ಮನೆ Latest News ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ...

ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ

0

ಬೆಂಗಳೂರು; ರಾಜ್ಯ ಸರ್ಕಾರದ ಬಳಿ ಅಕ್ಕಿ ಖರೀದಿಸಲು ಕೂಡ ಹಣವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಸಧೃಡವಾಗಿದೆ ಎಂದು ಹೇಳ್ತಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಭರವಸೆಗಳನ್ನ ಈಡೇರಿಸೋದಾಗಿ ಹೇಳಿದ್ದಾರೆ. ಆದರೆ ಕಳೆದ 4-5 ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ತಲುಪಿಲ್ಲ. ಐದು ಕೆ ಜಿ ಅಕ್ಕಿ ಹಣವನ್ನೂ ಕೊಟ್ಟಿಲ್ಲ. ಕೇಂದ್ರ ಸಚಿವ ಜೋಶಿ ಅವರು ಅಕ್ಕಿ ಕೊಡಲು ತಯಾರಿ ಅಂತ ಹೇಳಿದ್ದಾರೆ. ಆದ್ರೆ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ರಾಜ್ಯ ಸರ್ಕಾರ ಅಧೋಗತಿಗೆ ಹೋಗ್ತಿದೆ. ಶಕ್ತಿ ಯೋಜನೆಗೆ 7 ಸಾವಿರ ಕೋಟಿ ಸರ್ಕಾರ ಸಾರಿಗೆ ಇಲಾಖೆಗೆ ಕೊಡಬೇಕಿದೆ. ಸಾರಿಗೆ ಇಲಾಖೆ ಬಾಗಿಲು ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಬಿಜೆಪಿ ಸದನದ ಒಳಗೆ, ಹೊರಗೆ ಹೋರಾಟ ಮಾಡಿದೆ. SCP-TSP ಹಣ ಗ್ಯಾರಂಟಿಗೆ ಬಳಕೆ ಮಾಡಿಕೊಳ್ತಿದ್ದಾರೆ. ಇದಕ್ಕೆ ನಮ್ಮ‌ ವಿರೋಧ ಇದೆ. ನಿನ್ನೆ ಸಿಎಂ ದಲಿತ ಮುಖಂಡರ ಸಭೆ ಕರೆದಿದ್ರು. ಅವರು ದಲಿತರಿಗೆ ಇಟ್ಟ ಹಣ ಡೈವರ್ಟ್ ಮಾಡಬೇಡಿ ಅಂತ‌ ಸಿಎಂಗೆ ತಾಕೀತು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ SC, STಗಳಿಗೆ ಕಂಟ್ರಾಕ್ಟ್ ಎರಡು ಕೋಟಿಗೆ ಹೆಚ್ಚಿಸೋದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಯಾರ ಕಿವಿಗೆ ಹೂವು ಇಡ್ತಿದ್ದೀರಿ.? ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಾಗ್ತಿಲ್ಲ, ಟನಲ್ ರೋಡ್ ಮಾಡ್ತೀವಿ ಅಂತ ಹೇಳ್ತಿದ್ದೀರಿ. ಇದು ಅಕ್ಷಮ್ಯ ಅಪರಾಧ.ಛಲವಾದಿ ನಾರಾಯಣಸ್ವಾಮಿ ಅವರು ಸರಿಯಾಗಿ ಹೇಳಿದ್ದಾರೆ. ಕ್ರೋಛಿಕರಣವಾದ ಹಣ ಎಲ್ಲಿಗೆ ಹೋಗ್ತಿದೆ ಅಂತಾ.ಇದಕ್ಕೆ ಉತ್ತರ ಸಿಗ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡ್ತೀನಿ. ನೀವು ಎಲ್ಲವೂ ಸರಿಯಾಗಿದೆ ಅನ್ನೋದನ್ನು ನಿಲ್ಲಿಸಿ.ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರವನ್ನ‌ ಹೊರಡಿಸಿ. 16ನೇ ಬಜೆಟ್ ಮಂಡಿಸ್ತಿದ್ದೀರಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಜನರಿಗೆ ಮಾಹಿತಿ ಕೊಡಿ.ಬೈ ಎಲೆಕ್ಷನ್ ಬರುವ ಮೂರು ದಿನ ಮೊದಲು ಹಣ ಬಿಡುಗಡೆ ಆಗುತ್ತೆ.ಈಗ ಐದಾರು ತಿಂಗಳ ಬಾಕಿ ಇದೆ. ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಚುನಾವಣೆ ಬರುತ್ತೆ, ಆಗ ಬಿಡುಗಡೆ ಮಾಡ್ತೀರಿ. ನೀವು ರಾಜ್ಯದ ಜನರನ್ನ ಭಿಕ್ಷುಕರು ಅಂದುಕೊಂಡಿದ್ದೀರಾ.?ಸಿಎಂಗೆ ಆಗ್ರಹ ಮಾಡ್ತೀನಿ, ರಾಜ್ಯದ ನಿಜ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬಿಸಿಲು ಹೆಚ್ಚಾಗ್ತಿದೆ. ಈಗಲೇ ಇಷ್ಟು ಪರಿಸ್ಥಿತಿ ಇದೆ‌. ಏಪ್ರಿಲ್, ಮೇ ತಿಂಗಳಲ್ಲಿ ಪರಿಸ್ಥಿತಿ ಹೇಗೆ ಆಗಬಹುದು.ಭೀಕರ ಬರಗಾಲ ಆರಂಭ ಆಗಬಹುದು. ದನಕರುಗಳಿಗೆ ನೀರು, ಮೇವು ಅಗತ್ಯತೆ ಬರಲಿದೆ. ರಾಜ್ಯ ಸುಭೀಕ್ಷವಾಗಿದೆ ಅಂತ ಭ್ರಮೆಯಲ್ಲಿದ್ದೀರಿ, ಅದರಿಂದ ಹೊರಗೆ ಬನ್ನಿ. ಜನರಿಗೆ ಅಗತ್ಯವಿರೋ ಕೆಲಸ ಈಗಲಿಂದಲೇ ಆರಂಭಿಸಿ ಎಂದು ಒತ್ತಾಯಿಸಿದ್ದಾರೆ.