ನವದೆಹಲಿ; ಮುಸ್ಲಿಮರಿಗೆ ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ನೀಡಿರುವ ಸರ್ಕಾರದ ನಡೆ ಸಂವಿಧಾನಬಾಹಿರ, ಕಾನೂನು ಬಾಹಿರ ಎಂದು ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಸರಕಾರ ನಡೆ ಸಂವಿಧಾನಬಾಹಿರ, ಕಾನೂನು ಬಾಹಿರ. ಧಾರ್ಮಿಕ ಮೀಸಲಾತಿ ಬೇಡ ಎಂದು ಅಂಬೇಡ್ಕರ್ ಹೇಳಿದ್ದರು. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿ ಸಮಾಜ ಒಡೆಯಲು ನೋಡುತ್ತಿದ್ದಾರೆ. ಮತ ಬ್ಯಾಕ್ ಗಟ್ಟಿ ಮಾಡಲು ನೋಡುತ್ತಿದ್ದಾರೆ ಎಂದಿದ್ದಾರೆ.
ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅಂಬೇಡ್ಕರ್ ವಿರುದ್ಧ ಕ್ಯಾಂಡೇಟ್ ಹಾಕಿದವರು ಯಾರು..? ಅಭ್ಯರ್ಥಿ ಹಾಕದೇ ಅಂಬೇಡ್ಕರ್ ಗೆಲ್ಲಿಸಬಹುದಾಗಿತ್ತು.ನೆಹರು ಎರಡು ಸಲ ಕಾಂಗ್ರೆಸ್ ಅಭ್ಯರ್ಥಿ ಒರ ಪ್ರಚಾರ ಮಾಡಿದ್ರು. ಇತಿಹಾಸ ತಿರುಚುವುದು ಸರಿಯಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಜಮೀನು ಒತ್ತುವರಿ ತೆರವು ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಹೇಳಿದ್ದಾರೆ ಕಾನೂನಿನ ಪ್ರಕಾರ ನಾನು ತಪ್ಪು ಮಾಡಿಲ್ಲ .ದ್ವೇಷದ ರಾಜಕಾರಣದ ಒಂದು ಭಾಗ ಇದು ಎಂದರು. ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರದ ಬಗ್ಗೆ ಮಾತನಾಡಿ ಆರ್ ಎಸ್ ಎಸ್ ಬಗ್ಗೆ ಇಡಿ ನಾಡಿಗೆ ಗೊತ್ತು. ಇಂದಿರಾ ಗಾಂಧಿ, ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಹೊಗಳಿದ್ದಾರೆ.ಸಿದ್ದರಾಮಯ್ಯ ಕಾಂಗ್ರೆಸ್ ನವರು ಅಲ್ಲ. ಕಾಂಗ್ರೆಸ್ ವಿರೋಧಿ ಬಣದಲ್ಲಿ ಇದ್ದವರು. ಇತ್ತೀಚೆಗೆ ಕಾಂಗ್ರೆಸ್ ಸೇರಿದ ಕಾರಣ ತೃಪ್ತಿಪಡಿಸಲು ಆರ್ ಎಸ್ ಎಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಹೆಚ್ಡಿಕೆ ಒತ್ತುವರಿ ತೆರವು ಮಾಡುತ್ತಿರುವ ವಿಚಾರ; ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡ್ತೇನೆ ಎಂದ ಹೆಚ್ಡಿಕೆ
ಬೆಂಗಳೂರು; ಹೆಚ್ಡಿಕೆ ಜಮೀನು ಒತ್ತುವರಿ ತೆರವು ಮಾಡುತ್ತಿರುವ ವಿಚಾರದ ಬಗ್ಗೆ ಸ್ವತಃ ಹೆಚ್ ಡಿ ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾನು 40 ವರ್ಷಗಳ ಹಿಂದೆ ತೆಗೆದುಕೊಂಡು ಜಮೀನು. ನನ್ನನ್ನು ಬಿಟ್ಟು ಯಾರಿದ್ದಾರೆ ಟಾರ್ಗೆಟ್ ಮಾಡಲು. ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ .ಯಾರೂ ಗಾಬರಿ ಆಗುವುದು ಬೇಡ. ನನ್ನ ಜೀವನದಲ್ಲಿ ಯಾವುದೇ ಅಕ್ರಮಗಳಿಗೆ ಎಡೆ ಮಾಡಿ ಕೊಟ್ಟಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಇವತ್ತು, ಈ ರೀತಿಯ ಸರ್ಕಾರದ ದಬ್ಬಾಳಿಕೆ ನಡೆಯುತ್ತಿದೆ ಎಂದರು.
ಬೆಂಗಳೂರಿನಲ್ಲಿ ಯಾವ ರೀತಿ ಲೂಟಿ ಹೊಡೆದಿದ್ದಾರೆ. ಹಲವಾರು ತಪ್ಪು ಮಾಹಿತಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಉತ್ತರ ಕೊಡುತ್ತೇನೆ. ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ದೇಶದ ಇತಿಹಾಸದಲ್ಲೆ ಎಸ್ಟಿ ಮಾಡಿಕೊಂಡು ರಾಜ್ಯ ಸರ್ಕಾರ ಈ ರೀತಿ ಹೊರಟಿದೆ. ಎಸ್ಐಟಿ ಮಾಡಿಕೊಂಡು ರಾಜ್ಯ ಸರ್ಕಾರ ಈ ರೀತಿ ಮಾಡಿಕೊಂಡು ಹೊರಟಿದ್ದಾರೆ . ಈ ರಾಜ್ಯದಲ್ಲಿ ನಾನೇ ಕಾಂಗ್ರೆಸ್ ಗೆ ಟಾರ್ಗೆಟ್ . ನಾನು ಇಲ್ಲಿ ಇಲ್ಲ ಅಂದರೆ ಅವರಿಗೆ ಆರಾಮಾಗಿ ಇರುತ್ತಾರೆ. 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನಿಗೆ 100 ಬಾರಿ ತನಿಖೆ ಆಗಿದೆ. ನನ್ನ ಮೇಲೆ ರೀತಿ ನಡೆಯುತ್ತಿದ್ದನ ನೋಡುತ್ತಿದ್ದರೆ, ಜನಸಾಮಾನ್ಯರ ಪರಿಸ್ಥಿತಿ ಹೇಗೆ ನೀವೇ ತಿಳಿದುಕೊಳ್ಳಿ ಎಂದಿದ್ದಾರೆ.