ಮನೆ Latest News ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಜಟಾಪಟಿ ಪ್ರಕರಣ: ರಾಜ್ಯಪಾಲರನ್ನು ಭೇಟಿ...

ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಜಟಾಪಟಿ ಪ್ರಕರಣ: ರಾಜ್ಯಪಾಲರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಭೇಟಿ

0

ಬೆಂಗಳೂರು; ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಜಟಾಪಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ   ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜಭವನಕ್ಕೆ ಭೇಟಿ ನೀಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿದ್ದಾರೆ ಸಿ ಟಿ ರವಿಸಿ.ಟಿ. ರವಿ ಜೊತೆ ವಿಧಾ‌ನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿಧಾ‌ನ ಪರಿಷತ್ ಸದಸ್ಯರಾದ  ಎನ್.‌ ರವಿಕುಮಾರ್ ಮತ್ತು ಕೆ.ಎಸ್. ನವೀನ್ ಕೂಡಾ ಭೇಟಿ ಮಾಡಿದ್ದಾರೆ.

ಇನ್ನು ಸಿ ಟಿ  ರವಿ ಪ್ರಕರಣದಲ್ಲಿ ಸಭಾಪತಿ ರೂಲಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಧಾನಪರಿಷತ್ ವಿಧಾನಸಭೆ ನಮ್ಮ ಸಂವಿಧಾನದ ವ್ಯಾಪ್ತಿ ಒಳಗೆ ಬರುತ್ತದೆ.ಸಭಾಪತಿಗಳು ಆರನೇ ಸ್ಥಾನದಲ್ಲಿ ಬರುತ್ತಾರೆ.ಕಲಾಪದ ನಂತರ ಕೂಡ ಸದನದ ಒಳಗೆ ನಡೆದರೆ ಅದರ ಮೇಲೆ ಕ್ರಮ ತೆಗೆದುಕೊಳ್ಳುವ ಹಕ್ಕು ಅವಕಾಶ ಇದೆ. ಸಭಾಪತಿಗಳಿಗೆ ಕಲಾಪದ ಬಳಿಕವೂ ಘಟನೆಯನ್ನು ಪರಿಶೀಲಿಸಿ ಕ್ರಮ‌ಕೈಗೊಳ್ಳುವ ಅವಕಾಶ ಹಕ್ಕು ಇದೆ. ಸಭಾಪತಿ ಗಳು ಇದರ ಬಗ್ಗೆ ವಿಚಾರಣೆ ಮಾಡಬೇಕು. ಅವರೇ ಈ ಕೆಲಸ ಮಾಡಬೇಕು. ಘಟನೆ ಕಲಾಪದ ನಂತರವೂ ಕೂಡ ಸದಸ್ಯರು ಮಾರ್ಷಲ್ ಗಳು ಮಾಧ್ಯಮದವರು ಎಲ್ಲರೂ ಇದ್ದರು. ನನ್ನ ವ್ಯಾಪ್ತಿ ಗೆ ಬರಲ್ಲ ಎಂದು ಹೇಳಿದರೆ ಅನ್ಯಾಯ ಆದವರು ಎಲ್ಲಿಗಾದರೂ ಹೋಗಬೇಕಾಗುತ್ತದೆ.ಸಿಬ್ಬಂದಿ ಸದಸ್ಯರು ಮಾಧ್ಯಮದವರು ಎಲ್ಲರಿಂದಲೂ ಸಭಾಪತಿ ಗಳು ಮಾಹಿತಿ ಪಡೆದು ವಿಚಾರಣೆ ಮಾಡಬೇಕು. ಸಭಾಪತಿಗಳು ಒಂದು ಆದೇಶವನ್ನು ಮಾಡಬೇಕಾಗಿತ್ತು.ಅನ್ಯಾಯಕ್ಕೆ ಒಳಗಾದವರಿಗೆ ರಿಲೀಫ್ ಇಲ್ಲ ಅಂದ್ರೆ ಹೇಗೆ?.ಸಂಬಂಧ ಇರುವವರು ಸಂಬಂಧವೇ ಇಲ್ಲ ಅನ್ನಲು ಆಗುವುದಿಲ್ಲ ಎಂದರು.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ವಿಧಾ‌ನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಿ.ಟಿ. ರವಿ ಬಂಧನ ಪ್ರಕರಣದ ನಂತರದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಣೆ ಕೊಟ್ಟಿದ್ದೇವೆ.ರವಿ ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದೇವೆ.ಶಾಸಕರ ಹಕ್ಕುಚ್ಯುತಿ ಆಗಿರುವ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.ಡಿಜಿಪಿ ಮತ್ತು ವಿಧಾನ ಪರಿಷತ್ ಕಾರ್ಯದರ್ಶಿಯವರನ್ನೂ ನಾವು ಭೇಟಿ ಮಾಡುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ ಸಿ.ಟಿ. ರವಿ ಇನ್ನು ಮುಂದೆ ಮಾತನಾಡದಂತೆ ಮಾಡಬೇಕು ಅಂತಾ ರಾತ್ರಿಯಿಡೀ ತಿರುಗಾಡಿಸಿ ಹಿಂಸೆ ಕೊಟ್ಟಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸಿ.ಟಿ. ರವಿ ನೇತೃತ್ವದಲ್ಲಿ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.ಪೊಲೀಸರು ಏನೇನು ಹಿಂಸೆ ಮಾಡಿದರು ಎಂಬ ಬಗ್ಗೆ ಖುದ್ದು ರವಿ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಉಳಿದ ಅಧಿಕಾರಿಗಳನ್ನೂ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ನನ್ನ ಕಬ್ಬಿನ ಗದ್ದೆ, ಜಲ್ಲಿನ ಕ್ರಶರ್ ಗೆ ಕರೆದೊಯ್ದು ಎನ್ ಕೌಂಟರ್ ಮಾಡುವ ಪ್ರಯತ್ನ ನಡೆಯಿತು.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಒಂದೋ ಹತ್ಯೆ ಮಾಡಬೇಕು ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕು. ಬಿಜೆಪಿಯವರ ಮೇಲೆ ತಕ್ಷಣ ಓವರ್ ಆಕ್ಷನ್ ಆಗುತ್ತದೆ. ಎಲ್ಲಾ ವಿವರಣೆಗಳನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇವೆ.ಇನ್ನೂ ಕೂಡಾ ಗೂಂಡಾಗಳ ಬಂಧನ ಆಗಿಲ್ಲ. ಹೆಬ್ಬಾಳ್ಕರ್ ಪಿಎ ಮತ್ತು ಚನ್ನರಾಜ ಹಟ್ಟಿಹೊಳಿ ಪಿಎ ಬಂಧನ ಆಗಿಲ್ಲ.ನಾನು ದೂರಿನಲ್ಲಿ ಹೆಸರು ಬರೆದು ಕೊಟ್ಟರೂ ಬಂಧನ ಆಗಿಲ್ಲ. ನನಗೆ ಜೀವ ಭಯ ಇದೆ, ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದೇನೆ.ಕೆಲವು ಪೊಲೀಸರು ಆಡಳಿತ ಪಕ್ಷದ ಮರ್ಜಿಗೆ ಬಿದ್ದು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.