ಮನೆ Latest News ಯಡಿಯೂರಪ್ಪನವರು ನಾ‌ನು ಲಿಂಗಾಯತ ಅಂತಾ ಟಾಂ ಟಾಂ ಹೊಡೆಯುವ ಅಗತ್ಯವಿಲ್ಲ: ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ....

ಯಡಿಯೂರಪ್ಪನವರು ನಾ‌ನು ಲಿಂಗಾಯತ ಅಂತಾ ಟಾಂ ಟಾಂ ಹೊಡೆಯುವ ಅಗತ್ಯವಿಲ್ಲ: ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ

0

ಬೆಂಗಳೂರು; ಯಡಿಯೂರಪ್ಪನವರು ನಾ‌ನು ಲಿಂಗಾಯತ ಅಂತಾ ಟಾಂ ಟಾಂ ಹೊಡೆಯುವ ಅಗತ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಯಡಿಯೂರಪ್ಪ ಲಿಂಗಾಯತರೇ ಅಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪನವರು ನಾ‌ನು ಲಿಂಗಾಯತ ಅಂತಾ ಟಾಂ ಟಾಂ ಹೊಡೆಯುವ ಅಗತ್ಯವಿಲ್ಲ. ಕೆಲವರು‌ ಕಾಮಿಡಿ ಪೀಸ್ ಗಳಾಗಿದ್ದಾರೆ. ನೀನೇ ಪೇಮೆಂಟ್ ಗಿರಾಕಿ. ಮ್ಯಾಚ್ ಫಿಕ್ಸಿಂಗ್ ರಾಜಕಾರಣಿ ನೀನು. ಬಬಲೇಶ್ವರದಲ್ಲಿ ಸ್ಪರ್ಧಿಸದೇ ವಿಜಯಪುರಕ್ಕೆ ಬಂದಿದ್ದೀಯಾ.ಅರೆ ಹುಚ್ಚರು, ಎಲ್ಲಾ ಕಲೆಯೂ ಆ ಮನುಷ್ಯನಿಗೆ ಗೊತ್ತು.ನಿನ್ನ ಮುಖವಾಡ ‌ಒಂದೊಂದಾಗಿ ಕಳಚಿ ಬಿದ್ದಿದೆ.ಇನ್ನು ಸ್ವಲ್ಪ ದಿನಹೋದರೆ ಹಾದಿ ಬೀದಿಯಲ್ಲಿ ಬಟ್ಟೆ‌ ಹರಿದುಕೊಂಡು ಅರೆ‌ ಹುಚ್ಚನ‌‌ ರೀತಿ ಓಡಾಡುತ್ತಾರೆ ಎಂದಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಸಮಾಜ ಎತ್ತಿ ಕಟ್ಟುವ ಕೆಲಸ ಮಾಡಿದ್ರಿ. ಆಗ ದಿನಂಪ್ರತಿ ಪ್ರತಿಭಟನೆ ಮಾಡಿದರು.ಅದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಮಾಜಕ್ಕಾಗಿ ಯಾವ ಪ್ರತಿಭಟನೆ ಮಾಡಿದೆ?.ದಾವಣಗೆರೆಯಲ್ಲಿ ಮೇ ನಲ್ಲಿ ಐತಿಹಾಸಿಕ ಮಹಾಸಂಗಮ ಮಾಡುತ್ತೇವೆ.ಅವರು ಮಾಡಿದ 15 ದಿನಗಳಲ್ಲಿ ‌ನಾವು ಸಮಾವೇಶ ಮಾಡುತ್ತೇವೆ ಅಂತಾರೆ.ಯಾಕಪ್ಪಾ‌ ನಮ್ಮನ್ನು ಕಾಪಿ ಮಾಡುತ್ತೀಯಾ? ಕೆಲ‌ವು ನೀಚರು, ದುಷ್ಟ‌‌ಶಕ್ತಿಗಳು ಸಭೆಗೆ ಹೋಗದಂತೆ ಅಡ್ಡ ಹಾಕಿದರು.ಓರ್ವ ಮಾಜಿ ಸಂಸದ ತಡೆ ಒಡ್ಡಿದರು.ಒಳಪಂಗಡಗಳನ್ನು ಒಂದೇ ವೇದಿಕೆಗೆ ತರಲು ಮಹಾಸಂಗಮ ಮಾಡುತ್ತಿದ್ದೇವೆ ಎಂದು ತಿಳಿಸಿದ್ರು.