ಮನೆ ಪ್ರಸ್ತುತ ವಿದ್ಯಮಾನ ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಆರೋಪಿಗಳು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸುತ್ತಮುತ್ತ ಶಾಮಿಯಾನ:...

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಆರೋಪಿಗಳು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸುತ್ತಮುತ್ತ ಶಾಮಿಯಾನ: ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪೊಲೀಸರ ನಡೆ

0

ಬೆಂಗಳೂರು: ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಗಾಲೇ ಪೊಲೀಸರು ನಟ ದರ್ಶನ್ ಅವರ ಸ್ನೇಹಿತೆ ಪವಿತ್ರ ಗೌಡ ಸೇರಿ ಒಟ್ಟು 14 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಇನ್ನು ಈ ಠಾಣೆಯ ಸುತ್ತಮುತ್ತ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರ ಆದೇಶದಂತೆ ಶಾಮಿಯಾನ ಹಾಗೂ ಸೈಡ್ ವಾಲ್ ಗಳನ್ನು ಹಾಕಲಾಗಿದ್ದು ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು ಆರೋಪಿಗಳನ್ನು ಅರೆಸ್ಟ್ ಮಾಡಿ ಠಾಣೆಗೆ ತರುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ಠಾಣೆಯ ಬಳಿ ಜಮಾಯಿಸಿದ್ದರು. ಹಾಗಾಗಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಆದರೆ ಇಂದು ಅಭಿಮಾನಿಗಳು ಯಾರೂ ಕೂಡ ಮುಖ ಮಾಡಿಲ್ಲ. ಹೀಗಿದ್ದರೂ ಸಹ ಅಲ್ಲಿ ಶಾಮಿಯಾನ ಹಾಕಿರೋದು ಸಾಕಷ್ಟು ಅನುಮಾನಗಳನ್ನು ಮೂಡಿದೆ. ಆರೋಪಿಗಳನ್ನು ಮಾಧ್ಯಮದವರ ಕಣ್ಣಿಂದ ತಪ್ಪಿಸೋದಕ್ಕೆ ಈ ರೀತಿ ಮಾಡಲಾಗಿದ್ಯಾ ಅಥವಾ ಆರೋಪಿಗಳನ್ನು ಬಚಾವ್ ಮಾಡೋದಕ್ಕೆ ಈ ರೀತಿ ಪ್ಲ್ಯಾನ್ ಮಾಡಲಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಪೊಲೀಸ್ ಠಾಣೆ ಅನ್ನೋದು ಸಾರ್ವಜನಿಕ ಆಸ್ತಿ. ಸಾರ್ವಜನಿಕರು ತೊಂದರೆಯಾದಾಗ ಪೊಲೀಸ್ ಠಾಣೆಗೆ ಬರಬೇಕಾದ ಸನ್ನಿವೇಶ ಬಂದಾಗ ಬರಬೇಕಾಗುತ್ತದೆ. ಹೀಗಿರುವಾಗ ಯಾಕೆ ಈ ಥರಾ ಮಾಡಲಾಗಿದೆ. ಸಾರ್ವಜನಿಕ ಆಸ್ತಿಯಾಗಿರೋ ಪೊಲೀಸ್ ಠಾಣೆಯನ್ನು ಯಾರಿಗೋ ಅನುಕೂಲವಾಗೋ ರೀತಿ ಯಾಕೆ ಬಳಕೆ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಇದರ ಬೆನ್ನಲೇ ಪ್ರಕರಣವನ್ನು ಮುಚ್ಚಿ ಹಾಕೋದಕ್ಕೆ ಭಾರೀ ಹುನ್ನಾರ ನಡೆತಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಪ್ರಕರಣದಲ್ಲಿ ದರ್ಶನ್ ಅವರನ್ನು ಬಚಾವ್ ಮಾಡಲು ಮೃತದೇಹದ ಪರೀಕ್ಷೆ ಮೇಲೆ ಹಾರ್ಟ್ ಅಟ್ಯಾಕ್ ನಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ರಿಪೋರ್ಟ್ ನೀಡಲು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಪ್ರಭಾವಿ ರಾಜಕಾರಣಿಯೊಬ್ಬರು ಒತ್ತಡ ಹಾಕಿದ್ರು ಎನ್ನಲಾಗಿದೆ. ಅಲ್ಲದೇ ವೈದ್ಯರಿಗೆ ಅದಕ್ಕಾಗಿ 1 ಕೋಟಿ ರೂಪಾಯಿಗಳ ಆಫರ್ ನೀಡಲಾಗಿತ್ತಂತೆ.ಆದರೆ ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.