ಮನೆ Latest News ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ: ಮಾಜಿ ಸಚಿವ ಶಾಸಕ ಗೋಪಾಲಯ್ಯ...

ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ: ಮಾಜಿ ಸಚಿವ ಶಾಸಕ ಗೋಪಾಲಯ್ಯ ಹೇಳಿಕೆ

0

ಬೆಂಗಳೂರು; ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ ಎಂದು ಮಾಜಿ ಸಚಿವ ಶಾಸಕ ಗೋಪಾಲಯ್ಯ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ  ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್ ಕಿಟ್ ವಿತರಿಸಿ ಮಾತನಾಡಿದ ಅವರು 799 ಜನರಿಗೆ ವಿತರಿಸಿದ್ದೇವೆ.ಇದು ಪ್ರಧಾನಿ ಮೋದಿಯವರು ದೇಶದ ಜನರಿಗೆ ಕರೆ ಕೊಟ್ಟಾಗ ಮಂಡ್ಯದ ಉಸ್ತುವಾರಿ ಆಗಿದ್ದೆ.ಅದನ್ನ ಗಮನಿಸಿ ನನ್ನ ಕ್ಷೇತ್ರದಲ್ಲಿ, ನನ್ನ ಟ್ರಸ್ಟ್ ಮೂಲಕ ಕುಟುಂಬದವರು ಮುಖಂಡರು ಸೇರಿ ಕಾರ್ಯಕ್ರಮ ರೂಪಿಸಿದ್ದೇವೆ.799 ಜನ ಕ್ಷಯರೋಗದಿಂದ ಗುಣಮುಖರಾಗಿದ್ದಾರೆ. ಮೋದಿಯವರ ಮನ್ ಕಿ ಬಾತ್ ನಲ್ಲಿ ನನ್ನ ಕ್ಷೇತ್ರದ ಕ್ಷಯ ರೋಗಿಗಳ ಬಗ್ಗೆಯು ಮಾತನಾಡಿದ್ರು. ನನ್ನ ಕ್ಷೇತ್ರದ ಕ್ಷಯರೋಗಿಗಳನ್ನ ಎರಡು ವರ್ಷದ ಒಳಗೆ ಸಂಪೂರ್ಣವಾಗಿ ಗುಣಮುಖವಾಗ್ತಾರೆ.ನನ್ನ ಕ್ಷೇತ್ರದಲ್ಲಿರುವ ರೋಗಿಗಳಿಗೆ ಆಕ್ಸಿಜನ್ ಕೊಡುವ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದ್ರು.

80 ಕೋಟಿ ಜನಕ್ಕೆ5  ಕೆಜಿ ಅಕ್ಕಿಯನ್ನ 2029 ರವರೆಗೆ ನೀಡುವಂತೆ ಯೋಜನೆ ಮೋದಿ ತಂದಿದ್ದಾರೆ.ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಇದೆಲ್ಲವು ಮೋದಿಯವರ ಮನ್ ಕಿ ಬಾತ್ ಪ್ರೇರಣೆ ಎಂದ್ರು,

ಕ್ಷಯ ಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಮನ್ ಕಿ ಬಾತ್ ‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ‌ ಕರೆ ಹಿನ್ನೆಲೆ; ಟಿ.ಬಿ ಸೋಂಕಿತರಿಗೆ ನ್ಯೂಟ್ರಿಷನಲ್ ಕಿಟ್‌ಗಳ ಹಂಚಿಕೆ ಕಾರ್ಯಕ್ರಮ

ಬೆಂಗಳೂರು: ಕ್ಷಯ ಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಮನ್ ಕಿ ಬಾತ್ ‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ‌ ಕರೆ ಕೊಟ್ಟಿರುವ ಹಿನ್ನೆಲೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ  ಟಿ.ಬಿ ಸೋಂಕಿತರಿಗೆ ನ್ಯೂಟ್ರಿಷನಲ್ ಕಿಟ್‌ಗಳ ಹಂಚಿಕೆ ಕಾರ್ಯಕ್ರಮ ನಡೆಯಿತು. ಶಾಸಕ ಕೆ.ಗೋಪಾಲಯ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,

ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಶಾಸಕ ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಮೌನ ವಹಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ದರ ಏರಿಕೆ ಮುಂದುವರೆಸಿದ್ದಾರೆ.ಹಾಲಕನ ದರ, ವಿದ್ಯುತ್ ದರ, ನೋಂದಣಿ ಶುಲ್ಕ ಹೆಚ್ಚಳ ಮಾಡಿದ್ದಾರೆ.ಸರ್ಕಾರದಲ್ಲಿ ಹಣ ಇಲ್ಲ, ಇರುವ ಹಣ ಗ್ಯಾರಂಟಿಗಳಿಗೆ ಕೊಡ್ತಿದ್ದಾರೆ. ರಾಜ್ಯ ಆರ್ಥಿಕ ಕುಸಿತ ಕಾಣ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ.ಸಚಿವರು ಜಿಲ್ಲೆಗಳಿಗೆ ಹೋಗಿ ಸಭೆ ಮಾಡ್ತಿಲ್ಲ.ಜನರನ್ನ ಲೂಟಿ ಮಾಡುವ ಈ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ.ಜನರ ಸಮಸ್ಯೆಗಳಿಗೆ ಕಿವುಡಾಗಿದೆ.ಸರ್ಕಾರದ ಕಿವುಡುತನ‌ ತೆಗೆಯುವ ಕೆಲಸ ಡಾಕ್ಟರ್ ಆಗಿ ನಾವು ಮಾಡ್ತೇವೆ ಎಂದಿದ್ದಾರೆ.

ಮೋದಿ RSS ಕಚೇರಿಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು ಶೋಭಾ ಕರಂದ್ಲಾಜೆ ಇಂದು RSSಗೆ ನೂರು ವರ್ಷವಾಗಿದೆ. ಮೋದಿ ನಿಜವಾಗಿಯೂ RSS . ಅವರೂ ಪ್ರಚಾರಕರಾಗಿದ್ರು. ಹಾಗಾಗಿ ಅವರು ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಅವರು ಹೋಗಿರೋದು ನಮಗೆ ಬಹಳ ಖುಷಿಯಾಗಿದೆ ಎಂದಿದ್ದಾರೆ.