ಮನೆ Blog ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಸಚಿವ ಎಂಬಿ ಪಾಟೀಲ್

ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಸಚಿವ ಎಂಬಿ ಪಾಟೀಲ್

0

ಬೆಂಗಳೂರು: ಸಚಿವ ಎಂಬಿ ಪಾಟೀಲ್ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ರು. ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ ಆಗಿರುವ ಸತೀಶ್ ಜಾರಕಿಹೊಳಿ ಅವರನ್ನು ಎಂ ಬಿ ಪಾಟೀಲ್ ಮಾತನಾಡಿಸಿದ್ರು.

ಭೇಟಿ ಬಳಿಕ ಮಾತನಾಡಿದ ಸಚಿವ  ಸತೀಶ್ ಜಾರಕಿಹೊಳಿ ದೆಹಲಿ ನಾಲ್ಕು ದಿನಗಳ ಭೇಟಿ ಬಹಳಷ್ಟು ಸದ್ದು ಮಾಡಿದೆ.ಬಹಳಷ್ಡು ವ್ಯಾಖ್ಯಾನ ಬೇರೆ ಬೇರೆ ರೀತಿ ಬಂದಿದೆ. ಮುಂಚೆ ನಿಗದಿಯಾಗಿದ್ದ ಕಾರ್ಯಕ್ರಮ ಕೂಡ ಇತ್ತು. ಮೂರು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಪ್ರಹ್ಲಾದ ಜೋಷಿ, ಎಚ್ಡಿಕೆ, ಸೋಮಣ್ಣ ಮೂವರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಯನ್ನು ಭೇಟಿ ಮಾಡಿದ್ದೇನೆ. ಇಲಾಖೆಯಿಂದ ಬೆಳಗಾವಿಗೆ ಉತ್ತರ ಕರ್ನಾಟಕ್ಕೆ ಯೋಜನೆಗಳನ್ನು ಕೊಡುವ ಬಗ್ಗೆ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ.ಇಂಡಸ್ಟ್ರಿ ಸ್ಥಾಪನೆಗೆ ಸಹಕಾರ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಾಗಲಕೋಟೆ ಕುಡಚಿ ರೈಲ್ವೆಗೆ ಸಂಬಂಧಿಸಿ ಸೋಮಣ್ಣ ಭೇಟಿ ಮಾಡಿದ್ದೇನೆ. ಪ್ರಹ್ಲಾದ ಜೋಷಿಯವರನ್ನು ಭೇಟಿ ಮಾಡಿ ವಿಮಾನಯಾನಕ್ಕೆ ಸಂಬಂಧಿಸಿ ಭೇಟಿ ಮಾಡಿದ್ದೇನೆ ಎಂದ್ರು.

ಮಲ್ಲಿಕಾರ್ಜುನ ಖರ್ಗೆ ವೇಣುಗೋಪಾಲ ಸುರ್ಜೆವಾಲಾರನ್ನು ಭೇಟಿ ಮಾಡಿದ್ದೇನೆ. ಎಚ್ ಡಿ ದೇವೇಗೌಡರ ಭೇಟಿ ಆಕಸ್ಮಿಕ ನಿಗದಿತ ಭೇಟಿ ಅಲ್ಲ. ಗಡ್ಕರಿ ಹತ್ರ ಅವರೂ ಹೊರಟಿದ್ದರು, ನಾನು ಜೋಷಿಯವರ ಭೇಟಿಗೆ ಹೊರಟಿದ್ದೆ. ಆಗ ದೇವೇಗೌಡರು ರೇವಣ್ಣ ಸಿಕ್ಕಿದರು ಹಿರಿಯರು ಭೇಟಿ ಮಾಡಿದ್ದೇನೆ. ಹನಿ ಟ್ರ್ಯಾಪ್ ಬಗ್ಗೆ ನಾನು ಹೈಕಮಾಂಡ್ ಗೆ ಮಾಹಿತಿ ಕೊಡೋ ಅವಶ್ಯಕತೆ ಇಲ್ಲ. ಅವರದೇ ಸೋರ್ಸ್ ನಿಂದ ಅವರು ಮಾಹಿತಿ ಪಡೆದುಕೊಳ್ತಾರೆ. ನಾನು ಹೋಗಿ ಅವರು ಇವರ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ. ಬೇರೆ ಪಕ್ಷದ ಸಹಕಾರ ಕೋರಿದ್ದೇನೆ ಎಂಬುದೆಲ್ಲ ಊಹಾಪೋಹಗಳು. ಆಕಸ್ಮಿಕವಾಗಿ ದೇವೇಗೌಡರು ಸಿಕ್ಕಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಮಾಹಿತಿ ಕೊಡೋ ಕೆಲಸ ನಾನು ಮಾಡಿಲ್ಲ. ಸಂಪೂರ್ಣ ಮಾಹಿತಿ ಹೈಕಮಾಂಡ್ ಗೆ ಇದೆ ಎಂದ್ರು.

ನಮ್ಮದೇ ಗಾಡಿ ಫುಲ್ ಇದೆ, ಜೆಡಿಎಸ್ ೧೪ ಜನರನ್ನು ತೆಗೆದುಕೊಂಡು ನಾವೇನು ಮಾಡೋಣ. ಓವರ್ ಲೋಡೆಡ್ ಇದ್ರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಇಲ್ಲಿಯೇ ಅಧ್ಯಕ್ಷ ಆಗಬೇಕು ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ದೇವೆ ಇಲ್ಲಿಯೇ ಕಾಯ್ತೇವೆ ಎಂದ್ರು.ಡಿ ಕೆ ಶಿವಕುಮಾರ್ ಮಾತಾಡುವ ಭರದಲ್ಲಿ ಹೇಳಿದ್ದಾರಷ್ಟೇ. ಸಂವಿಧಾನ ಬದಲಿಸುವ ಅಧಿಕಾರ ನಮಗೆ ಇಲ್ಲವೇ ಇಲ್ಲ.ಬಿಜೆಪಿಯವರು ಪದೇ ಪದೇ ಸ್ಪಷ್ಟವಾಗಿ ಸಂವಿಧಾನ ಬದಲಾವಣೆ ಮಾತಾಡಿದ್ದಾರೆ.ಬಿಜೆಪಿಯವರ ಹೇಳಿಕೆಗಳಿಗೂ ಡಿಕೆಶಿ ಹೇಳಿಕೆಗೂ ಬಹಳ ವ್ಯತ್ಯಾಸ ಇದೆ ಎಂದ್ರು.

ನಾನು ಎಲ್ಲಿಗೇ ಹೋಗುವುದಾದರೂ ಮುಚ್ಚು ಮರೆ ಮಾಡಿಲ್ಲ. ಶಾಸಕರ ಬೆಂಬಲ ಕೋರಲು ಹೋಗಿ  ಫೋಟೋ ಹೊಡಿಸಿಕೊಳ್ಳಬೇಕಾ?. ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನೋಡಿದ್ದೀರಲ್ಲ ಹಾಗೆ ಹೋಗಿಲ್ಲ ನಾನು. ತಲೆ ಮೇಲೆ ಮುಸುಕು ಹಾಕಿಕೊಂಡು ಮೂರು ಜನ ಒಂದೇ ತಟ್ಟೆ ಊಟ ಮಾಡ್ತಾರಲ್ಲ ಹಾಗೆ ಹೋಗಿಲ್ಲ ನಾನು. ನಾನು RAC ಟಿಕೇಟ್ ನಲ್ಲಿ ಇದ್ದೇನೆ. ಇಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿಯೇ ಕಾಯ್ತೇನೆ. ಯಾರಾದ್ರೂ ಮೆಜೆಸ್ಟಿಕ್ ಜಾಂನಲ್ಲಿ ಸಿಕ್ಕಿಹಾಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು. ಎಲ್ರೂ RAC ಟಿಕೇಟ್ ಇಟ್ಟುಕೊಂಡೇ ಕಾಯ್ತಿದ್ದಾರೆ ವ್ಯಂಗ್ಯವಾಡಿದ್ರು.

ರಾಜಣ್ಣ ಹನಿಟ್ರ್ಯಾಪ್ ಕೇಸ್ ಬೇರೆ. ರಾಜೇಂದ್ರ ಕೇಸ್ ಬೇರೆ..ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ರಾಜೇಂದ್ರ ಕೇಸ್ ಸ್ವಲ್ಪ ಹಳೆಯದು, ಎರಡು ತಿಂಗಳ ಮುಂಚೆಯದು. ಅವರಿಗೆ ಯಾರೋ ಕಾಲ್ ಮಾಡಿ ಬೆದರಿಕೆ ಹಾಕ್ತಿದ್ರು ಎನ್ನೋದು. ಹನಿ ಟ್ರ್ಯಾಪ್ ಗೂ ಇದಕ್ಕೂ ಸಂಬಂಧ ಇಲ್ಲ.ಸದನ ಮುಗಿದ ಬಳಿಕ ನಾನು ರಾಜಣ್ಣರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಯಾಕೆ ತಣ್ಷಗಾದ್ರೂ ಎಂಬ ಬಗ್ಗೆ ಚರ್ಚೆ ಮಾಡ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು, ಇಲ್ಲದಿದ್ದರೆ ಮತ್ತೆ ಹನಿಟ್ರ್ಯಾಪೇ ಹೋದಲ್ಲಿ ಬಂದಲ್ಲಿ ಚರ್ಚೆ ಆಗುತ್ತದೆ ಎಂದ ಅವರು ಎಲ್ರೂ RAC ಟಿಕೇಟ್ ಇಟ್ಟುಕೊಂಡೇ ಕಾಯ್ತಿದ್ದಾರೆ. ಇಲ್ಲಿ ಶಿಂಧೆ ಅಜಿತ್ ಪವರ್ ಯಾರು ಇಲ್ಲ.ಆ ಸಾಮರ್ಥ್ಯ ಇಲ್ಲಿ ಯರಿಗೂ ಇಲ್ಲ ಎಂದ್ರು.