ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಬಿಹಾರ ಮೂಲದ ಶೇಖ್ ನುಸ್ರು (30) ಎಂಬಾತನನ್ನು ಬಂಧಿಸಿದ್ದಾರೆ. ಮೊನ್ನೆ ಮಧ್ಯರಾತ್ರಿ ಆರೋಪಿ ಬಿಹಾರ ಮೂಲದ ಶೇಖ್ ನುಸ್ರು ಚಾಮರಾಜ ಪೇಟೆಯಲ್ಲಿ ರಸ್ತೆ ಬದಿಯ ಶೆಡ್ ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಅದರಂತೆ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಘಟನೆಯನ್ನು ಬಿಜೆಪಿ ಮುಖಂಡ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಖಂಡಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಇದೊಂದು ಷಡ್ಯಂತ್ರ. ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ. ಸಚಿವ ಜಮೀರ್ ಮೂರು ಹಸು ಕೊಡಿಸ್ತಿನಿ ಅಂದಿದ್ದಾರೆ. ಅವರಿಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವಾ ? ತಾಳ್ಮೆ ಇಂದ ಇರುವ ಕಾರಣ ರಕ್ತಪಾತ ಆಗಿಲ್ಲ. ರಾಜ್ಯ ಸರ್ಕಾರದ ಅದೃಷ್ಟ ಇದು. 2 ಸಾವಿರದ 227 ಹಸುಗಳು ಆ ಭಾಗದಲ್ಲಿವೆ. ಪಶು ಆಸ್ಪತ್ರೆ ಡೆಮಾಲಿಷ್ ಮಾಡಿ ಸ್ಕೂಲ್ ಕಟ್ಟಲು ಹೊರಟಿದ್ದಾರೆ. ಬೇರೆ ಕಡೆಯಲ್ಲಿ ಸ್ಕೂಲ್ ಕಟ್ಟಲಿ. ಮದರಸಾ ಎದುರು ಅಲ್ಲಿ ಹಸುಗಳನ್ನ ಕಟ್ಟುತ್ತಾರೆ ಎಂದಿದ್ದಾರೆ.
ಇನ್ನು ಈ ಘಟನೆಗೆ ಸಚಿವ ಜಮೀರ್ ಅಹಮದ್ ನೇರ ಕಾರಣ ಎಂದು ಆರೋಪಿಸಿರುವ ಭಾಸ್ಕರ್ ರಾವ್ ಜಮೀರ್ ಕೊಡುವ ಹಣದ ಹಿಂದೆ ಕಾಂಗ್ರೆಸ್ ನವರು ಹೋಗ್ತಾರೆ ಅಷ್ಟೆ. ಪ್ರಕರಣ ಮುಚ್ಚಿಹಾಕಲು ಬಿಹಾರ್ ಮೂಲದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರಿಗೆ ಕೆಲಸ ಇಲ್ಲ ಕಾರ್ಯ ಇಲ್ಲ. ಜಮೀರ್ ಅಹಮದ್ ಮಾಡುತ್ತಿರುವ ಈ ಕೆಲಸವನ್ನ ಜಮೀರ್ ಅಹಮದ್ ಮಾಡುತ್ತಿರುವ ಈ ಕೆಲಸವನ್ನ ಮುಸ್ಲಿಂ ಸಮುದಾಯದವರೇ ಮೆಚ್ಚೋದಿಲ್ಲ. ಜಮೀರ್ ಅಹಮದ್ ಕ್ರಿಯೇಟ್ ಮಾಡ್ತಿರೋ ಕೆಲಸದಿಂದ ಜಮೀರ್ ಶ್ರೀಮಂತ ಆಗ್ತಿದಾರೆ. ಮುಸ್ಲಿಂ ಸಮುದಾಯದಲ್ಲಿ ಒಳ್ಳೆಯವರಿದ್ದಾರೆ. ಆದ್ರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ .ಎಫ್ ಆಯ್ ಆರ್ ಕೂಡ ಸರಿಯಾಗಿ ಹಾಕಿಲ್ಲ. ಅಮಾಯಕನನ್ನ ಕರೆದು ತಂದು ಕೂರಿಸಿದ್ದಾರೆ. ಹಸು ಸಾಕಿದವರನ್ನ ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಈ ತಂತ್ರ ಅಷ್ಟೆ.ಸಾವಿರ ಗೋವನ್ನ ತಂದು ಕೊಟ್ಟರೂ ಮಾಡಿದ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿ ಸಿಸಿಟಿವಿ ಹೆಚ್ಚು ಅಳವಡಿಸಬೇಕು. ಪಶು ಆಸ್ಪತ್ರೆ ಮುಂದುವರೆಸಲು ಕ್ರಮ ತೆಗೆದುಕೊಳ್ಳಬೇಕು. ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನ ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನ ಬಂಧಿಸಬೇಕು. ಜಮೀರ್ ಅಹಮದ್ ಬಾಲ ಬಿಚ್ಚೋಕೆ ಸಿಎಂ ಸಿದ್ದರಾಮಯ್ಯ ಕಾರಣ. ಜಮೀರ್ , ಕಲ್ಲು ಎಸೆಯೋರು, ಬೆಂಕಿ ಹಚ್ಚೋ ಹುಡುಗರನ್ನ ರೆಡಿ ಮಾಡ್ತಿದಾರೆ. ಜಯನಗರ, ಬಿಟಿಎಂ ಎಲ್ಲೂ ನಡೆಯದ ಘಟನೆ ಚಾಮರಾಜನಗರದಲ್ಲಿ ಏಕೆ ನಡೆಯುತ್ತೆ ?. ಜಮೀರ್ ಬ್ರಿಗೇಡ್ ನಿಂದಾಲೆ ಈ ಎಲ್ಲ ಕೃತ್ಯ ನಡೀತಾ ಇದೆ. ಮುಸ್ಲಿಂ ಗೆಳೆಯರು ನನಗೆ ಕಾಲ್ ಮಾಡಿದ್ರು.ಇಂತಹ ಕೃತ್ಯವನ್ನ ನಾವು ಕೂಡ ಸಹಿಸಲ್ಲ, ಬೆಂಬಲಿಸಲ್ಲ ಎಂದ್ರು.ಆದ್ರೆ ಜಮೀರ್ ಬ್ರಿಗೆಡ್ ಇದೆಲ್ಲ ಮಾಡ್ತಿದೆ ಎಂದು ಆರೋಪಿಸಿದ್ದಾರೆ.