ಮನೆ Blog ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ...

ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ

0

ಬೆಂಗಳೂರು: ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ  ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಯತ್ನಾಳ್ ಉಚ್ಛಾಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯತ್ನಾಳ್ ಉಚ್ಛಾಟನೆ ಅನೇಕ ಹಿಂದೂ ಸಂಘಟನೆಗಳಿಗೆ, ರಾಜಕೀಯ ಅಭಿಮಾನಿಗಳಿಗೆ ನೋವು ತಂದಿದೆ. ಹಾಗಂತ ನಾವು ಹೈಕಮಾಂಡ್ ನಿರ್ಧಾರದ ವಿರುದ್ಧ ಇಲ್ಲ. ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಬಿ.ಪಿ. ಹರೀಶ್ ಇಂದು ಸಂಜೆಯೊಳಗೆ ಉತ್ತರ ಕೊಡುತ್ತಾರೆ.ನಾವು ಬಿಜೆಪಿ ತೊರೆಯುವುದಾಗಲೀ,  ಹೊಸ ಪಕ್ಷ ಕಟ್ಟುವುದಾಗಲೀ ಇಲ್ಲ ಎಂದು ಈಗಾಗಲೇ ರಮೇಶ್ ಜಾರಕಿಹೊಳಿ ವರಿಷ್ಠರಿಗೆ ಹೇಳಿದ್ದಾರೆ ಎಂದಿದ್ದಾರೆ.

ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಇದನ್ನ ಹೈಕಮಾಂಡ್ ನವರೂ ಗಮನಿಸಿದ್ದಾರೆ.ಈ ನಿಟ್ಟಿನಲ್ಲಿ ಹೈಕಮಾಂಡ್ ನವರು ತೀರ್ಮಾನಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತಾರೆ. ಯತ್ನಾಳ್  ಉಚ್ಛಾಟನೆ ನಿರ್ಧಾರವನ್ನು ಹೈಕಮಾಂಡ್ ಮರು ಪರಿಶೀಲಿಸಲಿ ಎನ್ನುವುದು ನಮ್ಮ ಮನವಿ ಎಂದಿದ್ದಾರೆ. ನಮ್ಮ ಹಿಂದಿನ ಹೋರಾಟ ಮುಂದುವರೆಸಿಕೊಂಡು ಹೋಗುತ್ತೇವೆ. ಯತ್ನಾಳ್ ಅವರನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ತರುವ ಕೆಲಸ ಮಾಡುತ್ತೇವೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಪ್ರಯತ್ನ ಮಾಡುತ್ತೇವೆ ಎಂದರು.

ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಆಗಿದೆ ಇದು. ತಪ್ಪಾಗಿದೆ ಎಂದು ಅದನ್ನು ತಿದ್ದಿಕೊಂಡು ನಾವು ಹೋಗುತ್ತೇವೆ. ಪಕ್ಷ ಯಾವ ರೀತಿ ಆದೇಶ ಕೊಡುತ್ತದೋ ಅದೇ ರೀತಿಯಲ್ಲಿ ನಡೆಯುತ್ತೇವೆ. ನಮ್ಮ ಹೋರಾಟಕ್ಕೆ ಕಹಿ ಘಟನೆ ಅಂದರೆ ಯತ್ನಾಳ್ ಉಚ್ಛಾಟನೆ ಎಂದಿದ್ದಾರೆ. ನಿಜವಾಗಿಯೂ ಇದು ನಮಗೆ ಹಿನ್ನಡೆ. ಎಲ್ಲೋ ತಪ್ಪಿನ ಮಾಹಿತಿ ಗಳಿಂದ  ಈ ರೀತಿ ಆಗಿರಬಹುದು. ನಾವು ಎಲ್ಲರೂ ಹೋಗಿ ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೇವೆ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ರನ್ನು ಮೊದಲು ಉಚ್ಚಾಟನೆ ಮಾಡಬೇಕಿತ್ತು. ಇಡೀ ಕರ್ನಾಟಕ ಯತ್ನಾಳ್ ಪರ ಇದೆ, ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದು ಯಡಿಯೂರಪ್ಪ ವಿರುದ್ಧವಾಗಿಯೂ ಅಲ್ಲ. ಯಾರೋ ಒಬ್ಬರ ಪರವಾಗಿಯೂ ಹೋರಾಟ ಅಲ್ಲ. ಪಕ್ಷ ಸಂಘಟನೆಗಾಗಿ ನಮ್ಮ ಹೋರಾಟ ಇದೆ ಎಂದಿದ್ದಾರೆ.

ಇನ್ನು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಂಪೇಗೌಡ ಏರ್ ಪೋರ್ಟ್ ನಿಂದ ನೇರವಾಗಿ ಯುಬಿ ಸಿಟಿಗೆ ಆಗಮಿಸಿ  ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನಿವಾಸಕ್ಕೆ ಬಂದಿದ್ದಾರೆ. ಯು.ಬಿ. ಸಿಟಿಯಲ್ಲಿರುವ ಸಿದ್ಧೇಶ್ವರ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಪ್ರತಾಪಸಿಂಹ ಹಾಜರಿದ್ದರು.