ಮನೆ Latest News ಅಂಬೇಡ್ಕರ್ ಫೋಟೋ ಹಿಡಿಯಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆಯೂ ಇಲ್ಲ: ಸುವರ್ಣ ಸೌಧದಲ್ಲಿ ಬಿಜೆಪಿ ಶಾಸಕ...

ಅಂಬೇಡ್ಕರ್ ಫೋಟೋ ಹಿಡಿಯಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆಯೂ ಇಲ್ಲ: ಸುವರ್ಣ ಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

0

ಅಂಬೇಡ್ಕರ್ ಫೋಟೋ ಹಿಡಿಯಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆಯೂ ಇಲ್ಲ  ಎಂದು ಸುವರ್ಣ ಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಅಮಿತ್ ಶಾ ಮಾತಿನ ತಪ್ಪು ಸರಿ ಎಂಬುದರ ಬಗ್ಗೆ ತೀರ್ಮಾನ ಮಾಡಲಿ. ಕಾಂಗ್ರೆಸ್ ಉರಿಯುವ ಮನೆ ಅಂತಾ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ಕೊಟ್ಟಿಲ್ಲ.  ಮಲ್ಲಿಕಾರ್ಜುನ್ ಖರ್ಗೆ ಅಂಬೇಡ್ಕರ್ ರ ನಿಜವಾದ ಅನುಯಾಯಿ ಆಗಿದ್ದರೆ ಅವರು ಕಾಂಗ್ರೆಸ್ ನಲ್ಲಿ ಇರಬಾರದಿತ್ತು. ಇವರು ಎಲ್ಲರೂ ನಕಲಿ ಹೋರಾಟಗಾರರು. ಆದರೆ ನಾವು ನಕಲಿ ಅನುಯಾಯಿಗಳಲ್ಲ. ಸಂವಿಧಾನಕ್ಕೆ ಅಪಮಾನ ಆಗುವ ರೀತಿಯಲ್ಲಿ ನಾವು ನಡೆದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನವರು ಡೋಂಘಿಗಳು, ಇವರಿಗೆ ಯಾವ ನೈತಿಕತೆಯೂ ಇಲ್ಲ. ಉ.ಕ. ಭಾಗದ ಅಭಿವೃದ್ಧಿ ಬಗ್ಗೆ ಉತ್ತರ ಕೊಡಲೂ ಸಿದ್ದರಾಮಯ್ಯಗೆ ನೈತಿಕತೆ ಇಲ್ಲ. ಇವರ ಹಗರಣದ ಬಣ್ಣ ಬಯಲು ಆಗುತ್ತದೆ ಎಂದು ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ. ಅಮಿತ್ ಶಾ ರವರು ಹೇಳಿದ್ದೇ ಬೇರೆ, ಅದನ್ನು ಇವರು ಅರ್ಥ ಮಾಡಿಕೊಂಡಿರೋದೇ ಬೇರೆ ಎಂದಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್  ಶಾಸಕ ರಿಜ್ವಾನ್ ಅರ್ಷದ್  ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದು, ಅವರ ಮನಸ್ಥಿತಿ ಏನು ಎಂಬುವುದನ್ನು ತೋರಿಸುತ್ತೆ. ನಿಮ್ಮ ಮನುವಾದದ ಮನಸ್ಥಿತಿ ತಿಳಿಸುತ್ತದೆ. ದೇಶದಲ್ಲಿ ನರಕವನ್ನು ಮಾಡಿದ್ರೆ, ಶಕ್ತಿ ಧ್ವನಿ ಇಲ್ಲದವರಿಗೆ ಅವಕಾಶವನ್ನು ಕೊಟ್ಟಿದ್ದಾರೆ. ನಿಮಗೆ ಇದು ಹೊಟ್ಟೆ ಉರಿ ಇರುವುದು . ನಮಗೆ ಪ್ರಪಂಚದಲ್ಲಿ ಸ್ವರ್ಗ ಕಾಣಬೇಕಾದರೆ ಅಂಬೇಡ್ಕರ್ ಹೆಸರು ಬೇಕು . ಸಂವಿಧಾನವನ್ನು ಬದಲಾವಣೆ ಮಾಡೋದಕ್ಕೆ ಹೆಜ್ಜೆ ಇಟ್ಟುವರು. ಬಿಜೆಪಿ ಅವರಿಂದ ಇದು ಸಾಧ್ಯವಿಲ್ಲ .ರಾಜಕಾರಣಕೋಸ್ಕರ ಈ ರೀತಿ ಮಾತನಾಡಿದ್ದಾರೆ. ಮುಂದಿನಗಳಲ್ಲಿ ಜನ ನಿಮ್ಮ ರಾಜಕಾರಣವನ್ನು ಒಡೆಯುತ್ತಾರೆ ಎಂದಿದ್ದಾರೆ.

ಅಂಬೇಡ್ಕರ್ ಫೋಟೋ ಹಿಡಿಯಲು ಇವರಿಗೆ ಏನು ಯೋಗ್ಯತೆ ಇದೆ?: ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಬೆಳಗಾವಿಯ ಸುವರ್ಣಸೌಧಧಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿ ಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಬಾಣಂತಿಯರ ಸಾವು ಮರಣ ಮೃದಂಗದ ರೀತಿಯಲ್ಲಿ ರಾಜ್ಯದಲ್ಲಿ ಹರಡಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಿ, ಆರೋಗ್ಯ ಸಚಿವರ ರಾಜೀನಾಮೆಗೆ ಕೇಳಿದ್ದೆವು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಡ ಹಾಕಿದ್ದೆವು. ಇದನ್ನು ತಿಳಿದ ಕಾಂಗ್ರೆಸ್ ನವರು ಡಿ.ಕೆ.‌ ಶಿವಕುಮಾರ್ ಚಿತಾವಣೆಯಿಂದ ಅಂಬೇಡ್ಕರ್ ಪ್ಲಕಾರ್ಡ್ ತಂದು ಧರಣಿ ಮಾಡುತ್ತಿದ್ದಾರೆ.ಮೂರು ದಿನಗಳ ಕಾಲ 50-60 ಶಾಸಕರು ಉ.ಕ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಿತ್ತು. ಏಕಾಏಕಿ ಡಿ.ಕೆ. ಶಿವಕುಮಾರ್ ಚಿತಾವಣೆಯಿಂದ ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಯಾವಾಗ ಸದನ ನಡೆಸಬೇಕೋ ಆಗ ಸ್ಪೀಕರ್ ನಡೆಸಿಲ್ಲ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾತಿನ ಬಗ್ಗೆ ಇಲ್ಲಿ ಪ್ರದರ್ಶನ ಮಾಡಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? . ಅಂಬೇಡ್ಕರ್ ಫೋಟೋ ಹಿಡಿಯಲು ಇವರಿಗೆ ಏನು ಯೋಗ್ಯತೆ ಇದೆ?. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಸೋಲಿಸಿ, ಪಟಾಕಿ ಹೊಡೆದಿದ್ದರು. ಕಾಂಗ್ರೆಸ್ ನವರು ತೀರಿಕೊಂಡರೆ ದೆಹಲಿಯಲ್ಲಿ ಎಷ್ಟು ಬೇಕಾದರೂ ಎಕರೆ ಕೊಡುತ್ತಾರೆ. ಅಂಬೇಡ್ಕರ್ ತೀರಿಕೊಂಡಾಗ ಆರಡಿ ಮೂರಡಿ ಕೊಡದ ಪಾಪಿಗಳು, ಮನಹಾಳರು ಕಾಂಗ್ರೆಸ್ ನವರು. ಅಂಬೇಡ್ಕರ್ ಗೆ ಏಕೆ ಭಾರತ ರತ್ನ ಕೊಟ್ಟಿಲ್ಲ?. ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ಭಗವದ್ಗೀತೆಯಷ್ಟೇ ಪವಿತ್ರ ಅಂಬೇಡ್ಕರ್ ಕೊಟ್ಟ ಸಂವಿಧಾನ ಅಂದಿದ್ದಾರೆ ಪ್ರಧಾನಿಗಳು. ಕೊಲೆಗಡುಕ ಸರ್ಕಾರ ಇದು. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಕುತಂತ್ರ ಮಾಡಿ ಸದನ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ಈ ವಿಷಯದ ಬಗ್ಗೆ ಈಗಾಗಲೇ ಮೋದಿ ಅಮಿತ್ ಶಾ ಸ್ಪಷ್ಟನೆ ಕೊಟ್ಟಿದ್ದಾರೆ. ಸದನ ಸರಿಯಾಗಿ ನಡವಳಿಕೆಗೆ ಸ್ಪೀಕರ್ ಅವಕಾಶ ಕೊಡಬೇಕು. ಈ ಘಟನೆ ಆಗಿರುವುದು ಲೋಕಸಭೆಯಲ್ಲಿ. ಅಲ್ಲಿ ಏನು ಕಾಂಗ್ರೆಸ್ ನವರು ಕಡ್ಲೆಕಾಯಿ ತಿಂತಿದ್ರಾ?. ಉ.ಕ. ಭಾಗದ ಸಮಸ್ಯೆಗಳ‌‌ ಬಗ್ಗೆ ಸರ್ಕಾರ ಸಮಗ್ರವಾಗಿ ಉತ್ತರ ಕೊಡಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ.