ಬೆಂಗಳೂರು; ಕಾನೂನಿಗೆ, ಕೋರ್ಟ್ ಗೆ ಏನು ಗೌರವ ಕೊಡಬೇಕು ಕೊಡುತ್ತೇವೆ ಎಂದು ಸಿ ಟಿ ರವಿ ವಿಚಾರಕ್ಕೆ ಡಿಸಿಎಂ ಡಿಕೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿ ಟಿ ರವಿ ಅವರಿಗೆ ಬೆಲ್ ಆಗಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾನೂನಿಗೆ, ಕೋರ್ಟಗೆ ಏನು ಗೌರವ ಕೊಡಬೇಕು ಕೊಡುತ್ತೇವೆ. ಕೋರ್ಟ್ ಏನು ಬೇಕೋ ಅದು ಮಾಡುತ್ತೆ. ನೀವು ಅವರು ಮಾತಾಡಿದ್ದು ಸರಿನಾ ತಪ್ಪು ಅಂತ ಕೇಳಿ. ಬಳಿಕ ಬೇರೆ ವಿಚಾರ ಚರ್ಚೆ ಮಾಡಿ ಎಂದಿದ್ದಾರೆ. ಅವರ ಪಕ್ಷ, ಮುಖಂಡರ ಸಂಸ್ಕ್ರತಿ ಏನು ಅಂತ ಗೊತ್ತಿರೊ ವಿಚಾರ. ಪೊಲೀಸ್ ಉಂಟು, ಕೋರ್ಟ್ ಉಂಟು, ಅಪರಾಧ ಉಂಟು ಎಂದರು.
ಮುಖ್ಯ ವಿಚಾರ ಚರ್ಚೆ ಆಗ್ತಿಲ್ಲ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅವರ ಭಾಷೆ ,ಸಂಸ್ಕ್ರತಿ, ಹರಕಲು ಬಾಯಿ. ಜಯಮಾಲಾಗೂ ಮಾತಾಡಿದ್ರು. ಸಿಎಂ ಗೂ ಮಾತಾಡಿದ್ರು. ನಿತ್ಯ ಸುಮಂಗಲಿ ಅಂತಾ ಹೇಳಿದ್ರು. ಇದು ಸರಿನಾ ತಪ್ಪಾ?. ನನಗೂ ಅವರ ಮೇಲೆ ಸಿಂಪತಿ ಇತ್ತು. ಚಿಕ್ಕಮಗಳೂರು ಜನ ಅಂದ್ರೆ ಕಲ್ಚರಲ್ ಜನ. ಆದ್ರೆ ಆ ಪಾರ್ಟಿಯಲ್ಲಿ ಇರೋರಿಗೆ ಹೆಣ್ಣು ಮಕ್ಕಳ ಬಗ್ಗೆ ಸರಿಯಾ ಅಂತ ಅರ್ಥ ಮಾಡಿಕೊಳ್ಳಬೇಕು. ಆತ್ಮ ಸಾಕ್ಷಿ ಇದ್ರಲ್ಲಿ ಮುಖ್ಯ. ಪಕ್ಷದ ಲೀಡರ್ ಗೆ ಸುಮ್ಮನೆ ಸಪೋರ್ಟ್ ಮಾಡೋದಲ್ಲ. ಅದನ್ನ ಖಂಡಿಸಬೇಕಲ್ವಾ? ಸರಿ ಇಲ್ಲ ಅಂತ ಹೇಳಬೇಕಲ್ವಾ. ನನ್ನ ಪಕ್ಷದಲ್ಲಿ ಮಾತಾಡಿದ್ರೆ ಖಂಡಿಸ್ತಿದ್ದೆ. ಇದೇ ಮುನಿರತ್ನ ಕೇಸಿನಲ್ಲಿ ಆರ್ ಅಶೋಕ್ ಏನ್ ಹೇಳಿದ್ರು. ಎಫ್ ಎಸ್ ಎಲ್ ರಿಪೋರ್ಟ್ ಬಂದ ತಕ್ಷಣ ಉಚ್ಚಾಟನೆ ಅಂತ ಹೇಳಿದ್ರು. ಅಶೋಕ್ ಇಸ್ ದಿ ಪಾರ್ಟಿ ಟು ಆಲ್ ದೀಸ್ ಕ್ರೈಮ್ ಎಂದಿದ್ದಾರೆ. ಇದು ಅವರ ಪಾರ್ಟಿಯ ನಾಯಕತ್ವ ಅಂತ ಒಪ್ಪಿಕೊಳ್ಳಲಿ. ಮುತ್ತು ರತ್ನಗಳನ್ನು ಅವರೇ ಮಾಡಿಕೊಳ್ಳಲಿ. ಹೊರಗಡೆ ಕಳಿಸಿ ಅಂತ ಹೇಳಲ್ಲ. ಸಮಾಜಕ್ಕೆ ಅದನ್ನ ಎಕ್ಸ್ಪೋಸ್ ಮಾಡಲಿ ಎಂದು ತಿಳಿಸಿದ್ರು.
ಇದಕ್ಕೆಲ್ಲಾ ಡಿ ಕೆ ಶಿವಕುಮಾರ್ ಅವರ ಕುಮ್ಮಕ್ಕೇ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನೀವುಂಟು ,ಪೋಲೀಸ್ ಉಂಟು. ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣ. ಪಕ್ಷ, ಹೊರಗಡೆ, ಮನೆ, ಹೊಟ್ಟೆ ಒಳಗೆ ಏನಾದ್ರೂ ನಾನೇ ಕಾರಣ. ಎಲ್ಲ ನಾನೇ ಕಾರಣ. ನನ್ನ ನೆನಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ ಎಂದ್ರು. ನ್ಯಾಯ ಹೇಗೆ ಸಿಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮನಸಾಕ್ಷ್ಮಿಯೇ ನ್ಯಾಯ ಕೊಡಿಸುತ್ತೆ ಎಂದಿದ್ದಾರೆ.
ಲೆಕ್ಕ ಚುಕ್ತಾ ಆಗುತ್ತೆ ಅಂತ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇಂತಹ ಲೆಕ್ಕ ಚುಕ್ತಾವೆಲ್ಲ ಬಹಳ ಸಂತೋಷ. ಒಬ್ಬರಿಗೆನಾ ಲೆಕ್ಕ ಚುಕ್ತಾಗೆ ಬರೋದು. ಅವರವರ ಸಾಮರ್ಥ್ಯಕ್ಕೆ ಅವರವರು ಲೆಕ್ಕ ಚುಕ್ತಾ ಮಾಡ್ಕೊಳ್ತಾರೆ. ಪ್ರಕರಣ ಡೈವರ್ಟ್ ಆಗ್ತಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಡಿವೀಯೇಟ್ ಮಾಡ್ತಿದ್ದಾರೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಮೇಲೆ ಹಾಕ್ತಿದ್ದಾರೆ. ಹಿಂದೆ ಇವರು ಪೊಲೀಸರನ್ನು ಹೇಗೆ ನಡೆಸಿದ್ದರು ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.