ಮನೆ Latest News ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ; ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ

ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ; ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ

0

ಬೆಂಗಳೂರು; ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ  ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು. ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ‌ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸುನೀಲ್ ಕುಮಾರ್, ಬೈರತಿ ಬಸವರಾಜ್, ಸಿಸಿ ಪಾಟೀಲ್, ಜನಾರ್ದನ್ ರೆಡ್ಡಿ, ರಾಮಮೂರ್ತಿ, ಪರಿಷತ್ ಸದಸ್ಯ ಸಿಟಿ ರವಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅರಗ ಜ್ಞಾನೇಂದ್ರ ಸ್ಪೀಕರ್ ಗೆ ಶಾಸಕ ಸ್ಥಾನದಿಂದ ಕಿತ್ತು ಹಾಕುವ ಅಧಿಕಾರ ಇದೆ ಅಂತ ಸಭಾಧ್ಯಕ್ಷರು ಹೇಳ್ತಾರೆ. ಕುರುಡನ ಕೈಗೆ ದೊಣ್ಣೆ ಸಿಗುವಂತಾಗಬಾರದು. ಪ್ರಜಾಪ್ರಭುತ್ವದಲ್ಲಿ ಹೋರಾಟ ಇರುವಂತದ್ದೆ. ಸ್ಪೀಕರ್ ನ ಎಳೆದು ಹಾಕಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಇತಿಹಾಸ ಇದೆ. ಸ್ಪೀಕರ್ ಆಗಿ ಕುರ್ಚಿಯಲ್ಲಿ ಕುಳಿತ ಮೇಲೆ ಅವರ ಪಕ್ಷಕ್ಕೆ ರಾಜೀನಾಮೆ ಕೊಡ್ಬೇಕು. ಸ್ಪೀಕರ್ ನಡವಳಿಕೆ ನೋಡಿದ್ರೆ ಅವರು ಕಾಂಗ್ರೆಸ್ ಬಿಟ್ಟಂತಿಲ್ಲ. ಸಿಎಂ ಹೇಳಿರುವ ನಿರ್ಣಯ ಬರೆದು ಕೊಟ್ಟಿದ್ದಾರೆ. ಇದು ಕರಾಳ ಸಂದರ್ಭ, ಪ್ರಜಾತಂತ್ರ ವಿರೋಧ ನೀತಿಯನ್ನ ಸ್ಪೀಕರ್ ಕೈಗೊಂಡಿದ್ದಾರೆ ಎಂದರು.

ಹನಿಟ್ರ್ಯಾಪ್ ಪ್ರಕರಣ ಸಚಿವರೊಬ್ಬರು ಹೇಳಿದ್ರು.ದೂರು ಕೊಡಬೇಕು ಅಂತ ಸ್ಪೀಕರ್ ಹೇಳಬೇಕಿತ್ತು. ಧರ್ಮದ ಆಧಾರದ ಮೇಲೆ ಮುಸಲ್ಮಾನರ ಮೀಸಲಾತಿ. ವಿಪಕ್ಷದಲ್ಲಿ ನಾವು ಕೂತು ಏನು ಮಾಡ್ಬೇಕು?. ಸ್ಪೀಕರ್ ಪುನರ್ ಪರಿಶೀಲನೆ ಮಾಡಿ ಅಮಾನತು ಆದೇಶ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದ್ರು.

ಸ್ಪೀಕರ್ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹೀಗೆ ಮಾಡಿದ್ದಾರೆ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು; ಸ್ಪೀಕರ್ ಯು ಟಿ ಖಾದರ್ ಅವರು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು 18 ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ  ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಮಾನತು ಮಾಡಿದ್ರೆ ಅವರ ಶಾಸಕ ಸ್ಥಾನವೇ ಹೋಗಿ ಬಿಡುತ್ತೆ. ನಾವು ಹಿಟ್ಲರ್ ನ ಕೇಳಿದ್ದೀವಿ. ಈಗ ಹಿಟ್ಲರ್ ಅಧ್ಯಕ್ಷರೇ ಕರ್ನಾಟಕಕ್ಕೆ ಸಿಕ್ಕಿರುವುದು ದುರ್ದೈವ. ಖಾದರ್ ಅವರು ಸಭಾಧ್ಯಕ್ಷರಾದ ವೇಳೆ ವೀಡಿಯೋ ಬಿಡುಗಡೆ ಆಗಿತ್ತು. ಮೌಲ್ವಿಗಳು ಮುಸಲ್ಮಾನರು ಸ್ಪೀಕರ್ ಆಗಿರುವುದನ್ನ ಹೇಳಿದ್ರು. ಖಾದರ್ ನಾನು ಯಾವ ಧರ್ಮ, ಜಾತಿಗೆ ಸೇರಿದವನಲ್ಲ, ಈ ರೀತಿ ಆಗಬಾರದು ಅಂತ ಹೇಳಿದ್ದೆ. ಸ್ಪೀಕರ್ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ತಕ್ಷಣ 18 ಶಾಸಕರನ್ನ ಗೌರವಿಸಿ, ಅಮಾನತು ಆದೇಶ ವಾಪಾಸ್ ಪಡೆಯಬೇಕು ಎಂದಿದ್ದಾರೆ.

ಇನ್ನು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ  ಮಾತನಾಡಿ  ಸ್ಪೀಕರ್ ಆಡಳಿತ ಪಕ್ಷದ ಕೈಗೊಂಗಿ ವರ್ತನೆ ಮಾಡುತ್ತಿದ್ದಾರೆ. ಸಂವಿಧಾನ ಬಾಹಿರವಾಗಿ 6 ತಿಂಗಳಗಳ ಷರತ್ತು ವಿಧಿಸಿ ಅಮಾನತು ಮಾಡಿದ್ದಾರೆ. ಈ ಹಿಂದೆ ಎಂದೂ ಸಹ ಹೀಗೆ ನಡೆದಿರಲಿಲ್ಲ. 6 ತಿಂಗಳ ಕಾಲ ಸಸ್ಪೆಂಡ್ ಮಾಡಿ, ವಿಧಾನಸಭೆಯ ಮೊಗಸಾಲೆಗೂ ಬಾರದೆ ಇರದ ರೀತಿ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನ ಖುಷಿ ಪಡಿಸಲು ಸಂವಿಧಾನದ ವಿರೋಧವಾಗಿ ಆದೇಶ ಮಾಡಿದ್ದಾರೆ. ಸ್ಪೀಕರ್ ಹೇಳಿಕೆ ಗಮನಿಸಿದ್ದೇನೆ, ಹಿಂಪಡೆಯುತ್ತೇನೆ ಅಂತ ಹೇಳಿದ್ದಾರೆ. ಆದರೆ ವಿಳಂಬ ಮಾಡುತ್ತಿರುವುದು ಯಾಕೆ?. ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಬಂಡತನ ಪ್ರದರ್ಶನ. ಸಭಾಧ್ಯಕ್ಷರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. 18 ಶಾಸಕರ ಅಮಾನತು ಕೂಡಲೇ ಹಿಂಪಡೆಯಬೇಕು. ನಟವು ಯಾವುದೇ ಕಮಿಟಿ ಸಭೆಗೆ ನಾವು ಭಾಗವಹಿಸುವುದಿಲ್ಲ. ಕಾನೂನುಬಾಹಿರ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.