ಬೆಂಗಳೂರು; 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದವರ ನೆಟ್ಟು, ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ನೀಡಿದ ಹೇಳಿಕೆ ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ. ನಿಮಗೆ ರಾಜಣ್ಣನ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಆಗ್ಲಿಲ್ಲ, ಸಿನಿಮಾ ತಾರೆಯರ ನೆಟ್ಟು ಬೊಲ್ಟ್ ಟೈಟ್ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈಗ ನೀವು ಸುದೀಪ್ ದರ್ಶನ್ ಯಶ್ ಅಂತವರ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಹೋಗಿದ್ದಾರೆ. ಸಿನಿಮಾ ನಟರು ಡಿಕೆ ಶಿವಕುಮಾರ್ ಅವರ ಗುಲಾಮರಲ್ಲ. ನಿಮ್ಮ ಆಶೀರ್ವಾದಿಂದ ಸಿನಿಮಾ ಗೆದ್ದಿಲ್ಲ. ನಿನ್ನ ಆಶೀರ್ವಾದದಿಂದ ಸಿನಿಮಾ ಸಕ್ಸಸ್ ಆದ್ರೆ ಹೇಳು. ಇದು ಪ್ರಜಾಪ್ರಭುತ್ವಕ್ಕೆ ಅಪಮಾನ. ಡಾ. ರಾಜ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಇದ್ದಂತ ಕ್ಷೇತ್ರ. ಇಂದು ಅಂಬರೀಶ್ ಇದ್ದಿದ್ರೆ ಅವರ ಭಾಷೆಯಲ್ಲೆ ಉತ್ತರ ಕೊಡ್ತಾ ಇದ್ರು ಡಿಕೆಗೆ. ಸಿನಿಮಾ ತಾರೆಯರು ಡಿಕೆ ಹೇಳಿಕೆಯನ್ನು ಖಡಾಖಂಡಿತವಾಗಿ ಖಂಡಿಸಬೇಕು. ನಮ್ಮ ಪ್ರಧಾನಿ ಎಲ್ಲಾ ಸಿನಿಮಾ ನಟರಿಗೆ ಗೌರವ ಕೊಡ್ತಾರೆ. ಇಲ್ಲಿ ಡಿಕೆ ಧಮ್ಕಿ ಹಾಕ್ತಾರೆ. ತಾರಾ ಅವರು ಹೇಳಿದ್ದಾರೆ ನನಗೆ ಕರೆದೆ ಇಲ್ಲ ಎಂದು ಅಂತಾ ಅಶೋಕ್ ತಿಳಿಸಿದ್ದಾರೆ.
ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು
ಬೆಂಗಳೂರು; ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಚಲನಚಿತ್ರ ನಟರಿಗೆ ಡಿಕೆಶಿ ವಾರ್ನಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ತರ ಸಪೋರ್ಟ್ ಮಾಡಬೇಕಂತೆ.?. ರಿಪೇರಿ ಮಾಡೋದಕ್ಕೆ ಆ ಕೆಲಸ ಮಾಡಲು ಬಹಳ ಜನ ಇದ್ದಾರೆ. ಇವರಿಗೆ 135 ಸೀಟು ಕೊಟ್ಟಿರೋದು ರಾಜ್ಯದ ಜನರ ಸಮಸ್ಯೆ ಆಲಿಸಲು,ಇವರು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ. ಅವರು ಬಹುಶಃ ಭೂಮಿ ಮೇಲಿಲ್ಲ ಅನ್ಸುತ್ತೆ. ಅವರ ಬಗ್ಗೆ ಮಾತಾಡದೆ, ಮೌನವಾಗಿರೋದೇ ಒಳ್ಳೆಯದು ಎಂದಿದ್ದಾರೆ.
ಡಿಸಿಎಂ ಹಿಂದುತ್ವದ ಜಪ ಮಾಡ್ತಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅವರವರ ಭಾವಕ್ಕೆ ಬಿಟ್ಟಿದ್ದು, ನಾನು ಟೀಕೆ ಮಾಡಲು ಹೋಗಲ್ಲ.ಅಂಬೇಡ್ಕರ್ ಅವರೇ ಅವರವರ ಭಾವನೆಗೆ ಅವಕಾಶ ನೀಡಿದ್ದಾರೆ ಎಂದರು. ರಾಜಕಾರಣಿ ಮಕ್ಕಳು ಚಲನಚಿತ್ರದಲ್ಲಿ ಪ್ಲಾಪ್ ಆಗಿ, ಈಗ ರಾಜಕಾರಣಕ್ಕೆ ಬಂದಿದ್ದಾರೆ ಅಂತ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತೆ.ಕೆಲವು ಬಾರಿ ಬದಲಾವಣೆ ಆಗುತ್ತೆ.ನಾನೇ ಒಂದು ಕಾಲದಲ್ಲಿ ರಾಜಕೀಯಕ್ಕೆ ಬರ್ತೀನಿ ಅಂದುಕೊಂಡಿರಲಿಲ್ಲ.ನಾನೇ ಅಚಾನಕ್ಕಾಗಿ ಬಂದೆ.ಏಳು ಬೀಳುಗಳಿರುತ್ತೆ.ಅದಕ್ಕೆ ಅಷ್ಟೇನು ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದಿದ್ದಾರೆ.
ನಾಳೆ ಅಧಿವೇಶನ ವಿಚಾರದ ಬಗ್ಗೆ ಈಗಿನ ಸರ್ಕಾರದಲ್ಲಿ ಏನೇ ಚರ್ಚೆ ಮಾಡುದ್ರೂ ಉಪಯೋಗ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಕೊಡ್ತೀವಿ ಅಂದ್ರು, ಎಷ್ಟು ಕೊಟ್ಟರು.ರಾಜ್ಯದಲ್ಲಿ ಇರೋ ಸಮಸ್ಯೆಗೆ ಹೆಚ್ಚಿನ ಮಹತ್ವಕ್ಕಿಂತ ರಾಜಕೀಯ ಪರ ವಿರೋಧ ಹೇಳಿಕೆಗೆ ಮಹತ್ವ ಹೆಚ್ಚಿದೆ.ಆದ್ರೆ ರಾಜ್ಯದ ಸಮಸ್ಯೆಗೆ ಹೆಚ್ಚು ಮಹತ್ವ ಇಲ್ಲ.ಇಂದಿನ ಸಭೆಯಲ್ಲಿ ಏನೆಲ್ಲಾ ಚರ್ಚೆ ಮಾಡಬೇಕು ಅಂತ ಚರ್ಚೆ ಮಾಡ್ತೀವಿ ಎಂದಿದ್ದಾರೆ.