ಬೆಂಗಳೂರು; ಮುನಿರತ್ನ ಅವರು ಒಳ್ಳೆಯ ಆಕ್ಟಿಂಗ್ ಮಾಡ್ತಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಕೊಲೆ ಬೆದರಿಕೆ ಬಗ್ಗೆ ಮುನಿರತ್ನ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕಳೆದ ಒಂದು ವಾರದಿಂದ ಗಾಂಧೀಜಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೆ. ನಿನ್ನೆ ಹಿಂತಿರುಗುವಾಗ ಯೂಟ್ಯೂಬ್ ನಲ್ಲಿ ಘಟನೆಗಳನ್ನ ವೀಕ್ಷಿಸಿದ್ದೇನೆ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆದ ಘಟನೆಗಳನ್ನ ಗಮನಿಸಿದ್ದೇನೆ. ನನ್ನ ಮೇಲೆ, ಡಿಸಿಎಂ, ಕುಸುಮ ಹಾಗೂ ಹನುಮಂತರಾಯಪ್ಪ ಮೇಲೆ ಆರೋಪ ಮಾಡಿದ್ದಾರೆ. ಆಸಿಡ್ ಅಂತ ಅನ್ನೋದಕ್ಕೂ 3 ಸೆಕೆಂಟ್ ಗೂ ಮುನ್ನವೇ ಆಸಿಡ್ ದಾಳಿ ಆಗೋಗಿದೆ. ಕನ್ನಡ ಚಿತ್ರರಂಗದ ಅಧ್ಯಕ್ಷರಾಗಿ, ನಿರ್ಮಾಪಕರಾಗಿ, ಸ್ಕ್ರಿಪ್ಟ್, ಕತೆ ಬರೆಯುತ್ತೇನೆ ಅಂತ ನನ್ನ ಬಳಿ ಆಗಾಗ ಹೇಳುತ್ತಿದ್ದರು. ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾ ಬರ್ತಿಲ್ಲ. ಒಳ್ಳೆಯ ನಟನೆಯನ್ನ ಮುನಿರತ್ನ ಮಾಡಿದ್ದಾರೆ. ಅದನ್ನ ಬಹಳ ಚೆನ್ನಾಗಿ ನೀವೂ ತೋರಿಸಿದ್ದೀರಿ, ಅವರು ಮಾಡಿದ್ದಾರೆ. ಇಬ್ಬರಿಗೂ ಧನ್ಯವಾದಗಳು ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಗೃಹ ಸಚಿವರು, ಪ್ರಧಾನಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಡಿ.ಕೆ. ಸುರೇಶ್ ಸಿಬಿಐ ತನಿಖೆಗೆ ಕೊಡಲಿ. ಡಾಕ್ಟರ್ ತಪಾಸಣೆ ಮಾಡಿ ಸಿಟಿ ಸ್ಕ್ಯಾನ್ ಮಾಡ ಬೇಕು ಅಂತ ತಿಳಿಸಿದ್ದಾರೆ. ನಿನ್ನೆ ವಿಗ್ ಹಾಕೊಂಡು ಬಂದಿದ್ರು. ರಘು ಅಂತ ಡ್ರೈವರ್ ತನಿಖೆ ಆಗಬೇಕು ಅಲ್ವಾ?. ರಂಜಿತ್ ಅಂತ ಅವನ ತನಿಖೆ ಆಗಬೇಕು ಅಲ್ವಾ ? ಅವನ ಕೈ-ಕಾಲು ಮುರಿದ. ಇದನ್ನೂ ಸಿಬಿಐ ಸಿಬಿಐ ಗೆ ಕೊಡಿ. ಬಾಲಾಜಿ ಅಂತಾ ವೋಟರ್ ಐಡಿ ಕೇಸ್ ನಲ್ಲಿ ತಿರುಪತಿ ಲಡ್ಡು ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಇದನ್ನೂ ಸಿಬಿಐ ತನಿಖೆಗೆ ಒಳಪಡಿಸಿ. ವೋಟರ್ ಐಡಿ, ತಿರುಪತಿ ಲಡ್ಡು ಎರಡನ್ನೂ ಸಿಬಿಐ ತನಿಖೆಗೆ ಒಳಪಡಿಸಿ. ನನ್ನ ಸೋಲಿಸಿರುವು ಜನ, ಇವರಲ್ಲ ಇದನ್ನ ನಾನು ಸ್ವೀಕರಿಸಿದ್ದೇನೆ. ನನ್ನ ಹೆಸರು ಹೇಳಿದ್ರೇನೆ ಇವರ ಸಿನಿಮಾ ನಡೆಯೋದು. ಬಿಜೆಪಿ-ಜೆಡಿಎಸ್ ನವರು ನನ್ನ, ನಮ್ಮ ಅಣ್ಣನ ನೆನಸಿಕೊಳ್ಳದಿದ್ದರೆ ಸಮಾಧಾನ ಆಗೊಲ್ಲ ಎಂದಿದ್ದಾರೆ.
ಸಿಟಿ ರವಿಗೆ ಅವರ ತಾಯಿಯ ನೆನಪಾಗಲಿಲ್ಲ. ಎಫ್‌ಎಸ್ ಎಲ್ ವರದಿಯಲ್ಲಿ ಒಕ್ಕಲಿಗ, ದಲಿತ ಹೆಣ್ಣು ಮಗಳನ್ನ ಕರೆದಿರುವುದು ದೃಢ ಪಟ್ಟಿದೆ. ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ವಿಧಾನಸೌಧದಲ್ಲಿ ಪ್ರಾಸಿಟ್ಯೂಟ್ ಅಂತಾರೆ. ಮತ್ತೊಬ್ಬರು ಅಧಿಕಾರ ನಡೆಸುವ ಕಚೇರಿಯಲ್ಲಿ ರೇಪ್ ಮಾಡಿದ್ದಾರೆ. ನೀಚ ಕೃತ್ಯವನ್ನ ಎಸಗಿದವರಿಗೆ ಇದನ್ನ ಮಾಧ್ಯಮಗಳಿಗೆ ತೋರಿಸೋಕೆ ಆಗೊಲ್ಲ. ಈಗ ಇದನ್ನ ಸಿಬಿಐಗೆ ತೋರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋಜು ಮಸ್ತಿಗೆ ವಿಧಾನಸೌಧವನ್ನ ಬಳಸಿಕೊಂಡ್ರಿ. ನಾನು ಮಾತನಾಡುತ್ತಿರಲಿಲ್ಲ, ಸುಮ್ಮನೇ ಆ ಶಾಸಕ ಉತ್ತೇಜನ ಮಾಡುತ್ತಿದ್ದಾರೆ. ನಿಮ್ಮ ಯೋಗ್ಯತೆ ಬೆಂಗಳೂರಿನ ಜನತೆಗೆ ಗೊತ್ತಿದೆ. ಕೊರಂಗು ಯಾರು? ಇದನ್ನ ಹೇಳಬೇಕು.ಯಾವ ಕೊರಂಗುಗಳನ್ನ ಬಿಟ್ಟು ಏನು ಮಾಡಿದ್ರಿ?. ಮಾತೆತ್ತಿದ್ರೆ ಡಿಕೆ.ಸುರೇಶ್, ಡಿ.ಕೆ ಶಿವಕುಮಾರ್ ಅಂತಾರೆ. ಒಳ್ಳೆಯ ನೀರು ಬೇಕು ಬೇಳೆ ಬೇಯಿಸಿಕೊಳ್ಳಬೇಕು. ಹೀಗಾಗಿ ನಮ್ಮ ನಾನು, ನನ್ನ ತಮ್ಮ ನನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಳ್ತಿದ್ದಾರೆ. ಇಷ್ಟು ದಿನ ಮೌನವಾಗಿದ್ದೆ ಎಂದರು.
ಆಸಿಡ್ ದಾಳಿ ಸಿಬಿಐ ತನಿಖೆ ಆಗಲಿ.ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಿಟ್ ಆಗ್ತಾ ಇಲ್ಲ. ಬಿಜೆಪಿಯಲ್ಲಿ ಒಳ್ಳೆ ಒಳ್ಳೆಯ ಆಕ್ಟರ್ ಇದ್ದಾರೆ. ರಮೇಶ್ ಜಾರಕಿಹೊಳಿ ಒಳ್ಳೆಯ ಆಕ್ಟರ್ ಎಂದಿದ್ದಾರೆ. ಇದರ ಹಿಂದೆ ಯಾರು ಯಾರು ಇದ್ದಾರೆ ತನಿಖೆ ಮಾಡಲಿ. ಬಿಜೆಪಿಗೆ ನೈತಿಕತೆ ಇದ್ದರೆ ಯಾವ ರೀತಿ ಮಟ್ಟ ಹಾಕ್ಬೇಕು ಹಾಕ್ತಾರೆ. ಅವರಿಗೆ ನೈತಿಕತೆ, ಸಂಸ್ಕೃತಿ ಇಲ್ಲ. ಹೇಳೋದು ಒಂದು ಮಾಡೋದು ಒಂದು. ಸಿನಿಮಾಗಳು ಇಲ್ಲ ಅಂತ ಹೇಳ್ತಿದ್ರು. ತಮಿಳುನಾಡಿನಲ್ಲಿ ಚಾಟಿಯ ಬಗ್ಗೆ ಒಂದು ಕತೆಯ ಸಿನಿಮಾ. ಇಲ್ಲೊಂದು ಮೊಟ್ಟೆ ಕತೆಯ ಸಿನಿಮಾ. ಸಿಟಿ ಸ್ಕ್ಯಾನ್, ವಿಗ್ ಹಾಕಿಕೊಳ್ಳೋದು ಇದೆಲ್ಲ ಏನು. ಕೈ ಮುಗೀತಿನಿ ಇದನ್ನ ಜನರಿಗೆ ತೋರಿಸಿ ಎಂದರು.