ನವದೆಹಲಿ; ಅಂಬೇಡ್ಕರ್ ಸೋಲಿಸಿದವರು ಆರ್ ಎಸ್ ಎಸ್ ನವರು ಎನ್ನುವುದು ಸಂಶಯ ಬೇಡ ಎಂದು ನವದೆಹಲಿಯಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಸಾವರ್ಕರ್ ಅಂಬೇಡ್ಕರ್ ಸೋಲಿಸಿದ್ರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಂಬೇಡ್ಕರ್ ತಮ್ಮ ಆಪ್ತರಾದವರಿಗೆ ಪತ್ರ ಬರೆದಿದ್ದಾರೆ. ಅಂಬೇಡ್ಕರ್ ಸೋಲಿಸಿದವರು ಆರ್ ಎಸ್ ಎಸ್ ನವರು ಎನ್ನುವುದು ಸಂಶಯ ಬೇಡ. ಅಂಬೇಡ್ಕರ್ ಮನುಸ್ಮೃತಿ ಸುಟ್ಟುಹಾಕಿದ್ರು. ಅಂಬೇಡ್ಕರ್ ಮೇಲೆ ಪ್ರೀತಿ ಇದ್ರೆ ಆರ್ ಎಸ್ ಎಸ್ ಮನುಸ್ಮೃತಿ ದಹಿಸಲಿ. ಬ್ರಿಟಿಷರ ಜೊತೆ ಆರ್ ಎಸ್ ಆರ್ ಅರ್ಜೆಸ್ಟ್ ಮಾಡ್ಕೊಂಡಿದ್ರು. ಕ್ಷಮಾಪಣೆ ಬರೆಯೋಕೆ ಕಾಪಿ ರೈಟ್ ಇದ್ರೆ ಅದು ಸಾವರ್ಕರ್ ಎಂದಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಸಿಡಿ ಇರುವ ಬಗ್ಗೆ ಗುಸುಗುಸು ವಿಚಾರದ ಬಗ್ಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸುಸಂಸ್ಕೃತ ರಾಜ್ಯ.ನಾವು ರೋಲ್ ಮಾಡೆಲ್ ಆಗಿದ್ದೆವು. ಸಿಡಿ ಯೂನಿಟ್ ನಿಂದ ಕೆಟ್ಟ ಹೆಸರು ಬಂದಿದೆ, ಹೊಸಲು ಎದ್ದಿದೆ.ಸಿಡಿ ರಾಜಕಾರಣ ಮಾಡುವವರಿಗೆ ಛೀಮಾರಿ ಹಾಕಬೇಕು ಎಂದ್ರು. ಇನ್ನು ಇದೇ ಮೀಸಲಾತಿಯಲ್ಲಿ ಒಂದು ಧರ್ಮದ ಬಗ್ಗೆ ಉಲ್ಲೇಖ ಮಾಡಿಲ್ಲ.ಅಲ್ಪಸಂಖ್ಯಾತರು ಎಂದರೆ ಸಿಕ್ ,ಭೌದ್ದರು, ಜೈನರು ಇದ್ದಾರೆ. ಬಿಜೆಪಿಯವರು ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ನಮ್ಮ ಕಡೆಯು ದಾಖಲೆ ಇದೆ, ಅವರು ಅಲ್ಪ ಸ್ವಲ್ಪ ಓದಿರುತ್ತಾರೆ; ವಿಧಾನಸೌಧದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿಕೆ
ಬೆಂಗಳೂರು; ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ನಮ್ಮ ಕಡೆಯು ದಾಖಲೆ ಇದೆ, ಅವರು ಅಲ್ಪ ಸ್ವಲ್ಪ ಓದಿರುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್, ನೆಹರುರವರು ಅಂಬೇಡ್ಕರ್ ಅವರನ್ನ ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ರಾಜಕೀಯವಾಗಿ ಅವರನ್ನ ಕೊನೆಗೊಳಿಸಿ ಬೆಳೆಯೋದಕ್ಕೆ ಅವಕಾಶ ಕೊಡಲಿಲ್ಲ. ಸತ್ಯ ಹೇಳಿದ ತಕ್ಷಣ ಕಾಂಗ್ರೆಸ್ ನವರಿಗೆ ಮೈ ಎಲ್ಲ ಉರಿಯಾಗುತ್ತೆ.ಸತ್ಯ ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಕಹಿಯಾಗಿರುತ್ತೆ. ಸಿದ್ದರಾಮಯ್ಯ ನವರು ಹೇಳೊಲ್ವಾ ? ಸತ್ಯ ಯಾವಾಗಲೂ ಕಹಿ ಅಂತ. ಸನಾತನ ಧರ್ಮದ ಬಗ್ಗೆ ಕೀಳಾಗಿ ಮಾಡ್ತಾರೆ ಎಂದಿದ್ದಾರೆ.
ಸ್ಯಾಂಕಿ ಟ್ಯಾಂಕಿಯಲ್ಲಿ ಕಾವೇರಿ ಆರತಿ ಮಾಡುವ ವಿಚಾರದ ಬಗ್ಗೆ ಮಾತನಾಡಿ ಸಂಬಂಧಪಟ್ಟ ಸಚಿವರನ್ನ ಕೇಳಿ.ಸರ್ಕಾರ, ಸಂಬಂಧಪಟ್ಟವರನ್ನ ಕೇಳಿ. ಕಾಂಗ್ರೆಸ್ ಹಿಂದುತ್ವದ ಬಗ್ಗೆ ಸಾಫ್ಟ್ ಕಾರ್ನರ್ ಅನುಸರಿಸುತ್ತಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಸಾಫ್ಟ್ ಕಾರ್ನರ್ ಇಲ್ಲ ಅವರಿಗೆ. ಒಲೈಕೆ ರಾಜಕೀಯ ಮಾಡಿ, ಅವರಿಗೂ ಕಿರುಕುಳ ಕೊಡ್ತೀರಾ. ಕಾನೂನು ಅವಕಾಶ ಇಲ್ಲ ಅಂದ್ರೆ ಯಾಕೆ ಮಾಡ್ತೀರಾ.ಚೇಷ್ಟೆ ಮಾಡೋದು, ದ್ವೇಷ ಬೆಳೆಸೋದೆ ಕಾಂಗ್ರೆಸ್ ನ ಸಂಸ್ಕೃತಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.