ಮನೆ Latest News ಬಸವಣ್ಣನವರ ಕುರಿತು ಯತ್ನಾಳ್ ಹೇಳಿಕೆಗೆ ಲಿಂಗಾಯತ ನಾಯಕರ ಟೀಕೆ ವಿಚಾರ; ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್...

ಬಸವಣ್ಣನವರ ಕುರಿತು ಯತ್ನಾಳ್ ಹೇಳಿಕೆಗೆ ಲಿಂಗಾಯತ ನಾಯಕರ ಟೀಕೆ ವಿಚಾರ; ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ

0

ನವದೆಹಲಿ; ಬಸವಣ್ಣನವರ ಕುರಿತು ಯತ್ನಾಳ್ ಹೇಳಿಕೆಗೆ ಲಿಂಗಾಯತ ನಾಯಕರ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೆಸರಿನಲ್ಲಿ ಬಸವ ಇದ್ದಾನೆ. ಇವರ, ಇವರ ಕುಟುಂಬ ಸದಸ್ಯರ ಹೆಸರಿನಲ್ಲಿ ಬಸವಣ್ಣನ ಹೆಸರಿದ್ದಿಯೇ..? ಬಸವಣ್ಣನ ಇತಿಹಾಸ ಅವರಿಗೆ ಗೊತ್ತಿಲ್ಲ. ಶಾಮನೂರು ಶಿವಶಂಕ್ರಪ್ಪ ಎಷ್ಟು ಬಸವ ಮಂಟಪ ಕಟ್ಟಿದ್ದಾರೆ. ಖಂಡ್ರೆ ಮನೆಯಲ್ಲಿ ಎಷ್ಟು ಜನರಿಗೆ ಬಸವಣ್ಣನ ಹೆಸರು ಇಟ್ಟಿದ್ದಾರೆ. ನಾವು ಬಸವಣ್ಣನ ಮೂಲ ವಿಚಾರಧಾರೆಯವರು . ಅವರೆಲ್ಲರು ನಕಲಿ ಲಿಂಗಾಯತರು. ಆ ಮೂರು ಕುಟುಂಬಗಳಿಗೆ ಯತ್ನಾಳ್ ಮುಗಿಸುವುದು ಉದ್ಯೋಗ. ಶಾಮನೂರು ಕಾಲೇಜುಗಳಿಗೆ ಬಸವಣ್ಣನ ಹೆಸರು ಇಟ್ಟಿದ್ದಾರೆ.? ಎಲ್ಲ ಕಾಲೇಜಿನಲ್ಲಿ ಬಸವಣ್ಣನ ಫೋಟೊ ಹಾಕಿದ್ದಾರೆ. ವೀರಶೈವ ಅಂತಾ ಓಡಾಡುತ್ತಿದ್ದವರು, ಹೋರಾಟದ ಬಳಿಕ ಲಿಂಗಾಯತ ಹೆಸರು ಸೇರಿಸಿಕೊಂಡಿದ್ದಾರೆ ಎಂದರು.

ಶಿಸ್ತು ಸಮಿತಿಯಿಂದ ಮುಂದೆ ಹಾಜರಾಗಿ ಬಂದಿದ್ದೇನೆ. ಮುಂದಿನ ಕಾರ್ಯತಂತ್ರ ಏನು ಇಲ್ಲ. ನಾವು ವಕ್ಫ್ ಸಲುವಾಗಿ ಸಭೆ ಸೇರಿದ್ದೆವು. ಈ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ. ಈಗ ದಾವಣಗೆರೆ, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇವೆ. ನಮ್ಮ ದಾಖಲೆ ನೋಡಿ ಅಧಿಕಾರಿಗಳು ಖುಷಿಯಾಗಿದ್ದಾರೆ.ದೇಶದಲ್ಲಿ ಅತ್ಯುತ್ತಮವಾಗಿ ದಾಖಲೆ ಸಂಗ್ರಹ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮುಂದೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನಾನು ಪೂರ್ಣ ಅವಧಿ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ನಾನು ನಿಷ್ಠಾವಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಶಕ್ತಿ ಪ್ರದರ್ಶನವನ್ನು ಮುರಿಯಲು ಡಿಕೆ ಶಿವಕುಮಾರ್ ಯತ್ನಿಸಿದ್ದಾರೆ. ಅಹಿಂದಾ ಜನರು ಬರ್ತಾರೆ ಕಾರ್ಯಕ್ರಮಕ್ಕೆ ಅಂತಾ ಸತೀಶ್ ಜಾರಕಿಹೋಳಿ ಹೇಳಿದ್ದಾರೆ. ಅಂದರೆ ಪರೋಕ್ಷವಾಗಿ ಡಿಕೆ ಶಿವಕುಮಾರ್ ಜನರು ಬರಲ್ಲ ಅಂತಾ ಹೇಳಿದ್ದಾರೆ. ತಮ್ಮಲ್ಲೇ ಸಾಕಷ್ಟು ಗೊಂದಲ ಇದೆ .ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕಲು ಸಮಾವೇಶವೇ  ಅಥಾವ ನಾನೆ ಸಿಎಂ ಡಿಕೆ ಶಿವಕುಮಾರ್ ಸಂದೇಶ ಕೊಡಲು ಸಮಾವೇಶವೇ . ಇವತ್ತು  ಭಾಷಣದ ಮೇಲೆ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ ಎಂದಿದ್ದಾರೆ.