ಬೆಂಗಳೂರು; ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಿಗೆ ಪ್ರಿಯಾಂಕ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.ನಾನು ಸಚಿನ್ ಕುಟುಂಬದ ಜೊತೆಗೆ ಮಾತಾಡಿದ್ದೇನೆ. ಬಿಜೆಪಿಯವರು ಹೇಳಿದಂತೆಲ್ಲ ನಾವು ಕುಣಿಯಲು ಆಗಲ್ಲ. ಸಚಿನ್ ಕುಟುಂಬಸ್ಥರಿಗೆ ನಾನೂ ಮಾತಾಡಿ ಭರವಸೆ ನೀಡಿದ್ದೇನೆ. ಪಾರದರ್ಶಕ ತನಿಖೆ ಮಾಡಿಸುವುದು ಸರ್ಕಾರದ ಜವಾಬ್ದಾರಿ. ಬಿಜೆಪಿಗೆ ಸಿಬಿಐ ಮೇಲೆ ಯಾಕೆ ಪ್ರೀತಿ?. ಬಿಜೆಪಿ ಹಾಕಿರುವ ಸ್ಕ್ರಿಪ್ಟ್ ಗೆ ನಾವು ನಟನೆ ಮಾಡಲು ಆಗುವುದಿಲ್ಲ.ಒಂದು ಜೀವ ಹೋಗಿದೆ ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ.ಬಿಜೆಪಿಯವರು ಸಚಿನ್ ಕುಟುಂಬಸ್ಥರಿಗೆ ಪ್ರತಿಭಟನೆಗೆ ಬರಲು ಫೋರ್ಸ್ ಮಾಡ್ತಾ ಇರಲಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.ಸರ್ಕಾರದ ವಿರುದ್ದ ಹೇಳಿಕೆ ನೀಡಿ ಎಂದು ಸಚಿನ್ ಕುಟುಂಬಸ್ಥರಿಗೆ ಬಿಜೆಪಿಯವರು ಒತ್ತಾಯ ಮಾಡ್ತಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುತ್ತಿರುವುದು ತಪ್ಪಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ,
ಹೆಣ ಬಿದ್ದರೆ ಸಾಕು ಬಿಜೆಪಿ ಗೆ ಸಂಭ್ರಮ. ಏನೇ ಆದ್ರೂ ನ್ಯಾಯ ಕೊಡಿಸುವು ಜವಾಬ್ದಾರಿ ನಮ್ಮದು.ಹೂ ಈಸ್ ಚಂದು ಪಾಟೀಲ್? ಸುಪಾರಿ ಕೊಡುವುದಕ್ಕೆ ನಮಗೆ ಕೆಲಸ ಇಲ್ವಾ?. ವಿಜಯೇಂದ್ರ ಸ್ಥಾನಕ್ಕೆ ಗೌರವ ಕೊಡ್ತೀವಿ ಅಂತ ಬಾಯಿಗೆ ಬಂದಂತೆ ಮಾತಾಡಬೇಡಿ. ಸುಪಾರಿ ಕೊಡ್ತೀವಿ ಅಂತ ನಮ್ಮ ಬಗ್ಗೆ ಏನು ಮಾತಾಡೋದು. ಕಲಬುರ್ಗಿ ಯಲ್ಲಿ ಸುಪಾರಿ ರಾಜಕೀಯ ಮಾಡಿಕೊಂಡು ಬಂದಿಲ್ಲ ನಾವು. ವಿಜಯೇಂದ್ರದು ಅತಿ ಆಗ್ತಿದೆ. ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೀನಿನಮಗೂ ಮಾತಾಡುವುದಕ್ಕೆ ಬರುತ್ತದೆ. ನಾವು ಬೀದಿಗೆ ಇಳಿದರೆ ನೀವು ಮನೆ ಸೇರಬೇಕಾಗುತ್ತದೆ. ಏನ್ ಮಾತಾಡ್ತಿದ್ದಾರೆ ಇವರೆಲ್ಲ. ಇವರ ಹುಳುಕುಗಳನ್ನು ನಾವು ತಯಾರಿ ಮಾಡಿದ್ದಾ?. ಬಿಜೆಪಿಯವರ ಸಂಸ್ಕೃತಿ ವೈವಿದ್ಯತೆ ಹೊರಗೆ ಬರುತ್ತಿದೆ. ಅಧಿಕಾರಿಗಳ ಮೇಲೆ ದರ್ಪ ತೋರೋದಾ ನಿಮ್ಮ ಸಂಸ್ಕೃತಿ. ನನ್ನ ಮೇಲೆ ಕಾಂಗ್ರೆಸ್ ಮೇಲೆ ಆರೋಪ ಮಾಡುವ ಮೊದಲು ಲಗಾಮು ಇರಲಿ ನಾಲಗೆ ಮೇಲೆ. ನೀವು ಪೂಜ್ಯ ಅಪ್ಪಾಜಿ ಅಂದ ತಕ್ಷಣ ಎಲ್ಲರೂ ಪೂಜ್ಯರಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವಿಪಕ್ಷ ನಾಯಕ ಅಶೋಕ್ ಮಾತಾಡಿದ್ದು ಸಂಸ್ಕೃತಿನಾ. ಸಿಟಿ ರವಿ ಹೆಣ್ಣುಮಕ್ಕಳ ಬಗ್ಗೆ ಅವ್ಯಾಚ್ಯವಾಗಿ ನಿಂದನೆ ಮಾಡ್ತಾರೆ. ಮುನಿರತ್ನ ಜಾತಿನಿಂದನೆ ಮಾಡ್ತಾರೆ. ಇದೇನಾ ನಿಮ್ಮ ಸಂಸ್ಕೃತಿ. ಮಹಿಳೆಯರ ಮೇಲೆ, ಅಧಿಕಾರಿಗಳ ಮೇಲೆ ದರ್ಪ ತೋರಾದಾ ನಿಮ್ಮ ಸಂಸ್ಕೃತಿನಾ. ನನ್ನ ಬಗ್ಗೆ ಮಾತಾಡೋವಾಗ ನಾಲಿಗೆಗೆ ಲಗಾಮು ಇರಲಿ. ಬೈ ಎಲೆಕ್ಷನ್ ಸೀರಿಯಸ್ ಆಗಿ ತಗೊಂಡಿಲ್ಲ ಅಂತಾ ಬಾಲಿಶ ಹೇಳಿಕೆ ಕೊಡ್ತಾರೆ. ಹಾಗಿದ್ನೇಲೆ ಮಾಜಿ ಸಿಎಂ ಪುತ್ರನನ್ನ ಇಳಿಸಿದ್ದು ಏಕೆ..? ಎಂದು ಪ್ರಶ್ನಿಸಿದ್ದಾರೆ.