ಮನೆ Latest News ಯಡಿಯೂರಪ್ಪ ವೀರಶೈವ-ಲಿಂಗಾಯತ ನಾಯಕ ಅಲ್ಲ,ಯಡಿಯೂರಪ್ಪ ಜಾತ್ಯಾತೀತ ನಾಯಕ, ಮಾಸ್ ಲೀಡರ್; ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ....

ಯಡಿಯೂರಪ್ಪ ವೀರಶೈವ-ಲಿಂಗಾಯತ ನಾಯಕ ಅಲ್ಲ,ಯಡಿಯೂರಪ್ಪ ಜಾತ್ಯಾತೀತ ನಾಯಕ, ಮಾಸ್ ಲೀಡರ್; ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ

0

ಬೆಂಗಳೂರು: ಯಡಿಯೂರಪ್ಪ ವೀರಶೈವ-ಲಿಂಗಾಯತ ನಾಯಕ ಅಲ್ಲ,ಯಡಿಯೂರಪ್ಪ ಜಾತ್ಯಾತೀತ ನಾಯಕ, ಮಾಸ್ ಲೀಡರ್; ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಪೇಮೆಂಟ್ ಸ್ವಾಮೀಜಿ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ  ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಇದು ಸ್ವಾಮೀಜಿಗಳಿಗೆ ಮಾಡಿದ ಅಪಮಾನ, ಕ್ಷಮೆ ಕೇಳಬೇಕು.ಯಡಿಯೂರಪ್ಪ ವೀರಶೈವ-ಲಿಂಗಾಯತ ನಾಯಕ ಅಲ್ಲ.ಯಡಿಯೂರಪ್ಪ ಜಾತ್ಯಾತೀತ ನಾಯಕ, ಮಾಸ್ ಲೀಡರ್ ಎಂದಿದ್ದಾರೆ.

ಯತ್ನಾಳ್ ಬಿಜೆಪಿ ಜೊತೆ ಭಿನ್ನಮತ ಮಾಡಿ ಸಸ್ಪೆಂಡ್ ಆಗಿ, ಯಡಿಯೂರಪ್ಪ ಕಾಲು ಹಿಡಿದು ವಿಜಯಪುರ ನಗರದಲ್ಲಿ ಸ್ಪರ್ಧೆ ಮಾಡಿದವರು.ಬಸನಗೌಡ ಪಾಟೀಲ್ ಯತ್ನಾಳ್ ನಿಮ್ಮ ಮೂಲ ಕ್ಷೇತ್ರ ಬಬಲೇಶ್ವರದಲ್ಲಿ ಯಾಕೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.ಯಡಿಯೂರಪ್ಪ ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ಕೊಟ್ಟಿರುತ್ತಿದ್ದರೆ ನೀನು ಶಾಸಕ ಆಗುತ್ತಿರಲಿಲ್ಲ.ನಿನ್ನ ಇತಿಹಾಸ ನಮಗೆ ಗೊತ್ತಿದೆ, ಹೇಳಬೇಕಾ?. ನೀನು ಮೂಲತಃ ರಾಜಕೀಯ ಕುಟುಂಬನಾ?.ನೀನು ಟಿಪ್ಪರ್ ಡ್ರೈವರ್ ಆಗಿ ಬಸ್ ನಲ್ಲಿ ಕಂಡೆಕ್ಟರ್ ಆಗಿ ಟಿಕೆಟ್ ಹರಿಯುತ್ತಿದ್ದವನು.ಇನ್ನೂ ಇತಿಹಾಸ ಇದೆ, ಹೇಳಬೇಕಾ ಅದು?.ಸಾವಿರಾರು ಕೋಟಿಯ ಸಕ್ಕರೆ ಕಾರ್ಖಾನೆ ಎಲ್ಲಿಂದ ಬಂತು?. ಮಿಸ್ಟರ್ ಯತ್ನಾಳ್ ಸಿದ್ದೇಶ್ವರ ಸಂಸ್ಥೆ ನೀನು ಕಟ್ಟಿದ್ದಲ್ಲಪ್ಪಾ, ನೀನು ಅಲ್ಲಿಗೆ ವಕ್ಕರಿಸಿಕೊಂಡಿದ್ದು.ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿನ್ನ ಮಗನನ್ನು ವೈಭವೀಕರಿಸುವುದು ಕುಟುಂಬ ರಾಜಕೀಯ ಅಲ್ವಾ?.ಸಿದ್ದಶ್ರೀ ಸಂಸ್ಥೆಗೆ ನಿನ್ನ, ಪತ್ನಿ, ಮಗನನ್ನು ಡೈರೆಕ್ಟರ್ ಮಾಡಿದ್ದು ಕುಟುಂಬ ರಾಜಕೀಯ ಅಲ್ವಾ? ಎಂದು ಸವಾಲು ಹಾಕಿದ್ದಾರೆ.

ಮಿಸ್ಟರ್ ಕುಮಾರ್ ಬಂಗಾರಪ್ಪ ಮೊನ್ನೆಯವರೆಗೆ ಸೊರಬದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಬಂದಿರಲಿಲ್ಲ.ಮಂಡಲ ಅಧ್ಯಕ್ಷ ನೇಮಕ ಆದಾಗ ನೀನು ಪರ್ಯಾಯ ಅಧ್ಯಕ್ಷ ಮಾಡಲಿಲ್ವಾ?.ನಿನ್ನ ತಂದೆ ಬಿಜೆಪಿಗೆ ಬಂದಾಗ ನೀನು ಬಂದಿದ್ಯಾ?.ಸೋತು ನೀನು ಸವಕಲು ನಾಣ್ಯ ಆಗಿದ್ದೆ.ಭಿನ್ನಮತಿಯರು ನಾಲ್ಕೈದು ಜನ ನಿನ್ನ ಮನೆಗೆ ಬಂದಾಗ ಈಗ ರಾಷ್ಟ್ರೀಯ ನಾಯಕ ಆಗಲು ಹೊರಟಿದ್ಯಾ?. ನಿನ್ನ ಅಧ್ಯಕ್ಷ ಮಾಡಲು ಹೊರಟಿದ್ದಾರೆ, ಶಹಬ್ಬಾಸ್ ನಿಮಗೆ ಬೇರೆ ಯಾರೂ ಸಿಗಲಿಲ್ವಾ?.2023 ರಲ್ಲಿ ಸೋತ ಬಳಿಕ ಕಾಂಗ್ರೆಸ್ ಗೆ ಹೋಗಲು ರೆಡಿಯಾಗಿದ್ದೆ. ಅಲ್ಲಿ ನಿನ್ನ ಸಹೋದರ ಮಧು ಬಂಗಾರಪ್ಪ ಅಡ್ಡಗಾಲು ಹಾಕಿದ್ದು ನೆನಪಿಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ನಾಟಕ ಬಂದ್ ಮಾಡಿ.ದೆಹಲಿಗೆ ಹೋಗಿ ಬಂದು ಕಾಮಿಡಿ ಪೀಸ್ ಆಗಿದ್ದಾರೆ.ಯಡಿಯೂರಪ್ಪ, ವಿಜಯೇಂದ್ರ‌ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ.ಮುಂದಿನ ಬುಧವಾರ ಮಾಜಿ ಸಚಿವರು, ಮಾಜಿ ಶಾಸಕರು ನೂರಕ್ಕೂ ಹೆಚ್ಚು ಜನ ಸಭೆ ಮಾಡುತ್ತೇವೆ.ಚುನಾವಣೆಗೆ ಸ್ಪರ್ಧೆ ಮಾಡಿದವರು ಕೂಡಾ ಇರುತ್ತಾರೆ.ಫೆಬ್ರವರಿ 12 ರಂದು ದೊಡ್ಡ ಸಭೆ ಮಾಡುತ್ತೇವೆ.ಕಾಂಗ್ರೆಸ್-ಬಿಜೆಪಿ ಬಿಟ್ಟು ಬಂದವರು ಬಿಜೆಪಿಯಲ್ಲಿ ಸಮಾಧಾನದಲ್ಲಿ ಇದ್ದಾರೆ.ಮಿಸ್ಟರ್ ಕುಮಾರ್ ಬಂಗಾರಪ್ಪ ಮನೆಯಲ್ಲಿ ಕೂತಿದ್ದೆ ನೀನು

 

ನೀವು ವಿಜಯೇಂದ್ರ‌, ಯಡಿಯೂರಪ್ಪ ಟೀಕೆ ಮಾಡೋದು ಒಂದೇ, ಮೋದಿ, ಅಮಿತ್ ಷಾ ಟೀಕಿಸೋದು ಒಂದೇ.ನಾವು ದೆಹಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ.ಇವರು ದೆಹಲಿಗೆ ದಂಡಯಾತ್ರೆ ಮಾಡುತ್ತಿರುವ ದಂಡಪಿಂಡಗಳು.ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ.ವಿಜಯೇಂದ್ರ‌ ಅಧ್ಯಕ್ಷರಾಗುತ್ತಾರೆ ಅಂತಾ ತಪ್ಪಿಸಲು ಚಡಪಡಿಸುತ್ತಿದ್ದಾರೆ ಎಂದರು.

ಮಿಸ್ಟರ್ ಹರೀಶ ನೀನು ಯಾರಿಂದ ಶಾಸಕ ಆದೆ ಗೊತ್ತಿದ್ಯಾ?.ನಿನ್ನ ಕ್ಷೇತ್ರದಲ್ಲಿ ಒಂದೇ ಒಂದು ಬೂತ್ ಸಮಿತಿ ಆಗಿಲ್ಲ.ಹರಿಹರದಲ್ಲಿ ನಿನ್ನ ಯೋಗ್ಯತೆ ಗೊತ್ತಿದೆ.ನೀನೇನು ಮಾಡಿದ್ಯಪ್ಪಾ ಪುಣ್ಯಾತ್ಮ.ಹೀಗೇ ಮಾತಾಡಿದರೆ ಜನ ದಂಗೆ ಏಳುತ್ತಾರೆ.ವಿಜಯೇಂದ್ರ‌ ಇಳಿಸಿದರೆ ಬಿಜೆಪಿ ಹತ್ತು ಸ್ಥಾ‌ನ ಕೂಡಾ ಬರಲ್ಲ ಎಂದ ಅವರು ಫೆಬ್ರವರಿ 10ಕ್ಕೆ ಶುಭ ಸುದ್ದಿ ಎಂದು ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆಗೆ ರಿಯ್ಯಾಕ್ಟ್ ಮಾಡಿ ವಿಜಯೇಂದ್ರ‌ ಅಧ್ಯಕ್ಷರಾಗಿ ಮುಂದುವರಿಯುವುದೇ ಶುಭ ಸುದ್ದಿ.23 ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ‌ ಪಾತ್ರ ಇಲ್ಲ.ಸಂಘಟನಾ ಪರ್ವ ಮುಗಿದ ಬಳಿಕ ನಾವು ಹುಟ್ಟುಹಬ್ಬ ಮಾಡುತ್ತೇವೆ ಎಂದಿದ್ದಾರೆ.