ಮನೆ Blog ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವ ಜೆ.ಪಿ ನಡ್ಡಾ

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವ ಜೆ.ಪಿ ನಡ್ಡಾ

0

 

ನವದೆಹಲಿ; ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಚಾರವನ್ನು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಪ್ರಸ್ತಾಪಿಸಿದ್ದಾರೆ.

ರಾಜ್ಯ ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಮಸೂದೆ ಜಾರಿ ಮಾಡಿದೆ. ಅಗತ್ಯ ಬಿದ್ದರೆ ಸಂವಿಧಾನ ಬದಲಿಸುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಈ ಬಗ್ಗೆ ವಿರೋಧ ಪಕ್ಷದ ನಾಯಕರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ  ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಅಂಬೇಡ್ಕರ್ ಆಶಯಗಳನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ಸಂವಿಧಾನದ ಉಳಿಸುವವರು ನಾವು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬಳಿಕ ತೀವ್ರ ಗದ್ದಲ ಹಿನ್ನಲೆ ಕಲಾಪ ಮುಂದೂಡಿಕೆಯಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ ಬಿಜೆಪಿ ಸುಳ್ಳು ಹೇಳುತ್ತಿದೆ. ಸಂವಿಧಾನ ಬದಲಾವಣೆ ಬಗ್ಗೆ ನಾನು ಎಲ್ಲಿ ಹೇಳಿದ್ದೇನೆ?. ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ, ಆದ್ರೆ ಬದಲಾವಣೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.ನನ್ನ ಹೇಳಿಕೆಯನ್ನ ಬಿಜೆಪಿಯವರು ತಿರುಚುತ್ತಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇವೆ.ಕಾಂಗ್ರೆಸ್ ಸಂವಿಧಾನ ವನ್ನ ರಕ್ಷಿಸುವ ಕೆಲಸ ಮಾಡುತ್ತಿದೆ.ಆದ್ರಡ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ.ದೇಶಕ್ಕೆ ಅಪಪ್ರಚಾರ ಮಾಡೋದು, ಸುಳ್ಳು ಹೇಳೋದೆ ಅವರ ಕೆಲಸ ವಾಗಿದೆ ಎಂದ್ರು.

ಜೆ.ಪಿ‌. ನಡ್ಡಾಗಿಂತ  ನಾನು ಸೆನ್ಸಿಬಲ್ ರಾಜಕಾರಣಿ. ನಾನು‌ 36 ವರ್ಷ ಶಾಸಕ ಆಗಿದ್ದೇನೆ. ನಮ್ಮದು ನ್ಯಾಷನಲ್ ಪಾರ್ಟಿ .ನನಗೆ ಗೊತ್ತಿದೆ ಸಂವಿಧಾನ ಏನು?. ಸಂವಿಧಾನ ಏನ್ ಹೇಳುತ್ತೆ ಪರಿಜ್ಞಾನ ಇದೆ.ನನ್ನ ಹೆಸರನ್ನ ಎಲ್ಲ ಕಡೆ ತಗೊಂಡ್ರೆ ತೆಗೆದುಕೊಳ್ಳಲಿ.ನಾನು ನಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ. ಬಿಜೆಪಿ ಅವರು ಮಿಸ್ ಗೈಡ್ ಮಾಡ್ತಿದ್ದಾರೆ, ಅವರ ಗ್ರಾಫ್ ಇಳಿಯುತ್ತಿದೆ ಎಂದಿದ್ದಾರೆ.

ನನಗೆ ಬೆಸಿಕ್ ಕಾಮನ್ ಸೆನ್ಸ್ ಇದೆ.ಸಾಕಷ್ಟು ಸಲ ಸಂವಿಧಾನ ಬದಲಾವಣೆ ಆಗಿದೆ ಅಂತ ಹೇಳಿದ್ದೇನೆ.ಅವರು ಸುಳ್ಳು ಹೇಳುತ್ತಿದ್ದಾರೆ, ಮಿಸ್ ಗೈಡ್ ಮಾಡುತ್ತಿದ್ದಾರೆ. ಅವರು ಮಿಸ್ ಕೋಟಿಂಗ್ ಮಾಡುತ್ತಿದ್ದಾರೆ ನನ್ನ ಹೇಳಿಕೆಯನ್ನ.ನಾನು ಈ ವಿಷ್ಯ ಗಳ ಬಗ್ಗೆ ಮಾತಾಡಿಲ್ಲ.ಅವರು ನನ್ನ ಹೆಸರನ್ನ ಎಲ್ಲಾ ಕಡೆ ದುರುಪಯೋಗ ಮಾಡುತ್ತಿದ್ದಾರೆ.ಬಿಜೆಪಿಯವರು ಮಿಸ್ ಗೈಡ್ ಮಾಡುತ್ತಿದ್ದಾರೆ , ದೇಶವನ್ನು ಮಿಸ್ ಗೈಡ್ ಮಾಡಿದ್ದಾರೆ. ಫೇಕ್ ನ್ಯೂಸ್ ಮಾಡುವುದರಲ್ಲಿ ಅವರು ಪರಿಣಿತರು.ಮೀಸಲಾತಿ ಕುರಿತು ಹಲವು ರಾಜ್ಯಗಳಲ್ಲಿ ಕೋರ್ಟ್ ಮೊರೆ ಹೋಗಲಾಗಿದೆ ಅಷ್ಟೇ. ಗಾಂಧಿ ಫ್ಯಾಮಿಲಿ ಹೆಸರು‌ ಹೇಳದಿದ್ರೆ ಅವರಿಗೆ ಸಮಾಧಾನ ಆಗಲ್ಲ.ಕಾನೂನು ಹೋರಾಟ ನೋಡುತ್ತೇನೆ, ಏನ್ ಹೋರಾಟ ಮಾಡಬೇಕೋ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಯವರ ಆರೋಪ ಅಪ್ಪಟ ಸುಳ್ಳು.ನಾನು ಎಲ್ಲೂ ಸಂವಿಧಾನ ಬದಲಾವಣೆ ಆಗಿದೆ, ಬೇಕಾದಷ್ಟು ಆಗಿದೆ ಎಂದು ಹೇಳಿದ್ದೇನೆ.ನನ್ನ ಹೆಸರು ಪಕ್ಷದ ಹೆಸರು ಹೇಳದಿದ್ರೆ ಸಮಾಧಾನ ಆಗಲ್ಲ.ಅವರಿಗೆ ರಾಜಕೀಯ ಮಾತನಾಡಲು ಏನೂ ಇಲ್ಲ .ಕೇಂದ್ರ ಬಜೆಟ್ ನಲ್ಲಿ ಅವರು ಫೆಲ್ಯೂರ್ .ಆ ಬಜೆಟ್ ನಲ್ಲಿ ಏನೂ ಇಲ್ಲ.ಹಾಗಾಗಿ ಈ‌ ರೀತಿ ಮಾತಾಡ್ತಿದ್ದಾರೆ.ನಾನು ಬದಲಾವಣೆ ಆಗಿದೆ, ಮಾಡ್ತಿವಿ ಅಂತ ಎಲ್ಲೂ ಹೇಳಿಲ್ಲ.ಕೋರ್ಟ್ ಜಡ್ಜ್‌ಮೆಂಟ್ ಆದಮೇಲೆ ಅನೇಕ ಬದಲಾವಣೆ ಆಗಿದೆ ಅಂತ ಮಾತ್ರ ಹೇಳಿದ್ದೇನೆ.ಬಿಜೆಪಿಗೆ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ.ಬಿಜೆಪಿ‌ಗೆ ನನ್ನ ಹೆಸರು  ನಮ್ಮ ಪಾರ್ಟಿ ಹೆಸರು ಹೇಳದೇ ಇದ್ದರೆ ನಿದ್ದೆ ಬರಲ್ಲ.ನಾವು ಸಂವಿಧಾನ ರಕ್ಷಣೆ ಮಾಡುವವರು, ಅದು ನಮ್ಮ ಜನ್ಮಸಿದ್ದ ಹಕ್ಕು, ನಮ್ಮ ಪಕ್ಷದ ನಿಲುವು ಎಂದಿದ್ದಾರೆ.