬೇಕು. ಆ ಕೆಲಸ ನಮ್ಮ ಸರ್ಕಾರ ಮಾಡುತ್ತೆ.ನಾವು ಬೇರೆ ಬೇರೆ ಸಮುದಾಯಗಳಿಂದ ಬಂದಿದ್ರೂ ಸಚಿವ ಸಂಪುಟ ಸಭೆಗೆ ಹೋದಾಗ ಒಂದೇ ಸರ್ಕಾರ.ಮಾಹಿತಿಗಳ ಕೊರತೆಯಿಂದ ವಿಪಕ್ಷಗಳು ಆರೋಪ ಮಾಡ್ತವೆ ಎಂದು ತಿಳಿಸಿದರು.