ಮನೆ Latest News ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ, ಅವರೂ ಮಾಡಬೇಕು: ಸಿಎಂ ಸಿದ್ದರಾಮಯ್ಯ...

ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ, ಅವರೂ ಮಾಡಬೇಕು: ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ, ಅವರೂ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಾರ್ಚ್ ಮೂರನೇ ತಾರೀಖಿನಿಂದ‌ ಬಜೆಟ್ ಶುರುವಾಗುತ್ತದೆ. ಹೊಸ ವರ್ಷದ ಮೊದಲನೇ ಅಧಿವೇಶನ ಆಗಿರೋದ್ರಿಂದ ಮೂರನೇ ತಾರೀಖು ರಾಜ್ಯಪಾಲರು ಭಾಷಣ ಮಂಡಿಸುತ್ತಾರೆ. ಅದರ ಮೇಲೆ ಚರ್ಚೆ ಆಗುತ್ತದೆ.೨೫-೨೬ ನೇ ಸಾಲಿನ ೭ ರಂದು ಶುಕ್ರವಾರ ಆಯವ್ಯಯ ಮಂಡಿಸುತ್ತೇವೆ.ಅದು ಅದರ ಮೇಲಿನ ಚರ್ಚೆ ಮಾಡುತ್ತೇವೆ. ಎಷ್ಟು ದಿನ ನಡೆಸಬೇಕು ಅಂತ ಬ್ಯುಸಿನೆಟ್ ಕಮಿಟಿ‌ನಲ್ಲಿ ಚರ್ಚೆ ಮಾಡುತ್ತೇವೆ.ಕಳೆದ ಅನೇಕ ದಿನದಿಂದ ಬೇರೆ ಬೇರೆ ಇಲಾಖೆ ಜೊತೆ ಸಭೆ ಮಾಡಿದ್ದೀನಿ.ನನಗೆ ಅನಾರೋಗ್ಯ ಕಾರಣ ಇದ್ದರೂ ಸಭೆ ಮಾಡಿದ್ದೀನಿ.ಇವತ್ತು ಕೂಡ ಸಭೆ ಮಾಡಿದ್ದೀನಿ, ರೈತ ಮುಖಂಡರು ತಮ್ಮ ಅಭಿವೃದ್ಧಿ ಮುಂದಿಟ್ಟಿದ್ದಾರೆ ಎಂದರು.

ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇವೆ. ಬೆಲೆ ಏರಿಕೆ ಜಾಸ್ತಿ ಆಗ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ. ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ, ಅವರೂ ಮಾಡಬೇಕು ಎಂದರು.

ಜನಜೀವನ ಮಿಷಿನ್ ಯೋಜನೆ ಕುರಿತು ವಾಗ್ವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಚರ್ಚೆ ಎಲ್ಲಾ ಮಾಡಿದ್ದೀನಿ. ನಮ್ಮ ವೇಗಕ್ಕೆ ಅನುಗುಣವಾಗಿ ಅವರು ಮಾಡುತ್ತಿಲ್ಲ. ಕೇಂದ್ರದ ಪಾಲನ್ನ ಅವರು ಕೊಡುತ್ತಿಲ್ಲ. ಹಾಗಾಗಿ ನಾವು ಅದನ್ನ ಟ್ವೀಟ್ ಮಾಡಿದ್ದೀವಿ. ಮೆಟ್ರೋ ರೈಲಿನ ದರ ನಿಗದಿ ಕಮಾಡಲು ಕೇಂದ್ರ ಸರ್ಕಾರ ಕಮಿಟಿ ಮಾಡಿದ್ದಾರೆ.ಅದರಲ್ಲಿ ಇಬ್ಬರು ಕೇಂದ್ರದ ಅಧಿಕಾರಿಗಳು ಇರ್ತಾರೆ, ಒಬ್ಬರು ರಾಜ್ಯ ಸರ್ಕಾರದವರು ಇರ್ತಾರೆ. ಅದು ಅಟಾನಮಸ್ ಬಾಡಿ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಮಾಡಿರೋದು. ಬೆಲೆ ನಿಗದಿ ಮಾಡಲು ನಾವು ಪ್ರಪ್ರೊಸಲ್ ಕೊಡುತ್ತೇವೆ. ಆದ್ರೆ ಬೆಲೆ ನಿಗದಿ ಮಾಡೋದು ಕಮಿಟಿಯವರು. ರಿಟೈರ್ಡ್ ಹೈಕೋರ್ಟ್ ಜಡ್ಜ್ ಅಫ್ ತಮಿಳುನಾಡು ಕಮಿಟಿ ಮುಖ್ಯಸ್ಥರು ಎಂದರು.

ಅನ್ನಭಾಗ್ಯ ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ಆಗಿಲ್ಲ ಅಂತ ಯಾರು ಹೇಳಿದ್ದು?.ನೋಡಪ್ಪ, ಯಾವುದನ್ನು ಕೂಡ ನಿಲ್ಲಿಸೋ ಪ್ರಶ್ನೆ ಇಲ್ಲ.ಇಲ್ಲಿಯವರೆಗೆ ಮಾಡಿದ್ದೀವಿ ಅಂದ್ರೆ ಮುಂದೆಯೂ ಮಾಡುತ್ತೇವೆ.ಮೂರು ತಿಂಗಳಿಂದ ಪೆಂಡಿಂಗ್ ಇರೋದು ನನಗೆ ಗೊತ್ತಿಲ್ಲ, ಕೂಡ್ಲೇ ಬಿಡುಗಡೆ ಮಾಡುತ್ತೇವೆ ಎಂದರು.

ಮಂಡಿನೋವಿನ ನಡುವೆಯೂ ವಿಧಾನಸೌಧದಲ್ಲಿ ಬಜೆಟ್ ಮೀಟಿಂಗ್ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಮಂಡಿನೋವಿನ ನಡುವೆಯೂ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮೀಟಿಂಗ್ ಮಾಡಿದರು. ಮುಂದಿನ ತಿಂಗಳು ಬಜೆಟ್ ಇರೋದ್ರಿಂದ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿದ್ರು.ಇನ್ನು ಮಂಡಿನೋವಿನ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವ್ಹೀಲ್ ಚೇರ್ ನಲ್ಲಿ ಸಭೆಗೆ ಆಗಮಿಸಿದ್ರು.

ಸಿಎಂ ಸಿದ್ದರಾಮಯ್ಯ ರೈತರು ಮತ್ತು ರೈತರ ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಚಿವ ವೆಂಕಟೇಶ್, ಬಿ ಆರ್ ಪಾಟೀಲ್ ಭಾಗಿಯಾಗಿದ್ದರು.

ರೈತರ ಬೇಡಿಕೆಗಳನ್ನು ನಿರಂತರವಾಗಿ, ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲೇ, ಆದ್ದರಿಂದ ರೈತರ ಬೇಡಿಕೆಗಳ ಈಡೇರಿಕೆ ನಮ್ಮ ಪ್ರಥಮ ಆದ್ಯತೆಯಾಗಿದೆ ಎಂಬುದನ್ನು ಈ ವೇಳೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು. ಇನ್ನು ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಿಗೆ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನು ಒಕ್ಕೋರಲಿನಿಂದ ಅಭಿನಂದಿಸಿದರು.

ವಿಧಾನಮಂಡಲದ ಅಧಿವೇಶನ ಮಾರ್ಚ್ 3, 2025 ರಿಂದ ಪ್ರಾರಂಭವಾಗಲಿದೆ. ನೂತನ ವರ್ಷದ ಮೊದಲನೇ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು, ಮಾರ್ಚ್ 7 ರಂದು, 2025-2026 ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಗುವುದು. ಆಯವ್ಯಯದ ಮೇಲೆ ಚರ್ಚೆ ನಡೆದು ಉತ್ತರವನ್ನು ಮಾರ್ಚ್ ತಿಂಗಳ ಕೊನೆಯಲ್ಲಿ ನೀಡಲಾಗುವುದು. ಅಧಿವೇಶನ ಎಷ್ಟು ದಿನದವರೆಗೆ ನಡೆಸಬೇಕೆಂದು ವ್ಯವಹಾರ ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಲಾಗುವುದು. ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಇಂದು ರೈತ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ್ದೇನೆ. ರೈತರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸುವಾಗ ಇತಿಮಿತಿಯೊಳಗೆ ಸಲಹೆಗಳನ್ನು ಸೇರ್ಪಡೆ ಮಾಡಲಾಗುವುದು. ಕರ್ನಾಟಕ ಸರ್ಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾವತ್ತೂ ರೈತರ ಪರವಾಗಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.