ಮನೆ Latest News ನಾನು ಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು: ಬೆಂಗಳೂರಿನಲ್ಲಿ ಕೇಂದ್ರ ಸಚಿವ...

ನಾನು ಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು;  ನಾನು ಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು  ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿ ಹೇಳಿದ್ದೇನೆ. ಚುನಾವಣೆ ನಡೆಯಬೇಕಾದ್ರೆ ಇನ್ನೊಬ್ಬ ಹತ್ರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸೋವಾಗ ಪ್ರತಿಯೊಂದು ಮಾರಾಟಕ್ಕೆ ಇಟ್ಟಿರಲಿಲ್ಲ . ಈ ಸರ್ಕಾರ ಪ್ರತಿಯೊಂದನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ.ಈ ಸರಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ.ನಾನು ಪ್ರಾರಂಭದಲ್ಲೇ ಈ ಸರ್ಕಾರದ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ. ನಾನು ಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು. ಪ್ರೀತಿ ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ 4 ಜನ ಬರ್ತಾರೆ‌ ಚುನಾವಣೆ ನಡೆಸೋಕೆ ಹಣ ಕೊಡ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನಮ್ಮ ಸಹಿಯನ್ನು ಮಾರಾಟಕ್ಕೆ ಇಡೋಕೆ ಆಗೊಲ್ಲ. ಈ ಸರ್ಕಾರ ಸಹಿಯನ್ನ ಮಾರಾಟಕ್ಕೆ ಇಟ್ಟಿದೆ. ಪ್ರತಿ ಕ್ಷಣವೂ ಈ ಸರ್ಕಾರದಲ್ಲಿ ಮಾರಾಟವೇ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇದೇ ವೇಳೆ ಡಿಕೆಶಿಯಿಂದ ಶತ್ರು ಸಂಹಾರ ಪೂಜೆ ವಿಚಾರದ ಬಗ್ಗೆ ಮಾತನಾಡಿದ ಅವರು  ಎಲ್ಲರನ್ನು ದೇವರೇ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ ಎಲ್ಲೋ ಶತ್ರು ನಾಶಕ್ಕೆ ಹೋಗೋದು. ಅಲ್ಲೂ ಕೂಡಾ ದೇವರನ್ನ ಕೇಳೋದು ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೆ. ಇವತ್ತು ಲಕ್ಷಾಂತರ ಜನ ವೈಕುಂಠ ಏಕಾದಶಿ ವೈಕುಂಠ ಬಾಗಿಲು ತೆಗೆಯುತ್ತೆ ಅಂತ ಪ್ರತೀತಿ ಇದೆ‌. ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಲೆದು ಮಾಡಲಿ ಅಂತ, ಮುಕ್ತಿ ಕೊಡಪ್ಪ ಅಂತ  ಪ್ರಾರ್ಥನೆ ಮಾಡಿಕೊಳ್ಳೋದು ಎಂದಿದ್ದಾರೆ.

ವೈಕುಂಠ ಏಕಾದಶಿ ಶುಭಾಶಯಗಳು ತಿಳಿಸಿದ ಅವರು ಇವತ್ತು ಪವಿತ್ರವಾದ ದಿನ.ಆ ವಿಷ್ಣು ದೇಶ ಆಳೋರಿಗೆ, ರಾಜ್ಯ ಆಳೋರಿಗೆ ಎಲ್ಲರಿಗೂ ಸದ್ಬುದ್ದಿ ಕೊಟ್ಟು ಜನತೆಯ ಸಮಸ್ಯೆಗೆ ಒಳ್ಳೆಯ ಕೆಲಸ ಮಾಡುವ ವಾತಾವರಣ ದೇವರು ನಿರ್ಮಾಣ ಮಾಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಎಂಬ ಬಗ್ಗೆ ಮಾತನಾಡಿದ ಅವರು  ಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಹಂಗಾಮಿ ಅಧ್ಯಕ್ಷರು ಹೇಳಿಕೆ ಕೊಟ್ಟಿದ್ದಾರೆ ಅದಕ್ಕಿಂತ ದಾಖಲಾತಿ ಬೇಕಾ..? ಸಿದ್ದರಾಮಯ್ಯ ಮಹಾನ್ ನಾಯಕರು ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ರು ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ. ಕೆಂಪಣ್ಣ ಹೇಳಿದ್ರು ಕೆಂಪಣ್ಣ ಹೇಳಿದ್ರು ಅಂತ ಸಿದ್ದರಾಮಯ್ಯ ಹೇಳ್ತಾರೆ. ಈಗ ಕಂಟ್ರಾಕ್ಟರ್ ಗಳು ಹೇಳ್ತಿಲ್ಲವಾ 60% ಬಗ್ಗೆ. ಅದಕ್ಕಿಂತ ಸಾಕ್ಷಿ ಬೇಕಾ ಇವರಿಗೆ. ಈ ಆಟ ಸರ್ಕಾರ ಬಿಟ್ಟು ಬಿಡಬೇಕು ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ‌ ದಲಿತ ಶಾಸಕರ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಮಾತನಾಡಿ  SC-ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ ಅದಕ್ಕೆ ಸಭೆ ಮಾಡ್ತೀನಿ ಅಂತಾರೆ. ಡಿನ್ನರ್ ಪಾರ್ಟಿ ಮಾಡಿ ಚರ್ಚೆ ಮಾಡ್ತೀವಿ ಅಂತಾರೆ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡೋದಾದ್ರೆ ಕ್ಯಾಬಿನೆಟ್ ಇರೋದು ಯಾಕೆ? SC-ST ಇರಲಿ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ಚರ್ಚೆ ಮಾಡಬೇಕಾ. ಅಥವಾ ಬೇರೆ ಸಪರೇಟ್ ಊಟಕ್ಕೆ ಸೇರಿ ಡಿನ್ನರ್ ನಲ್ಲಿ ಚರ್ಚೆ ಮಾಡ್ತೀರಾ? ಎಂದಿದ್ದಾರೆ.

ಇದೇ ವೇಳೆ  ಕೃಷ್ಣಭೈರೇಗೌಡ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಗ ಸೋತಿರೋದಕ್ಕೆ ಹತಾಶರಾಗಿ ಕುಮಾರಸ್ವಾಮಿ 60% ಆರೋಪ ಮಾಡ್ತಿದ್ದಾರೆ ಅಂತ ಕೃಷ್ಣಭೈರೇಗೌಡ ಹೇಳಿದ್ದಾರೆ. ನಾನು ಮಗ ಸೋತಿರೋದಕ್ಕೆ ಹತಾಶೆಯಾಗಿದ್ದೇನೋ.ಇಲ್ಲವೋ ಅದನ್ನ ಬಿಟ್ಟು ಬಿಡಿ. ಮೊದಲು 60% ಕಮೀಷನ್ ಗೆ ಉತ್ತರ ಹೇಳಪ್ಪ. ಕಂದಾಯ ಇಲಾಖೆ ಏನು ಸತ್ಯವಾಗಿ ನಡೆಯುತ್ತಿದೆಯಾ. ಬೆಂಗಳೂರು AC ಪೋಸ್ಟ್ ಗೆ ಎಷ್ಟು ದುಡ್ಡು ತಗೋತೀರಾ. ಎಷ್ಟು ಫಿಕ್ಸ್ ಮಾಡಿಕೊಂಡಿದ್ದೀರಾ. ಅ ಹಣ ಯಾರ್ ಯಾರಿಗೆ ಹೋಗುತ್ತೆ. ಏನ್ ಏನ್ ನಡೆಸ್ತೀರಾ ನಮಗೆ ಗೊತ್ತಿಲ್ಲವಾ .ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ