ಬೆಂಗಳೂರು; ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ಮಾಡಲಾಯಿತು. ಮಾಜಿ ಸಿಎಂ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಡಿವಿಎಸ್, ಶಾಸಕ ಅಶ್ವಥ ನಾರಾಯಣ, ಎಂಎಲ್‌ಸಿ ಭಾರತಿ ಶೆಟ್ಟಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ ಮೋಹನ್, ಶಾಸಕ ಡಾ.ಸಿ.ಎನ್ ಅಶ್ವಥ ನಾರಾಯಣ, ಸಿ.ಟಿ ರವಿ ಉಪಸ್ಥಿತರಿದ್ದರು.
ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ ದೇಶಕ್ಕೆ ಪವಿತ್ರ ದಿನ. ಸ್ವಾತಂತ್ರ್ಯ ದಿನ ಭಾರತ್ ಮಾತಾಕೀ ಜೈ ಎಂದು ತಲೆ ಹೊಡ್ಡಿದ್ರು ಅವರೆಲ್ಲ ಸಂತೋಷದ ದಿನ. ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಉದಯಕ್ಕೂ ಮೊದಲ ಕಾಲ ಯೋಚಿಸಬೇಕು. ಗಾಂಧೀಜಿ ಅಹಿಂಸಾ ಹೋರಾಟದ ಜೊತೆ ನೂರಾರು ಯುವಕರು ಸಾವನ್ನಪ್ಪಿದ್ದರು. 80ನೇ ಇಸವಿಯಲ್ಲಿ ಏ.6ರಂದು ಪಾರ್ಟಿ ಉದಯವಾಯ್ತು. ಅಧಿಕಾರ ಬಿಟ್ಟು ಪಕ್ಷ ಕಟ್ಟಿದವರು ಶಾಂ ಪ್ರಕಾಶ್ ಮುಖರ್ಜಿ. ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕಬೇಕು ಎಂದರು.
ದೇಶದಲ್ಲಿ ಆಡಳಿತ ಮಾಡುವ ಆಡಳಿತ ದಾಸ್ಯ ಎಲ್ಲಾ ಗುರುಗು ಅಳಿಸಿ ಹಾಕ್ಬೇಕು. ನೆಹರು ಕುಟುಂಬದ ಯಾರಿಗೂ ದಾಸ್ಯದ ಗುರುತು ಬಿಟ್ಟು ಆಳಲು ಆಗಲಿಲ್ಲ. ಭವಿಷ್ಯದ ಬಗ್ಗೆ ನಾವು ಚಿಂತನೆ ಮಾಡಬೇಕಾದ್ರೆ ಭೂತಕಾಲ, ಭವಿಷ್ಯತ್ ಕಾಲ್ ಬಗ್ಗೆ ಚಿಂತನೆ ಮಾಡಬೇಕು. ವರ್ತಮಾನ ಕಾಲವಂತೂ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ರಾಜನೀತಿ ದೇಶಕ್ಕೆ ಯಶಸ್ವಿ ಕೊಡುವುದಿಲ್ಲ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ದುರುಪಯೋಗ ಪಡಿಸಿಕೂಡರು. ವಾಕ್ ಸ್ವಾತಂತ್ರ್ಯ ಇಲ್ಲ. ಅವರ ವಿರುದ್ಧ ಮಾತಾಡಿದವರನ್ನ ಜೈಲಿಗೆ ಕಳುಹಿಸಿದ್ರು. ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಸಂಘ ಮತ್ತು ಆರ್ ಎಸ್ ಎಸ್.ಅಧಿಕಾರ ಬಿಟ್ಟು ನಾವು ಪಕ್ಷ ಸ್ಥಾಪನೆ ಮಾಡಿದ್ದೇವೆ.11 ವರ್ಷದ ಮೋದಿ ಆಡಳಿತ ಸ್ಪಷ್ಟವಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.
ಮೂದಲ್ ಲಾಲ್ ಹೇಗೆ ಬಲಿದಾನ ಆದ್ರು. ಅವನ್ನ ನೇಣುಗಂಭಕ್ಕೆ ಏರಿಸುವಾಗ ಅವರ ತಾಯಿ ಕಣ್ಣೀರು ಹಾಕಿದ್ರು. ಕೊನೆಗಳಿಗೆಯಲ್ಲಿ ದೇಶಕ್ಕೆ ಬಲಿದಾನವಾಗುವ ಶಕ್ತಿ ಕೂಡಿ ಅಂತ ಅವರ ತಾಯಿಯ ಬಳಿ ಕೇಳಿಕೊಂಡರು. ಆರ್ಥಿಕ ದಿಗ್ಭಂದನ ಎದುರಿಸಿದ್ದೇವೆ.ಯಶಸ್ವಿ ರಾಷ್ಟ್ರಗಳಲ್ಲಿ ಈಗ ಭಾರತವೂ ಒಂದು. ದೇಶ ಪ್ರಥಮ ಅನ್ನೋದು ಮೂಲ ಪದ. ರಾಜಕಾರಣದಲ್ಲಿ ಅಧಿಕಾರ ಇದ್ದರೆ ಸೇವೆ ಮಾಡಬಹುದು. ತುಷ್ಟೀಕರಣ ರಾಜನೀತಿ, ಸಮಾಜ ಹೊಡೆಯುವ ಕೆಲಸ ಮಾಡಬಾರದು ಅಂತ ಅಟಲ್ ಜೀ ಹೇಳಿದ್ರು. ಮಿತಿ ಮೀರಿದ ಭ್ರಷ್ಟಾಚಾರ ಕೊನೆಗಾಣಿಸಬೇಕು. ಪರಿವರ್ತನೆ ಅನ್ನೋದು ಸ್ವಾತಂತ್ರ್ಯ ಮಾಡಿದ ಕೀರ್ತಿ ಬಿಜೆಪಿ ಸಲ್ಲುತ್ತದೆ. ದೇಶ ಭಕ್ತಿ ಪ್ರೀತಿಯ ಮಾತಲ್ಲ, ಕೇವಲ ಮಾತಿನಲ್ಲಿ ಹೇಳುವುದಲ್ಲ.ಭಾರತ್ ಮಾತಾಕೀ ಜೈ ಅಂತ ನೇಣುಗಂಭಕ್ಕೆ ಏರುವಾಗ ಹೇಳುವುದು ಮುಖ್ಯ ಎಂದ್ರು..
ಯಾರ್ಯಾರು ಏನೇನೂ ಮಾತನಾಡುತ್ತಾರೆ ಅದಕ್ಕೆ ಉತ್ತರ ಕೊಡಬಾರದು. 4 ಗೋಡೆಯ ಮಧ್ಯೆ ಪಕ್ಷದ ವಿಚಾರ ಚರ್ಚೆ ಆಗ್ಬೇಕು. ಮಾಧ್ಯಮಗಳ ಮುಂದೆ ಮಾತನಾಡಬಾರದು, ಮಾಧ್ಯಮಗಳಿಗೆ ಆಹಾರವಾಗಬೇಡಿ.ಇಂತ ಭ್ರಷ್ಟಾಚಾರ ಸರ್ಕಾರ ನಾನು ಯಾವತ್ತೂ ನೊಡಿರಲಿಲ್ಲ. ಅಶಿಸ್ತಿನಿಂದ ಕಾಂಗ್ರೆಸ್ ಒಡಕಾಗಿದೆ.ಕರ್ನಾಟಕ ಇಶ್ಯುಗಳಿಗೇನು ತೊಂದರೆ ಇಲ್ಲ ಎಂದ್ರು.