ಬೆಂಗಳೂರು; ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ವಿಕಾಸಸೌಧದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ಯತ್ನಾಳ್ ಟೀಂನಿಂದ ಹೈಕಮಾಂಡ್ ನಾಯಕರ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ.ನಾನು ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಪಕ್ಷದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ.ಪಕ್ಷದ ಹಿತದೃಷ್ಟಿ ಇಟ್ಟಿಕೊಂಡು ಆಲೋಚಿಸಬೇಕಾಗಿದೆ.ಎಷ್ಟೋ ಜನರು ತಮ್ಮ ಜೀವವನ್ನ ಕೊಟ್ಟು ಮನೆ, ಮಠ ಹಾಳು ಮಾಡಿಕೊಂಡಿದ್ದಾರೆ.ಪಕ್ಷದ ಬೆಳವಣೆಗಾಗಿ ಅಧಿಕಾರ ಮರೀಚಿಕೆ ಆಗಿದ್ದರೂ ಕೂಡ ದುಡಿದಿದ್ದಾರೆ.ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ.ನಿತ್ಯ ಮೈಕ್ರೋ ಫೈನಾನ್ಸ್ ವಿಚಾರಕ್ಕೆ ಸಾವು ತಪ್ಪಿದ್ದಿಲ್ಲ.ಕಳಪೆ ಔಷಧಿಯ ಕಾರಣಕ್ಕೆ ಬಾಣಂತಿಯರು ಸಾವನ್ನಪ್ಪಿದ್ದಾರೆ. ಅಭಿವೃದ್ಧಿ ಅನ್ನೋದು ನಿಂತ ಸ್ಥಿತಿಯಲ್ಲೇ ನಿಂತಿದೆ.ಆಡಳಿತ ಶಾಸಕರಲ್ಲಿಯೇ ಅಸಹನೆ ನಿರ್ಮಾಣವಾಗಿದೆ.ಈ ಸಂದರ್ಭದಲ್ಲಿ ನಾವು ಎಲ್ಲರೂ ಒಟ್ಟಾಗಿ ಜನರ ಪರ ಹೋರಾಟ ಮಾಡುವುದು ಕರ್ತವ್ಯವಾಗಿದೆ.ಹೀಗಾಗಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಸಮಾಧಾನ ತಂದಿಲ್ಲ.ಪಕ್ಷಕ್ಕೆ ಮಾಲೀಕರು ನಾವಲ್ಲ, ಪಕ್ಷದ ಮಾಲೀಕರು ನಮ್ಮ ಸಾಮಾನ್ಯ ಕಾರ್ಯಕರ್ತರು.ಅವರಿಗೆ ನೋವಾಗುವಂತೆ, ದುಃಖ ತರುವಂತೆ ನಾವು ನಡೆದುಕೊಳ್ಳಬಾರದು.ಜನ ಹಿತವನ್ನ ಮರೆತು ರಾಜಕಾರಣ ಮಾಡಿದ್ರೆ, ಅವರ ಪರವಾಗಿ ಹೋರಾಟ ಮಾಡದಿದ್ದರೆ ನಾವು ಕಳೆದು ಹೋಗುತ್ತೇವೆ ಪಕ್ಷಕ್ಕೂ ನಷ್ಟ ಆಗುತ್ತೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ಚರ್ಚೆ ಮಾಡೊಲ್ಲ.ಕೆಲವು ವ್ಯಕ್ತಿಗಳಿಗೆ, ಕೆಲವು ಜಾಗದಲ್ಲಿ ಹೇಳುವ ಜಾಗದಲ್ಲಿ ಹೇಳಿದ್ದೇನೆ.ಬಿಜೆಪಿ ರೆಬಲ್ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳದ ವಿಚಾರದ ಬಗ್ಗೆ ಮಾತನಾಡಿದ ಅವರು ಪಕ್ಷದ ಬಗ್ಗೆ ನಮಗೆಲ್ಲ ಗೌರವ ಇದೆ. ಎರಡನೇ ಆಯ್ಕೆ ಇಲ್ಲ, ಸೈದ್ದಾಂತಿಕವಾಗಿ ಕಾರಣದಿಂದಾಗಿ ಬಿಜೆಪಿಯನ್ನ 35 ವರ್ಷಗಳಿಂದ ಆಯ್ಕೆ ಮಾಡಿಕೊಂಡಿದ್ದೇವೆ. ಎರಡನೇ ಆಯ್ಕೆ ಇಲ್ಲ, ಸುಖ ದುಃಖದ ಜೊತೆಗೆ ಪಕ್ಷದ ಜೊತೆಗೆ ಇರುತ್ತೇವೆ.ಪಕ್ಷವನ್ನ ಸರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ ಎಂದರು.ಅವರ ಮನಸ್ಸಿನಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ.ಹೈಕಮಾಂಡ್ ನಾಯಕರೇ ಹೇಳಬೇಕು.ಸಿ.ಟಿ ರವಿ ಸೇರಿದಂತೆ ಬಿಜೆಪಿಯ ಹಿರಿಯರನ್ನ ವಿಜಯೇಂದ್ರ ಬಣ ಕಡೆಗಣನೆ ವಿಚಾರದ ಬಗ್ಗೆ ಮಾತನಾಡಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಸಾರ್ವಜನಿಕವಾಗಿ ನಾನು ಏನನ್ನೂ ಕಮೆಂಟ್ ಮಾಡುವುದಿಲ್ಲ.ಸಾಮಾನ್ಯ ಕಾರ್ಯಕರ್ತನಾಗಿದ್ದವನಿಗೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗುವ ಅವಕಾಶ ಪಕ್ಷ ಕೊಟ್ಟಿದೆ.ಕೆಲವು ಸಂದರ್ಭದಲ್ಲಿ ನೇಪತ್ಯಕ್ಕೆ ಸರಿದಿದ್ದೇವೆ ಅಂದರೆ ಶಾಶ್ವತವಾಗಿ ನೇಪತ್ಯಕ್ಕೆಸರಿದಿದ್ದೇವೆ ಅಂತಲ್ಲ.ಸಂಕಷ್ಟವು ಕೂಡ ನಮ್ಮಸಾಮರ್ಥ ಹೆಚ್ಚಿಸುವುದಕ್ಕೆ ಬರುವುದು.ನಮ್ಮ ಸಾಮರ್ಥ್ಯ, ಆತ್ಮ ವಿಶ್ವಾಸವನ್ನ ಪರೀಕ್ಷೆ ಮಾಡುವುದಕ್ಕೆ ಬರುವುದು.ನಾನು ನನ್ನ ಸಂಕಷ್ಟ ಜೀವನದಿಂದ ಬರುವ ಸಂಕಷ್ಟಗಳನ್ನ ನನ್ನ ಸಾಮರ್ಥ್ಯ, ಆತ್ಮ ವಿಶ್ವಾಸ ಪರೀಕ್ಷೆಗೆ ಬರೋದು ಎಂದು ಕೊಂಡಿದ್ದೇನೆ.ಸಂಕಷ್ಟ ಕಾಲದಲ್ಲಿ ಹಿಂದೆಜ್ಜೆ ಇಟ್ಟಿಲ್ಲ, ಕಾಲ ಹೀಗೆ ಇರುವುದಿಲ್ಲ ಅನ್ನೋದನ್ನ ಭಗವದ್ಗೀತೆಯಲ್ಲಿ ಕೃಷ್ಣ ಕೇವಲ ಅರ್ಜುನನಿಗೆ ಮಾತ್ರ ಹೇಳಿದ್ದಲ್ಲ.ನಮ್ಮಂತವರಿಗೂ ಹೇಳಿದ್ದು, ಕಾಲ ಹೀಗೆ ಇರುವುದಿಲ್ಲ, ಕಾಲ ಸರಿಯಲೇ ಬೇಕು ನೋಡೋಣ ಎಂದಿದ್ದಾರೆ.
ಹೈಕಮಾಂಡ್ ಏನ್ ನಿರ್ಧಾರ ತೆಗೆದುಕೊಳ್ತಾರೆ ತಲೆ ಬಾಗಿ ಸ್ವೀಕಾರ ಮಾಡ್ತೀವಿ; ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ
ಬೆಂಗಳೂರು; ಹೈಕಮಾಂಡ್ ಏನ್ ನಿರ್ಧಾರ ತೆಗೆದುಕೊಳ್ತಾರೆ ತಲೆ ಬಾಗಿ ಸ್ವೀಕಾರ ಮಾಡ್ತೀವಿ ಎಂದು ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಮೊನ್ನೆ ರಾತ್ರಿ ಜೆ ಪಿ ನಡ್ಡಾ ಅವರನ್ನು ರಮೇಶ್ ಜಾರಕಿಹೊಳಿ ಟೀಂ ಭೇಟಿಯಾಗಿದೆ. ಈ ವೇಳೆ ವಿಜಯೇಂದ್ರ ವಿರುದ್ಧ ದೂರಿನ ಸುರಿಮಳೆ ಸುರಿಸಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸದಂತೆ ಮನವಿ ಮಾಡಿದ್ದಾರೆ.ಅಲ್ಲದೇ ಪ್ರತ್ಯೇಕವಾಗಿ ಕುಮಾರ್ ಬಂಗಾರಪ್ಪ ಬಿ.ಎಲ್ ಸಂತೋಷ್ ಭೇಟಿ ಮಾಡಿದ್ದಾರೆ.
ಇನ್ನು ನಿನ್ನೆ ಈ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೋಳಿ ನಿನ್ನೆ ರಾತ್ರಿಯೇ ಹೈಕಮಾಂಡ್ ಭೇಟಿಯಾಗಿದ್ದೇವೆ.ಜೆ.ಪಿ ನಡ್ಡಾ ಅವರನ್ನು ನಿನ್ನೆ ಭೇಟಿಯಾಗಿದ್ದೇನೆ. ಕೊನೆಯ ಹಂತ ಹಿನ್ನಲೆ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ.ಅಧ್ಯಕ್ಷರ ರೀತಿಯಲ್ಲಿ ಹತಾಶೆ ಭಾವನೆಯಲ್ಲಿ ಮಾತನಾಡುವುದಿಲ್ಲ. ಹೈಕಮಾಂಡ್ ಗೆ ಮನವರಿಕೆ ಮಾಡಿಕೊಂಡಿದ್ದೇವೆ.ಅವರು ಏನ್ ನಿರ್ಧಾರ ತೆಗೆದುಕೊಳ್ತಾರೆ ತಲೆ ಬಾಗಿ ಸ್ವೀಕಾರ ಮಾಡ್ತೀವಿ.ವಿಜಯೇಂದ್ರ ಕರ್ಮಕಾಂಡ ಬಿಚ್ಚಿಡುವ ಬಗ್ಗೆ ಯತ್ನಾಳ್ ಅವರನ್ನೇ ಕೇಳಿ ಎಂದು ಇದೇ ವೇಳೆ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.