ಬೆಳಗಾವಿ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ತಮ್ಮ ವಿರುದ್ಧ ಸಿ ಟಿ ರವಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಎಫ್ ಐ ಆರ್ ದಾಖಲಾಗಿತ್ತು. ಅದರಂತೆ ಸಿ ಟಿ ರವಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಸಿ ಟಿ ರವಿ ಅವರ ವಿರುದ್ಧ ಹಿರೇ ಬಾಗೇವಾಡಿ ಠಾಣೆಯಲ್ಲಿ BNS 75 ಮತ್ತು 79ರಡಿ ಕೇಸ್ ದಾಖಲು ಆಗಿತ್ತು. ಹೀಗಾಗಿ ಸುವರ್ಣ ಸೌಧದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸ್ಥಳದಿಂದಲೇ ಎಂಲ್ಸಿ ಸಿ.ಟಿ. ರವಿ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಬೆಳಗಾವಿಯ ಹೀರೇಬಾಗೇವಾಡಿಯ ಪೊಲೀಸರು ಸಿ.ಟಿ. ರವಿ ಅವರನ್ನು ಅರೆಸ್ಟ್ ಮಾಡಲು ಬರುತ್ತಿದ್ದಂತೆ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸುವರ್ಣ ಸೌಧದ ಮೆಟ್ಟಿಲ ಮೇಲೆ ಬಿಜೆಪಿ ನಾಯಕರಿಂದ ದೊಡ್ಡ ಹೈಡ್ರಾಮ ನಡೆಯಿತು. ಈ ವೇಳೆ ಸಿ.ಟಿ. ರವಿ ಅವರನ್ನು ಎತ್ತಿಕೊಂಡೇ ಪೊಲೀಸರು ಬಿಗಿ ಭದ್ರತೆ ನಡುವೆ ಪೊಲೀಸ್ ವಾಹನಕ್ಕೆ ತುಂಬಿಕೊಂಡು ಕರೆದೊಯ್ದರು. ಈ ವೇಳೆ ಬಿಜೆಪಿ ನಾಯಕರು ಹಾಗೂ ಸಿ.ಟಿ. ರವಿ ಅವರು ಜೈಭೀಮ್ ಘೋಷಣೆ ಹಾಗೂ ಅಂಬೇಡ್ಕರ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಬಿಜೆಪಿ ನಾಯಕರಿಗೆ ರಕ್ಷಣೆ ನೀಡದ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ, ಬಿಜೆಪಿ ನಾಯಕರು ಪೊಲೀಸ್ ವಾಹನಕ್ಕೆ ಅಡ್ಡ ಗಟ್ಟಿ ಪ್ರತಿಭಟನೆ ನಡೆಸಿದರು.ಆದರು ಪೊಲೀಸರು ಪ್ರತಿಭಟನಾನಿರತ ಬಿಜೆಪಿ ನಾಯಕರನ್ನು ತಳ್ಳಿ ಸಿ.ಟಿ. ರವಿ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಬೆಳಗಾವಿ; ಸಚಿವೆ ಲಕ್ಷ್ಮೀ ಹೆಬ್ಳಾಕ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಪ್ರಕರಣ; ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ ಎಂದ ಸಿ ಟಿ ರವಿ
ಬೆಳಗಾವಿ; ಸಚಿವೆ ಲಕ್ಷ್ಮೀ ಹೆಬ್ಳಾಕ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಎಂಎಲ್ಸಿ ಸಿ ಟಿ ರವಿ ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ. ಆನ್ ರೆಕಾರ್ಡ್ ಆಡಿಯೋ ವಿಡಿಯೋದಲ್ಲಿ ಇರುತ್ತೆ ಎಂದಿದ್ದಾರೆ.
ನಾನು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ಅಪಮಾನದ ಬಗ್ಗೆ ಹೇಳಿದಿನಿ. ಅಂಬೇಡ್ಕರ್ ಅವರಿಗೆ ಆರು ಮೂರಡಿ ಜಾಗ ಕೊಡಲಿಲ್ಲ. ಭಾರಯ ರತ್ನ ಕೊಡಲಿಲ್ಲ ಎಂದಿದ್ದೀನಿ. ಕಾಂಗ್ರೆಸ್ ನವರು ಲಾ ಡೇ ಬಗ್ಗೆ ಗೌರವ ತೋರಿಸಿಲ್ಲ ಅಂದಿದ್ದೀನಿ. ಅವರವರ ಭಾವನೆಗಳಿಗೆ ತಕ್ಕಂತೆ ಭಾವಿಸಿದರೆ ನಾನು ಹೊಣೆಗಾರ ಅಲ್ಲ. ಇಲ್ಲದೇ ಇರೋದನ್ನ ಕಲ್ಪನೆ ಮಾಡಿಕೊಂಡರೆ ಏನು ಹೇಳಲಿ? ಎಂದಿದ್ದಾರೆ.
ಕ್ರಿಮಿನಲ್ ಅಪೆನ್ಸ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಸಿದ್ದರಾಮಯ್ಯನವರಷ್ಟು ಕಾನೂನು ತಜ್ಞ ನಾನು ಅಲ್ಲ. ಬೇಕಾದರೆ ಚೆಕ್ ಮಾಡಲಿ. ಯಾವುದು ಕ್ರಿಮಿನಲ್ ಅಪೆನ್ಸ್ ಅಂತ ಅವರಷ್ಟು ಚೆನ್ನಾಗಿ ಗೊತ್ತಿಲ್ಲ. ಈ ದೇಶದಲ್ಲಿ ಸಂವಿಧಾನ ಇದೆ. ವಿಧಾನ ಮಂಡಲದ ನಿಯಮ ಇದೆ. ಸಭಾಪತಿಗಳು ನನ್ನಿಂದ ಸ್ಪಷ್ಟೀಕರಣ ಕೇಳಿಲ್ಲ. ಎಲ್ರೂ ಸೇರಿ ಅವರನ್ನು ಸಭಾಪತಿ ಮಾಡಿದ್ದೀವಿ. ನಾನು ಆತರ ಪದ ಬಳಕೆ ಮಾಡಿದ್ರೆ ನೀವು ಊರಿಗೆಲ್ಲಾ ತೋರಿಸ್ತಿರಲಿಲ್ಲವಾ. ಎಲ್ಲದಕ್ಕೂ ನಾನು ಉತ್ತರಿಸಬೇಕಿಲ್ಲ. ವಿಸ್ಯುವಲ್? ಆಡಿಯೋ ಸಿಗುತ್ತೋ ಇಲ್ಲವೋ? ಚೆಕ್ ಮಾಡಲಿ. ಪ್ರತಿಭಟನೆ ಮಾಡೋದಾದರೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ ಮಾಡಲಿ ಎಂದಿದ್ದಾರೆ.