ಮನೆ Latest News ಪ್ರಿಯಾಂಕ್ ಖರ್ಗೆ ನಿಮ್ಮ ತಲೆ ದಂಡ ಪಕ್ಕಾ : ಪ್ರಿಯಾಂಕ ಖರ್ಗೆ ವಿರುದ್ಧ ವಿಧಾನ...

ಪ್ರಿಯಾಂಕ್ ಖರ್ಗೆ ನಿಮ್ಮ ತಲೆ ದಂಡ ಪಕ್ಕಾ : ಪ್ರಿಯಾಂಕ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

0

ಬೆಂಗಳೂರು; ಪ್ರಿಯಾಂಕ್ ಖರ್ಗೆ ನಿಮ್ಮ ತಲೆ ದಂಡ ಪಕ್ಕಾ ಎಂದು  ಪ್ರಿಯಾಂಕ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ವಿರುದ್ಧ ಮಾತನಾಡಿದ್ದಕ್ಕೆ ತಿರುಗೇಟು ಕೊಟ್ರು. ನನ್ನ ಜೀವನದಲ್ಲಿ ನಾನು ಸುಳ್ಳು ಹೇಳಿಲ್ಲ,ನನ್ನ ರಾಜಕೀಯ ಜೀವನದಷ್ಟು ನಿಮಗೆ ವಯಸ್ಸು ಆಗಿಲ್ಲ. ಡೆತ್ ನೋಟ್ ನಲ್ಲಿ ನಿಮ್ಮ ಹೆಸರು ಇರುವುದಕ್ಕೆ ನಾನು ನಿಮ್ಮ ಹೆಸರು ತಗೆದುಕೊಂಡಿದ್ದೇನೆ. ಪತ್ರದಲ್ಲಿ ಸಚಿನ್ ಹನಿಟ್ರಾಪ್ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾನೆ. ನಿಮ್ಮ ಮನಸ್ಸು ನಿಮ್ಮ ಜೊತೆಯಲ್ಲಿ ಇದೆಯಾ?. ನಿಮಗೆ ಆರೋಗ್ಯ ಸರಿ ಇದೆಯಾ?. ನಿಮ್ಮ ಪರವಾಗಿ ಇದುವರೆಗೂ ಮೂರೇ ಜನ ಮಾತಾಡಿರುವುದು.ಸಿಎಂ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತಾಡಲೇಬೇಕು.ಯಾಕೆಂದರೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲೇಬೇಕಲ್ವಾ?. ಉಪ ಮುಖ್ಯಮಂತ್ರಿಗಳು ಮುಂದೆ ಆ ಸ್ಥಾನಕ್ಕೆ ಬರಲೇಬೇಕು. ಇನ್ನೂ ಗೃಹ ಸಚಿವರು ಅವರ ಪರವಾಗಿ ಮಾತಾಡಲೇಬೇಕು ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆಯವರೇ ಎಲ್ಲೆಲ್ಲಿ ಹೋರಾಟ ಮಾಡಿದ್ದೀರಿ ಅಂತಾ ಹೇಳಿ ನೋಡೋಣ?. ನನ್ನನ್ನು ಕೆಣಕಬೇಡಿ ನೀವು. ಜನಾಂಗ ಪರವಾಗಿ ನೀವು ಯಾವ ಹೋರಾಟ ಮಾಡಿದ್ದೀರಿ?. ಮೂರು ಬಾರಿಯೂ ಗೆದ್ದಿದ್ದಾರಂತೆ, ಮೂರು ಬಾರಿಯೂ ಮಂತ್ರಿ ಆಗಿದ್ದಾರಂತೆ. ಹಾಗಿದ್ದರೆ ಪಿ.ಎಂ. ನರೇಂದ್ರ ಸ್ವಾಮಿ, ಪ್ರಸಾದ್ ಅಬ್ಬಯ್ಯ,  ನಾರಾಯಣಸ್ವಾಮಿ ಯಾಕೆ ಮಂತ್ರಿ ಆಗಿಲ್ಲ?. ಅಜಯ್ ಸಿಂಗ್ ಮೂರು ಸಲದ ಗೆದ್ದಿದ್ದರೂ ಅವರು ಯಾಕೆ ಮಂತ್ರಿ ಆಗಿಲ್ಲ?. ಇವರನ್ನೆಲ್ಲಾ ಸಮಾಧಿ ಮಾಡಿ ತಾನೇ ನೀವು ಮಂತ್ರಿ ಆಗಿರುವುದು? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಫ್ಯಾಮಿಲಿಗಾಗಿ, ಛಲವಾದಿಯವರನ್ನು ಬಿಜೆಪಿಯವರು ವಿಪಕ್ಷ ನಾಯಕರಾಗಿ ಮಾಡಿದ್ದಾರೆ ಅಂತಾ ಹೇಳಿದ್ದೀರಿ. ನನ್ನ ಸಮಾಜ ಹಾಗೂ ನನ್ನನ್ನು ನೀವು ತುಳಿದಿರಿ. ಅದಕ್ಕಾಗಿ ಬಿಜೆಪಿ ನನ್ನ ಇಲ್ಲಿ ವಿಪಕ್ಷ ನಾಯಕರಾಗಿ ಮಾಡಿದೆ. ನಾನು ಒಂದು ಸಮಾಜಕ್ಕೆ ಸೀಮಿತ ಆಗಿಲ್ಲ. ನಿಮ್ಮ ಹಗರಣಗಳು ವೈಫಲ್ಯಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ನಾನು ಕುಳಿತು ಕೊಂಡಿರುವುದೇ ಗರ್ಭಗುಡಿ. ಗರ್ಭಗುಡಿ ಇದೆ ಅಂದರೆ ಇಲ್ಲಿ ಎಲ್ಲರಿಗೂ ಪ್ರವೇಶ ಇದೆ. ಹಿಟ್ ಅಂಡ್ ರನ್ ಮಾಡಿ ಸರಿಯಾಗಿ ತಗಲಾಕಿಕೊಂಡಿದ್ದೀರಿ. ನಿಮ್ಮನ್ನು ಯಾರು ರಕ್ಷಣೆ ಮಾಡಲು ಆಗಲ್ಲ. ಯಾಕೆ ರಕ್ಷಣೆಗಾಗಿ ದೆಹಲಿಗೆ ಓಡಿ ಹೋಗಿದ್ರಿ?.ಈ ಕೇಸ್ ನಿಂದ ನೀವು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಆಗಲ್ಲ. ಇಡೀ ಕ್ಯಾಬಿನೆಟ್ ನಿಮ್ಮ ಜೊತೆ ನಿಂತರೂ ನೀವು ತಪ್ಪಿಸಿಕೊಳ್ಳಲು ಆಗಲ್ಲ. ಯಡಿಯೂರಪ್ಪರ ಫೋಕ್ಸೋ ಕೇಸ್ ಗೂ, ನಿಮ್ಮ ಕೇಸ್ ಗೂ ಯಾವ ತರಹ ಲಾಜಿಕ್ ಇದೆ. ಅದಕ್ಕಾಗಿ ವಿಜಯೇಂದ್ರ ರಾಜೀನಾಮೆ ಕೊಡಬೇಕಂತೆ!. ಅದು ಕೋರ್ಟ್ ನಲ್ಲಿ ಕೇಸ್ ಇದೆ. ನಿಮಗೆ ಏನಾದರೂ ಬುದ್ದಿ ಭ್ರಮಣೆ ಆಗಿದೆಯಾ?. ಎಲ್ಲಾದರೂ ಹೋಗಿ ಡಾಕ್ಟರ್ ಹತ್ತಿರ ತೋರಿಸಿಕೊಳ್ಳಿ ಎಂದು ಸವಾಲೆಸಿದ್ದಾರೆ.

ಕಲ್ಬುರ್ಗಿಗೆ ಬಂದರೆ ಮಜ್ಜಿಗೆ ಎಳನೀರು ಕೊಡುತ್ತೇನೆ ಅಂದಿದ್ದೀರಿ. ಪ್ರಿಯಾಂಕ್ ಖರ್ಗೆಯವರೇ ಆ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ಇನ್ನು ಮುಂದೆ ನಿಮ್ಮ ಪಕ್ಷದ ಕಾರ್ಯಕರ್ತರೇ ಭೇಟಿ ಸಾಧ್ಯವಾಗದೇ ಹೋಗ್ತಾರಲ್ಲಾ ಅವರಿಗೆ ನೀರು ಕೊಟ್ಟು ನಿಮ್ಮ ಪಾಪ ತೊಳೆದುಕೊಳ್ಳಿ. ನೀವು ಹೀಗೆ ಬೆಳೆಸಿಕೊಂಡು ಹೋದರೆ, ನಿಮ್ಮ‌ ತಲೆ ತಂಡ ಆಗುವುದು ನಿಶ್ಚಿತ. ದಲಿತರ ಶಾಪ ತಟ್ಟುತ್ತದೆ ನಿಮಗೆ, ತಕ್ಷಣ ರಾಜೀನಾಮೆ ಕೊಡಿ. ಈಗ ನೀವು ನಿಮ್ಮ ಮಾನ ಮರ್ಯಾದೆ ತೋರಿಸಿಕೊಳ್ಳಿ. ಬರೀ ಪ್ರಿಯಾಂಕ್ ಅಂದಿದ್ದರೆ ಮಂಡಲ್ಲ ಪಂಚಾಯಿತಿಯೂ ಗೆಲ್ಲಲು ಆಗುತ್ತಿರಲಿಲ್ಲ. ಖರ್ಗೆ ಇರುವುದಕ್ಕೆ ಅವರ ಅಪ್ಪನ ಕೊಡುಗೆ ಇದೆ. ನಿಮ್ಮ ತಲೆದಂಡ ಆಗುವ ವರೆಗೂ ನಾವು ಸುಮ್ಮನೆ ಬಿಡಲ್ಲ ಎಂದಿದ್ದಾರೆ.

ನಿಮ್ಮ ತಲೆ ದಂಡ ಪಕ್ಕಾ ಪ್ರಿಯಾಂಕ್ ಖರ್ಗೆ. ರಾಜ್ಯದಲ್ಲಿ ದೊಡ್ಡ ಆಂದೋಲನ ಆಗಲಿದೆ. ನೀವು ಹೀಗೆ ಗ್ಯಾಂಗ್ ಕಟ್ಟಿಕೊಂಡು ಹೋದರೆ ದಲಿತರ ಶಾಪ ತಟ್ಟಲಿದೆ. ನಮಗೆ ಮಾನ ಮರ್ಯಾದೆ ಪ್ರಶ್ನೆ  ಮಾಡುತ್ತೀರಲ್ಲ. ಈಗ ನಿಮ್ಮ ಮಾನ ಮರ್ಯಾದೆ ಎತ್ತಿ ತೋರಿಸಿ. ಪ್ರಿಯಾಂಕ್ ಖರ್ಗೆ ಮಂಪರು ಪರೀಕ್ಷೆ ಆಗಬೇಕು. ಆಗ ಅವರು ಮುಚ್ಚಿಟ್ಟ ಸತ್ಯ ಹೊರಗೆ ಬರುತ್ತದೆ. ಸುಪಾರಿ ಪ್ರಕರಣದಲ್ಲಿ ನಿಮ್ಮ ಕೈವಾಡ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.