ಮನೆ Latest News ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0

ಬೆಂಗಳೂರು; ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ದಲ್ಲಿ ಸಿಎಂ ಸಿದ್ದರಾಮಯ್ಯ, ಹೆಚ್ ಸಿ ಮಹಾದೇವಪ್ಪ, ಆಂಜನೇಯ ಡಿಸಿಎಂ ಡಿಕೆ ಶಿವಕುಮಾರ್, ಹೊರಟ್ಟಿ, ಕೆ ಹಚ್ ಮುನಿಯಪ್ಪ, ಸಲೀಂ ಅಹ್ಮದ್ ಭಾಗಿಯಾಗಿದ್ದರು..

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಹೆಚ್ ಸಿ ಮಹಾದೇವಪ್ಪ ೧೪೦ ಕೋಟಿ ಹಕ್ಕನ್ನ ರಕ್ಷಣೆ ಕಾಡುವ ಸಂವಿಧಾನ ಅಂಬೇಡ್ಕರ್ ಅವರು ವಹಿಸಿಕೊಟ್ಟಿದ್ದಾರೆ. ಸಂವಿಧಾನ ದಲ್ಲಿ ಯಾವುದೇ ಧರ್ಮವನ್ನ ಉಲ್ಲೇಖ‌ ಮಾಡಿಲ್ಲ.ಭಾರತದ ಎಲ್ಲಾ ಜನರನ್ನ ಸಂವಿಧಾನ ಒಗ್ಗೂಡಿಸಿ ಕರೆದುಕೊಂಡು ಹೋಗ್ತಿದೆ. ಇಂತಹ ಸಂವಿಧಾನ ೭೫ ವರ್ಷ ಪೂರೈಸಿದೆ.ಆದ್ರೆ ದೇಶದಲ್ಲಿ ಜಾತಿಯತೆ , ಧರ್ಮದ ಹೋರಾಟಗಳು, ದ್ವೇಷ ಪೂರಿತ ಕೆಲಸ ಗಳು ಆಗ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಕೊಟ್ಟಿದ್ದಾರೆ. ಸಂವಿಧಾನ ಆಶಯಕ್ಕೆ ಪೂರಕವಾದ ಗ್ಯಾರಂಟಿ ಕೊಟ್ಟಿದ್ದಾರೆ. ಆರ್ ಎಸ್ ಎಸ್ ಹುಟ್ಟಿ ನಿಂದ ಮನುಸ್ಮೃತಿ ಯ ಆಚರಣೆ ಶುರುವಾಗಿದೆ.ಜೈ ಬೀಮ್‌ ಜೈ ಸಂವಿಧಾನ ಅಂತ ಕಾರ್ಯಕ್ರಮ ಮಾಡಿದ್ದೇವೆ.ಮತ್ತೊಂದು ಚಳುವಳಿ ಮಾಡುವ ಅವಶ್ಯಕತೆ ಇದೆ ಎಂದ್ರು.

ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಮಾತನಾಡಿ ಬಿಜೆಪಿ ಯವರು ಪ್ರತಿ ವಿಷಯವನ್ನೂ ಕೂಡ ಗೊಂದಲ ಮಾಡ್ತಿದ್ದಾರೆ. ೧೯೯೪ ರಿಂದ ಕರ್ನಾಟಕದಲ್ಲಿ ಮೀಸಲಾತಿ ಇದೆ . ೨೦೧೫ ರಲ್ಲಿ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೇವೆ ಆಗ ಎಸ್.ಸಿ ಎಸ್.ಟಿ ಗೆ ಮಾತ್ರ ಇತ್ತು.ಇದನ್ನೇ ಮಸ್ಲೀಮರಿಗೆ ವಿಸ್ತರಣೆ ಮಾಡಲಾಗಿದೆ. ಕೇವಲ ಮೋದಿ ಹಾಗೂ ಬಿಜೆಪಿ ಗೊಂದಲ ಕ್ರಿಯೇಟ್ ಮಾಡ್ತಿದ್ದಾರೆ ಎಂದ್ರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯ ಸರ್ಕಾರ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ.ಇವತ್ತು ಸಂವಿಧಾನಕ್ಕೆ ಆತ್ಮ ನೀಡಿದ ಪರಮಾತ್ಮನಿಗೆ ಗೌರವ ನೀಡೋ ಕೆಲಸ ಮಾಡುತ್ತಿದ್ದೇವೆ. ನಾವು ಅಂಬೇಡ್ಕರ್ ಪ್ರತಿಮೆಗೆ ಪೂಜೆ ಮಾಡ್ತಿಲ್ಲ, ಬದಲಾಗಿದೆ ಅವರ ಪ್ರತಿಭೆಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದೇವೆ. ಅನೇಕ ವಿಚಾರಕ್ಕೆ ರಕ್ಷಣೆ ನೀಡಿದಂತಹ ಸಂವಿಧಾನಕ್ಕೆ ಪೂಜೆ ಸಲ್ಲಿಸುತ್ತಿದ್ದೇವೆ.ದೇಶದ ಕಟ್ಟಿದ ನಿಜವಾದ ಮಗ,  ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಿದ್ದೇವೆ ಎಂದ್ರು.ವಿಚಾರಧಾರೆಗಳಿಗೆ ರಕ್ಷಣೆ ಮಾಡುತ್ತಲೇ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆ ಕೋಟಿ ಕೋಟಿ ಹಣ ನೀಡಿದ್ದೇವೆ.ಆದ್ರೆ ಅವರದ್ದು ಬರೀ ಮಾತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಎಕರೆ ಕೂಡ ನೀಡಲಿಲ್ಲ.ಅಂಬೇಡ್ಕರ್ ಅಚಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದ್ರು.

ಬೆಂಗಳೂರಿನಲ್ಲಿ ಹೊಸ ಪುತ್ಥಳಿ ಉದ್ಘಾಟನೆ ಆಗುತ್ತಿದೆ. ನಾನು ಹೀಗಾಗಿ ಹೆಚ್ಚಿಗೆ ಮಾತಾಡಲ್ಲ. ಭಾರತದ ಸಂವಿಧಾನದ ಆತ್ಮ ಕೊಟ್ಟ ಪರಮಾತ್ಮನ ಜನ್ಮ ದಿನಾಚರಣೆ ಮಾಡ್ತಿದ್ದೇವೆ. ಇಡೀ ದೇಶ ಜನರಿಗೆ ರಕ್ಷಣೆ ಕೊಟ್ಟವರು ಅಂಬೇಡ್ಕರ್. ಮುಸ್ಲಿ, ಖುರಾನ್, ಕ್ರಿಶ್ಚಿಯನ್ ಬೈಬಲ್ ಹೇಗೆ ನಂಬ್ತಾರೆ. ಹಾಗೇ ದೇಶಕ್ಕೆ ಸಂವಿಧಾನ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆ ನಮಗೆ ಸಿಕ್ಕಿದೆ.ನಾಲ್ಕು ಅಂಗಗಳು ಬಹಳ ಪ್ರಮುಖವಾಗಿರೋದು.ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾ ರಂಗ ನಮ್ಮ ಜೊತೆಗೆ ಇದೆ. ಮಹದೇವಪ್ಪ ಅವರು ಬಹಳ ಚೆನ್ನಾಗಿ ಭಾಷಣ ಮಾಡಿದ್ರು. ಅವರನ್ನೇ ಎಲ್ಲ ಕಡೆ ಕಳಿಸಬೇಕು. ಅವರು ಎಷ್ಟು ಚೆನ್ನಾಗಿ ಭಾಷಣ ಮಾಡಿದ್ರು. ನಾವು ಏನು ಬಿಟ್ಟು ಹೋಗುವುದಿಲ್ಲ. ಧರ್ಮ, ನೀತಿ ಸಂವಿಧಾನದ ರಕ್ಷಣೆಗೆ ನಾವೆಲ್ಲ ಬದ್ಧರಾಗಿದ್ದೇವೆ.ಇಡೀ ನಮ್ಮ ಸರ್ಕಾರ ಅಂಬೇಡ್ಕರ್ ವಿಚಾರಧಾರೆಯ ರಕ್ಷಣೆಗಿದೆ. ಜನಸಂಖ್ಯೆ ಆಧಾರದ ಮೇಲೆ ನಾವು ತೀರ್ಪು ತಂದುಕೊಂಡಿದ್ದೇವೆ. ಅದು ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾಡಿದ್ದೇವೆ. ಬಿಜೆಪಿ ಕಾಲದಲ್ಲಿ ಕೇವಲ ಮಾತು, ಅವರು ಲೀಪ್ ಸಿಂಕ್ ಮಾಡ್ತಿದ್ದರು.ಒಂದೇ ಒಂದು ಎಕರೆ ಜಮೀನು ಕೊಟ್ಟಿಲ್ಲ. ಫಾರೆಸ್ಟ್ ಗಳಲ್ಲಿ ಇದ್ದವರನ್ನ ಬಿಜೆಪಿಯವರು ಒಕ್ಕೆಲೆಬ್ಬಿಸಿದರು. ಆದ್ರೆ ಸಿಎಂ ಸಿದ್ದರಾಮಯ್ಯ ಅಂತಹವರಿಗೆ ಹಕ್ಕು ಪತ್ರ ಕೊಡುವ ಕೆಲಸ ಮಾಡಿದ್ರು. ಮನಮೋಹನ್ ಸಿಂಗ್ ಹೊಸ ಕಾನೂನು ತಂದರು. ನಾವು ಜನರ ಬದುಕು ರಕ್ಷಣೆಗೆ ಇದ್ದೇವೆ.ನಿಮ್ಮ ಪರವಾಗಿ ನಾವಿದ್ದೇವೆ, ನಿಮ್ಮ ಬದುಕು ಬದಲಾವಣೆಗೆ ನಾವು ಬದ್ಧರಿದ್ದೇವೆ ಎಂದ್ರು.

ಕರ್ನಾಟಕ ಸರ್ಕಾರದ ವಿರುದ್ದ  ಪ್ರಧಾನಿ ಮೋದಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಗೊತ್ತಿಲ್ಲ.ನಾನು ಆ‌ ಮೇಲೆ ಮಾತನಾಡುತ್ತೇನೆ ಎಂದಷ್ಟೇ ಹೇಳಿದ್ರು.