ಮನೆ Latest News ಈ ಬಾರಿಯ ಬಜೆಟ್ ನಲ್ಲಿ ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ; ಸಚಿವ ದಿನೇಶ್...

ಈ ಬಾರಿಯ ಬಜೆಟ್ ನಲ್ಲಿ ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ; ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

0

ಬೆಂಗಳೂರು; ಈ ಬಾರಿಯ ಬಜೆಟ್ ನಲ್ಲಿ ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆಡಳಿತಾತ್ಮಕ ಸುಧಾರಣೆ, ಹಣಕಾಸಿನ ಸುವ್ಯವಸ್ಥೆ ಎದ್ದು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸುವ್ಯವಸ್ಥೆ ಇದೆ. ತೆರಿಗೆ ನೀಡುವುದ್ರಲ್ಲಿ 2 ನೇ ಸ್ಥಾನದಲ್ಲಿ ಕರ್ನಾಟಕ ಇದೆ.ಹಲಾಲ್ ಬಜೆಟ್ ಅಂತ ಹೇಳುತ್ತಿದ್ದಾರೆ.ಅವರಿಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ.ಹೊಗಳಲು ಅವರ ಕೈಯಲ್ಲಿ ಆಗುವುದಿಲ್ಲ.ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದ್ರು ಬಾಯಿ ಬಿಟ್ಟು ಹೇಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಓದಿಕೊಳ್ಳಿ ಬಿಜೆಪಿ ಅವರು.. ನನ್ನ ಇಲಾಖೆಗೆ ಕ್ರಾಂತಿಕಾರಿ ಬಜೆಟ್ ಇದಾಗಿದೆ.. ಎಂದಿದ್ದಾರೆ.

ಗೃಹ ಆರೋಗ್ಯ, ಬಾಣಂತಿಯ ಸಾವು ಶೂನ್ಯಕ್ಕಿಳಿಸಲು ಯೋಜನೆ ಮಾಡಲಾಗಿದೆ. ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಪಾರದರ್ಶಕತೆ ಮಾಡಲಾಗುವುದು. ಬಿಜೆಪಿ ಕೋಮುವಾದಿ ಪಕ್ಷ. ಆದ್ರಿಂದ ಎಲ್ಲವನ್ನೂ ಅವರು ವಿರೋದಿಸಲು ಮುಂದಾಗುತ್ತಿದ್ದಾರೆ. ರಾಜ್ಯ 3 ಲಕ್ಷ ನೌಕರರಿಗೆ ಆರೋಗ್ಯ ಕವಚ ಘೋಷಣೆ ಮಾಡಿದ್ದಾರೆ. ಇದು ರಾಜ್ಯದ ಹಿತ ಕಾಪಾಡುವ ಬಜೆಟ್‌. ರಾಜ್ಯ ಈಗಾಗಲೇ ಅಭಿವೃದ್ಧಿ ಆಗುತ್ತಿದೆ ಎಂದು ಬಜೆಟ್ ನ್ನು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರದ ಬೊಕ್ಕಸಕ್ಕೆ ರಾಜ್ಯದಿಂದ ಹೆಚ್ಚು ತೆರಿಗೆ ಹೋಗುತ್ತಿದೆ. ಈ ಬಜೆಟ್ ನಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಶಿಸ್ತಿಗೆ ಗಮನ ಕೊಡಲಾಗಿದೆ. ಇದೊಂದು ಐತಿಹಾಸಿಕ ಬಜೆಟ್. ಬೆಂಗಳೂರಿಗೆ 7000 ಕೊಟ್ಟಿದ್ದಾರೆ. ಎಲ್ಲ ವರ್ಗಗಳಿಗೂ ಸಮರ್ಪಕ ಅನುದಾನ. ಆರೋಗ್ಯ ಇಲಾಖೆಗೆ ಕೇಳಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾರೆ. ಸುಮಾರು ನಲವತ್ತು ಸಾವಿರ ದೇಗುಲಗಳ ಅರ್ಚಕರಿಗೆ ತಸ್ತೀಕ್ ಹೆಚ್ಚಿಸಿದ್ದಾರೆ. ಬಿಜೆಪಿಯವರಿಗೆ ಈ ಒಳ್ಳೆಯ ಬಜೆಟ್ ಸಹಿಸಲು ಆಗದೇ ಹಲಾಲ್ ಅಂದಿದ್ದಾರೆ. ಬಿಜೆಪಿ ಜನರ ದಾರಿ ತಪ್ಪಿಸ್ತಿದ್ದಾರೆ. ಅವರಿಗೆ ಬಜೆಟ್ ನೋಡಿ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ನ್ಯಾಯ ಕೊಡಿಸಲು ಆಗಿಲ್ಲ ಅವರಿಂದ ಎಂದು ಲೇವಡಿ ಮಾಡಿದ್ದಾರೆ.

ಅಹಿಂದ ಸಮುದಾಯದಲ್ಲಿ “ಅ” ಗಷ್ಟೇ ಸಿದ್ದರಾಮಯ್ಯ ಬಜೆಟ್ ನಲ್ಲಿ ಅನುದಾನ ಸಿಕ್ಕಿದೆ; ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು; ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಬಜೆಟ್ ಗೆ ಸಂಬಂಧಪಟ್ಟಂತೆ ಸುದ್ದಿಗೋಷ್ಟಿ ನಡೆಸಿದ್ರು.

ಈ ವೇಳೆ ಮಾತನಾಡಿದ ಅವರು ಮತ ಕೊಡುವವರ ಮೇಲೆ ನೇರ ಬಂಡವಾಳ ಹೂಡಿದ್ದಾರೆ.ಇತಿಹಾಸದಲ್ಲೇ ಇಷ್ಟು ಸಾಲ ಮಾಡಿದ ಸಿಎಂ ಯಾವ ರಾಜ್ಯದಲ್ಲೂ ಸಿಗಲ್ಲ.ಅನ್ಯಾಯ ಆಗಿದ್ದರೆ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ನಾಯಕರಿಗೆ.ನಾನು ಅಹಿಂದ ನಾಯಕ ಎಂದು ಪದೇ ಪದೇ ಸಿದ್ದರಾಮಯ್ಯ ಹೇಳುತ್ತಾರೆ.ಅಹಿಂದ ಸಮುದಾಯದಲ್ಲಿ “ಅ” ಗಷ್ಟೇ ಸಿದ್ದರಾಮಯ್ಯ ಬಜೆಟ್ ನಲ್ಲಿ ಅನುದಾನ ಸಿಕ್ಕಿದೆ.”ಹಿಂದ” ಸಮುದಾಯಕ್ಕೆ ಪಟ್ಟಿಯಿಂದ ದೂರ ಇಟ್ಟಿದ್ದಾರೆ.ಸಂಪನ್ಮೂಲಗಳು ಸಿಗದಿದ್ದರೆ ಬೆಲೆ ಏರಿಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.

ರಾಜ್ಯದ ಜನರ ಮೇಲೆ ದರಗಳನ್ನು ಹೆಚ್ಚಿಸಿದ್ದಾರೆ.ರಾಜ್ಯದ ಜನರಿಗೆ ಚೊಂಬು ಕೊಟ್ಟಿದ್ದಾರೆ.ದಲಿತರಿಗೆ ಚಿಪ್ಪು ಕೊಟ್ಟಿದ್ದಾರೆ. ಬೇಕಾದವರಿಗೆ ಮೃಷ್ಟಾನ್ನ ಭೋಜನ ಹಾಕಿದ್ದಾರೆ. ಬೃಹತ್ ಕೈಗಾರಿಕೆಗಳು,  ನೀರಾವರಿ ಯೋಜನೆಗಳು ಇಲ್ಲ. ಕೆಲವು ಸಮುದಾಯದ ಒಲೈಕೆ,  ಮತ ಬ್ಯಾಂಕ್ ಮಾಡಿಕೊಳ್ಳುವ ಜನಾಂಗದ ಮೇಲೆ ನೇರವಾಗಿ ಬಂಡವಾಳ ಹೂಡಿದ್ದಾರೆ. ಚುನಾವಣೆ ಬಂದಾಗ ಹಣ ಕೊಡಬೇಕಿಲ್ಲ, ಬಜೆಟ್ ನಲ್ಲೇ ಕೊಟ್ಟಿದ್ದಾರೆ. ಅತ್ಯಂತ ಸಾಲ ಹೊಂದಿದ ರಾಜ್ಯವನ್ನಾಗಿ ಮಾಡಿದ್ದಾರೆ.ರಾಜ್ಯದ ಜನ ಪರಿಸ್ಥಿತಿ ಏನಾಗಿದೆ ಅಂತ ನೋಡಿಕೊಳ್ಳಬೇಕು ಎಂದಿದ್ದಾರೆ.

ಮುಸ್ಲಿಂ ಬಂಧುಗಳಿಗೆ ಮಾಡಿಕೊಳ್ಳಿ, ನಮಗೇನೂ ಬೇಜಾರಿಲ್ಲ. ಕರ್ನಾಟಕದ ಒಟ್ಟು ಸಾಲ 7 ಲಕ್ಷ 64 ಸಾವಿರ 656 ಕೋಟಿ. ರೂ.ಜನಸಂಖ್ಯೆ 6 ರಿಂದ 7 ಕೋಟಿ ಇದೆ. ಸರಾಸರಿ 1 ಲಕ್ಷ ರೂ. ಒಂದು ಹುಟ್ಟಿದ ಮಗುವಿನ ಮೇಲೂ ಸಾಲ ಇರಲಿದೆ. ಈ ಎಲ್ಲರಿಗೂ ಒಂದೊಂದು ಲಕ್ಷ ರೂ. ಸಾಲ ಮಾಡಿ ಕೊಟ್ಟಿದ್ದಾರೆ. ಮಜಾ ಮಾಡಿ ಎಲ್ಲರೂ, ಇದು ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿರುವ ಸಾಲ ಎಂದಿದ್ದಾರೆ.

ಮುಲ್ಲಾಗಳಿಗೆ ಗೌರವ ಧನ ಹೆಚ್ಚಳದ ಬಗ್ಗೆ ಮಾತನಾಡಿದ ಅವರು ಉರ್ದು ಶಾಲೆಗಳಿಗೆ  100 ‌ಕೋಟಿ ರೂಪಾಯಿ. ಯಾಕೆ ಕನ್ನಡ ಶಾಲೆಗೆ ಕೊಡಲ್ವಾ?. ಅಲ್ಪಸಂಖ್ಯಾತರಿಗೆ 1000 ಕೋಟಿಗಳ ಮತ ಸಂರಕ್ಷಣಾ ವರದಾನ ಮಾಡಿದೆ. ಹಾಲು ಉತ್ಪಾದಕರಿಗೆ  ಪ್ರೋತ್ಸಾಹ ಧನದ ಬಗ್ಗೆ ಚಕಾರವಿಲ್ಲ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತಾಡಿದ್ರಾ?. ಬೆಂಗಳೂರನ್ನು ಏಳು ಭಾಗ ಮಾಡುತ್ತಾರೆ ಅಂತೆ. ಜನ ನಿಮ್ಮನ್ನು ಭಾಗ ಮಾಡುತ್ತಾರೆ. ಕಳಸ ಬಂಡೂರಾ, ಕೃಷ್ಣಾ ಹಾಗೂ ಕಾವೇರಿ ಕಣಿವೆಯಲ್ಲಿ ಕಾಮಗಾರಿಗಳು ಹಾಗೆ ಇದೆ.ಪಾದಯಾತ್ರೆಯಲ್ಲೇ ಮೇಕೆದಾಟು ಮುಳುಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರೇ ನಿಮ್ಮದು ಇದು ಕೊನೆಯ ಬಜೆಟ್.ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಯಾರು ಪಾಲುದಾರರು. ಅಲ್ಪ ಸಂಖ್ಯಾತರ ಮಿಂಚಿನ ಓಟ.ಸತೀಶ್ ಜಾರಕಿಹೊಳಿ ಎಸ್ಟಿ, ಎಸ್ಸಿ ಹಣ ಬಳಕೆ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ. ನನಗೆ ಬಹಳ ಖುಷಿ ಆಯಿತು,  ಯಾಕೆಂದರೆ ಸಿಎಂಗೆ ಬಹಳ ಹತ್ತಿರದ ಸಚಿವರು ಸತೀಶ್ ಜಾರಕಿಹೊಳಿ. ಈ ಬಾರಿ ಗ್ಯಾರಂಟಿಗೆ ದಲಿತರ ಹಣ ಬಳಸಲ್ಲ ಅಂತಾ ಅನ್ನಿಸುತ್ತದೆ ಎಂದ್ರು.

ಇದು ಧರ್ಮಾಧಾರಿ ಬಜೆಟ್ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಇತ್ತೀಚೆಗೆ ಸಿದ್ದರಾಮಯ್ಯ ಸ್ವಲ್ಪ ಎಚ್ಚೆತ್ತುಕೊಂಡಿದ್ದಾರೆ.ಮೀಸಲಾತಿ 4% ಕೊಟ್ಟಾಗ ಧರ್ಮದ ಆಧಾರದ ಮೇಲೆ ಇತ್ತು.ನಮ್ಮ ಸರ್ಕಾರ ಬಂದ ಮೇಲೆ ಧರ್ಮಾಧಾರಿತ ಮೀಸಲಾತಿ ಇರಲ್ಲ ಅಂತ ನಾವೇ ತೆಗೆದಿದ್ದು. ಈಗ ನೇರವಾಗಿ ತಿನ್ನುವ ಬದಲು ಸುತ್ತಿಕೊಂಡು ಬಂದು ತಿನ್ನುತ್ತಿದ್ದಾರೆ. ಜೈನರಿಗೆ  100 ಕೋಟಿ, ಕ್ರೈಸ್ತರಿಗೆ 250 ಕೋಟಿ, ಮುಸ್ಲಿಮರಿಗೆ 1000 ಕೋಟಿ ರೂ. ಯಾಕೆ?.ಇದೇನು ಗಿಫ್ಟ್? ಇದು ಜಮೀರ್ ಅಹ್ಮದ್ ಗೆ ಖುಷಿ ಆಗಿರುತ್ತದೆ. ಸಿದ್ದರಾಮಯ್ಯ ರಿಸೈನ್ ಮಾಡಿ, ಜಮೀರ್ ಅಹ್ಮದ್ ಸಿಎಂ ಮಾಡಿದರೆ ಉತ್ತಮ.ಹೆಚ್.ಸಿ. ಮಹದೇವಪ್ಪಗೆ ನಾಚಿಕೆ ಆಗಬೇಕು.ಇದನ್ನು ನೋಡಿದರೆ ಹೆಚ್.ಸಿ. ಮಹದೇವಪ್ಪ ರಾಜೀನಾಮೆ ಕೊಟ್ಟು ಬರಬೇಕು.ಗಂಡು ಅಂದರೆ ಜಮೀರ್ ಅಹಮದ್ ರೀ. ಜನಾಂಗವನ್ನು ಬಲಿ ಕೊಡುವ ಕೆಲಸ ಜಮೀರ್ ಅಹಮದ್ ಮಾಡಲ್ಲ ಎಂದಿದ್ದಾರೆ.

ಸಿಎಂ ಪತ್ನಿ,‌ ಭೈರತಿ ಸುರೇಶ್‌ ಇಡಿ ಸಮನ್ಸ್ ರದ್ದು ವಿಚಾರದ ಬಗ್ಗೆ ಮಾತನಾಡಿ ನಾವು ಕೋರ್ಟ್ ತೀರ್ಪಿನ ಮೇಲೆ ಕಮೆಂಟ್ ಮಾಡಲ್ಲ.ಲೋಕಾಯುಕ್ತದ ಮೇಲೆ ಕಮೆಂಟ್ ಮಾಡುತ್ತೇವೆ. ಲೋಕಾಯುಕ್ತ ಕೊಡುವ ವರದಿ ಮೇಲೆ ಕೋರ್ಟ್ ತೀರ್ಮಾನ ತೆಗೆದುಕೊಂಡಿದೆ.ಕೋರ್ಟ್ ಆದೇಶಗಳು ತನಿಖಾ ಸಂಸ್ಥೆಗಳು ಕೊಡುವ ವರದಿಗಳ ಮೇಲೆ ನಿಂತಿರುತ್ತವೆ. ಇದು ಆಗುತ್ತದೆ ಅಂತ ನಮಗೆ ಮೊದಲೇ ಗೊತ್ತಿತ್ತು. ಕೋರ್ಟ್ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ