ಮನೆ Latest News ಮತ್ತೆ ರಶ್ಮಿಕಾ ವಿರುದ್ಧ ಹರಿ ಹಾಯ್ದ ಶಾಸಕ ರವಿ ಗಣಿಗ

ಮತ್ತೆ ರಶ್ಮಿಕಾ ವಿರುದ್ಧ ಹರಿ ಹಾಯ್ದ ಶಾಸಕ ರವಿ ಗಣಿಗ

0

ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ನೆಟ್ಟು ಬೋಲ್ಟ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮತ್ತೆ ರಶ್ಮಿಕಾ ವಿರುದ್ಧ ರವಿ ಗಣಿಗ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಡಾ ರಾಜೇಂದ್ರಸಿಂಗ್ ಬಾಬು ಹೇಳಿಕೆ ನೋಡಿದೆ. ಅವರು ಕಾಂಗ್ರೆಸ್ ಸದಸ್ಯರು ಅಲ್ಲದೇ ಹೋದರೂ ಅವರನ್ನು ಸಿದ್ದರಾಮಯ್ಯ ಸರ್ಕಾರ ಸಿನಿಮಾ ಅಕಾಡೆಮಿ ಅಧ್ಯಕ್ಷ ರಾಗಿ ಮಾಡಿತ್ತು. ಅವರ ಕೊಡುಗೆ ಏನು ಅಂತಾ ಹೇಳಲಿ. ಹೀಗೆ ಸುಮ್ಮನೆ ಅವರು ಮಾತನಾಡೋದಲ್ಲ. ನಮಗೆ ಅವರ ಬಗ್ಗೆ ಮಾತನಾಡಲು ಟೈಮ್ ಇಲ್ಲ. ರಾಜಕುಮರ್ ಅವರ ತರ ಮಾದರಿ ಆಗ ಬೇಕು ಎಂದರು.

ತಮಿಳುನಾಡಲ್ಲಿ ಭಾಷೆ ಅಂತಾ ಬಂದರೆ ಎಲ್ಲರು ಒಟ್ಟಾಗಿ ಬರ್ತಾರೆ. ಇವರು ಕ್ರಿಕೆಟ್ ಆಡ ಬೇಕಾ.ಎಲ್ಲಾ ನಟರು ಇದೇ ತರ ಅಂತಾ ಹೇಳೊಲ್ಲ. ಸರ್ಜಾ ಕುಟುಂಬ ಡಾಲಿ ಕುಟುಂಬ ಕನ್ನಡಕ್ಕಾಗಿ ಬಂದಿದ್ದಾರೆ.ಇವರಿಗೆ ನಟ್ಟು ಬೋಲ್ಟು ಟೈಟ್ ಮಾಡದೇ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ನಾಗಾಭರಣ ಪ್ಯಾಕೇಜ್ ತಗೊಂಡು ಬಿಜೆಪಿ ಪರ ಮಾಡಿದಾಗ ಸಂಸ್ಕರ ನೆನಪಾಗಿಲ್ವಾ. ಆಗ ಇವರ ಸಂಸ್ಕಾರ ಎಲ್ಲಿಗೆ ಹೋಗಿತ್ತು ಅವರ ಸಿನಿಮಾ ಬಗ್ಗೆ ನಮಗೆ ಗೌರವ ಇದೆ. ನಾನು ಐಶ್ವರ್ಯ ರೈ ಅನುಷ್ಕಾ ಶೆಟ್ಟಿ ಬಗ್ಗೆ ಮಾತನಾಡ್ತಾ ಇಲ್ಲ. ಅವರು ಅಲ್ಲಿನ ನೆಲದಲ್ಲಿ ಕೆಲಸ ಮಾಡಿದ್ದಾರೆ. ಆದರೆ ರಷ್ಮಿಕಾ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು keಲಸ ಮಾಡಿದವರು. ಈಗ ಕರೆದರೆ ಬರೋಲ್ಲ ಅಂತಾರೆ
ನಾವು ಕಾಂಗ್ರೆಸ್ ಕಚೇರಿಗೆ ನೀರು ತರೋಕೆ ಪಾದಯಾತ್ರೆ ಮಾಡಿಲ್ಲ. ನಾವು ಬೆಂಗಳೂರು ನೀರು ತರೋಕೆ ಮಾಡಿದ್ದು. ಇವರ ಮನೆಗೆ ನೀರು ಬರೋಲ್ವಾ. ಹಾಗಾದರೆ ಇವರ ಮನೆ ನೀರು ಪೈಪ್ ಕಟ್ ಮಾಡಬಿಡೋಣ್ವಾ. ತಮಿಳು ನಟರಿಂದ ಇವರು ಕಲಿಯ ಬೇಕು ಎಂದಿದ್ದಾರೆ.