ಮನೆ Latest News ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಬಿಟ್ಟ ವಿಚಾರ; ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಬಿಟ್ಟ ವಿಚಾರ; ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ

0

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರ‌ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ.ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ ರೆಸ್ಟ್‌ ನಲ್ಲಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವರಿಷ್ಟರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

ಮೆಟ್ರೋ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರವೂ ಇದೆ. ಮೆಟ್ರೋ ನಿರ್ವಹಣೆ ಕೇಂದ್ರದ ಕೈನಲ್ಲಿದೆ. ರಾಜ್ಯ ಸರ್ಕಾರದ ಕೈನಲ್ಲಿ ಏನಿಲ್ಲ. ರಾಜ್ಯ ಸರ್ಕಾರ ಏನಾದರೂ ಇದ್ದರೆ ಕೇಂದ್ರಕ್ಕೆ ಪತ್ರ ಬರೆಯಬಹುದು. ಮೆಟ್ರೋ ಬೋರ್ಡ್ ಶಿಫಾರಸ್ಸಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ. ಸಂಸದರ ಹೇಳಿಕೆ‌ಯನ್ನ ನಾನು ನೋಡಿದ್ದೇನೆ. ಮೋದಿ ಮುಂದೆ ಕೇಂದ್ರ ರೈಲ್ವೆ ಸಚಿವರ ಮುಂದೆ ಇವರು ಬೇಡಿಕೆ ಇಡಲಿ. ಮೆಟ್ರೋಗೆ ಕೇಂದ್ರದ ಸಹಕಾರ ಹೆಚ್ಚಿಸಲಿ. ನಮ್ಮ ತೆರಿಗೆ ಪಾಲಿನ‌ ಹಣವನ್ನ ಕೊಡಿಸಲಿ. ಮೆಟ್ರೋ ಸ್ಟೇಷನ್ ಮುಂದ್ರೆ ಬಾವುಟ ಹಿಡಿದು ರಾಜಕೀಯ ಡ್ರಾಮಾ‌ ಮಾಡೋದನ್ನ ಬಿಡಿ ಎಂದು ಬಿಜೆಪಿಗರ ವಿರುದ್ಧ ಡಿ‌ಕೆ ಸುರೇಶ್ ವಾಗ್ದಾಳಿ ನಡೆದಿದ್ದಾರೆ.

ಡಿಕೆಶಿ ವಿರುದ್ಧ ಮುನಿರತ್ನ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಂಸದರು, ಡಾಕ್ಟರ್ ಹೇಳಿದ್ರಲ್ಲ, ತಲೆಗೆ ಪೆಟ್ಟು ಬಿದ್ದಿದೆ ಎಂದಿದ್ರು. ನಾನ್ ಹೇಳಿದ್ದಲ್ಲ ತಜ್ಞ ವೈದ್ಯರು ಹೇಳಿದ್ರು. ಆ್ಯಸಿಡ್ ದಾಳಿಯಾಗಿ ತಲೆಗೆ ಪೆಟ್ಟು ಬಿದ್ದಿದೆ. ತಲೆ ಕೆಟ್ಟಿದೆ ಎಂದಿದ್ರು ಅವರ ಸಲಹೆ ಪಡೆದು ಆಸ್ಪತ್ರೆಗೆ ತೋರಿಸಿಕೊಳ್ಳಲಿ. ಅವರು‌ ಈ‌ ಹಿಂದೆ ಏನ್ ಮಾಡಿದ್ರು ಅಂತ ಎಲ್ಲರಿಗೂ ಗೊತ್ತಿದೆ ಎಂದ್ರು. ನನ್ನ ಮೇಲೆ ಮತ್ತೆ ಕೇಸ್ ಹಾಕಿಸಬಹುದು ಎಂಬ ಮುನಿರತ್ನ ಆತಂಕ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಸಂಚು ಕುತಂತ್ರ ಮತ್ತು ಸಂಚು ಮಾಡ್ತಿದ್ದಾರೆ.ಅದನ್ನ ಮುಂಚಿತವಾಗಿ ಬೇರೆಯವರಿಗೆ ತಿಳಿಸೋ ಕೆಲಸ ಮಾಡ್ತಿದ್ದಾರೆ.ಮೊದಲಿನಿಂದಲೂ ಯಾವ ಯಾವ ಸ್ಟೇಷನ್‌ನಲ್ಲಿ ಕೇಸ್ ಇದೆ. ಯಾರ್ ಯಾರಿಗೆ ತೊಂದರೆ ಕೊಟ್ಟಿದ್ದಾರೆ ಅದು ಮಂದುವರಿಬಹುದು. ಅದೇ ಕಾರಣಕ್ಕೆ ಈಗ ಹೀಗೆ ಮಾಡ್ತಿರಬಹದು ಎಂದರು.

ಪಂಚತಾರಾ ಹೋಟೆಲ್ ನಲ್ಲಿ ಪರ್ಸೆಂಟೇಜ್ ವ್ಯವಹಾರ ಮಾಡ್ತಾರೆಂದು ಮುನಿರತ್ನ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಶಿವಕುಮಾರ್ ಪಂಚತಾರ ಹೋಟೆಲ್ ಗೆ ಹೋಗಲ್ಲ. ಅದೇನಿದ್ರೂ ಬಿಜೆಪಿ ಕಲ್ಚರ್. ಅವರು ಯಾರ್ ಯಾರಿಗೆ ಏನ್ ಏನ್ ಮಾಡಿದ್ದಾರೆ. ಅವರ ಮೇಲಿನ ಆರೋಪದಿಂದ ಮೊದಲು ಹೊರ ಬರಲಿ ಎಂದುಮುನಿರತ್ನ ವಿರುದ್ಧ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.