ಬೆಂಗಳೂರು: ವಿಜಯೇಂದ್ರ ವಿಚಾರದಲ್ಲಿ ಯತ್ನಾಳ್ ಆರೋಪಕ್ಕೆ ಸಂಬಂಧಪಟ್ಟಂತೆ ಯತ್ನಾಳ್ ಆರೋಪಕ್ಕೆ ಡಿ ಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.
ಯತ್ನಾಳ್ ಕೂಡ ಶಿವಕುಮಾರ್ ಜೊತೆ ಅವರ ಜೊತೆ ಆತ್ಮೀಯವಾಗಿ ಇದ್ದಾರೆ. ವಿಜಯೇಂದ್ರ ಒಬ್ಬರೇ ಅಲ್ಲ.ಯತ್ನಾಳರು ಆಗಾಗ ಸಹಿ ಮಾಡಿಸಿಕೊಳ್ತಾರೆ. ಡಿಕೆಶಿ ಜೊತೆ ಯತ್ನಾಳ್ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
ಇನ್ನು ಯತ್ನಾಳ್ ವಿರುದ್ಧ ವಿಜಯಾನಂದ ಕಾಶಪ್ಪನವರ್ ಕೂಡ ವಾಗ್ದಾಳಿ ನಡೆಸಿದ್ದು ಯತ್ನಾಳ್ ಎಲ್ಲ ಹೋರಾಟದಲ್ಲೂ ಗಿಮಿಕ್ ಮಾಡ್ತಿದ್ದಾರೆ.ಪಂಚಮಸಾಲಿ ಸಮುದಾಯ ಕೇವಲ ಬಿಜೆಪಿ ಪರವಾಗಿ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ.ಯತ್ನಾಳ್ ಅವರಿಂದಾಗಿಯೇ ಪಂಚಮಸಾಲಿ ಹೋರಾಟದ ವೇಳೆ ಬೆಳಗಾವಿ ಮುತ್ತಿಗೆ ಹಾಕಲಿಲ್ಲ. ಯತ್ನಾಳ್ ಕೇವಲ ನಮ್ಮ ಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ.ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ಪ್ರಮಾಣದ ವರದಿ ಬಂದ ಮೇಲೆ ಮೀಸಲಾತಿ ನೀಡ್ತೇವೆ ಎಂದು ಸಿಎಂ ಹೇಳಿದ್ದಾರೆ.ಈಗಲೂ ಕೂಡ ನಾವು ಪಂಚಮಸಾಲಿ ಹೋರಾಟದಿಂದ ಹಿಂದೆ ಸರಿದಿಲ್ಲ.ಬಸವರಾಜ ಬೊಮ್ಮಾಯಿ ಮಧ್ಯಂತರ ವರದಿ ಮೇಲೆ ಮೀಸಲಾತಿ ನೀಡಿದ್ರು.ಅದೇ ತಪ್ಪನ್ನು ಸಿದ್ದರಾಮಯ್ಯ ತಾನು ಮಾಡಲ್ಲ ಎಂದಿದ್ದಾರೆ.ಮೀಸಲಾತಿ ಹೋರಾಟದಲ್ಲಿ ಸತ್ಯ ಮಾತಾಡಿದರೆ ಯತ್ನಾಳ್ ಅವರ ಬಣ್ಣ ಬಯಲಾಗುತ್ತದೆ ಎಂದಿದ್ದಾರೆ.
ನನಗೆ ಈ ತನಕ ಅಧಿಕೃತ ವಾಗಿ ನೋಟೀಸ್ ಬಂದಿಲ್ಲ; ನವದೆಹಲಿಯಲ್ಲಿ ಶಾಸಕ ಯತ್ನಾಳ್ ಹೇಳಿಕೆ
ಬೆಂಗಳೂರು: ಬಿಜೆಪಿಯಲ್ಲಿ ಬಂಡಾಯವೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಶಾಸಕ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ನನಗೆ ಈ ತನಕ ಅಧಿಕೃತ ವಾಗಿ ನೋಟೀಸ್ ಬಂದಿಲ್ಲ. ವಾಟ್ಸಾಪ್ ಬಂದರೆ ಅದನ್ನು ಅಧಿಕೃತ ಎಂದು ಹೇಳಲು ಆಗೋದಿಲ್ಲ. ರಿಜಿಸ್ಟರ್ ಪೋಸ್ಟ್ ಬರಬೇಕು. ಫೇಕ್ ಇರಬಹುದು. ಇದನ್ನು ವಿಜಯೇಂದ್ರನೇ ಮಾಡಿಸಿರಬಹುದು.ಅವರ ಅಪ್ಪನ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿಸಿದ್ದ. ನನ್ನ ಬಳಿ ಉತ್ತರ ಸಿದ್ದವಾಗಿದೆ. ಆದ್ರೆ ಅಧಿಕೃತ ವಾಗಿ ಬಂದಿಲ್ಲ ಎಂದಿದ್ದಾರೆ.
ಪ್ರತ್ಯೇಕ ಸಭೆ ಎಲ್ಲಿದೆ.. ವಕ್ಫ್ ಬಗ್ಗೆ ಹೋರಾಟ ಮಾಡೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ವಿಜಯೇಂದ್ರ ಏನು ಕೆಲಸ ಮಾಡ್ತಾ ಇಲ್ಲ.ಡಿಕೆಶಿ ಗಂಭೀರ ಆರೋಪ ಮಾಡಿದ ಮೇಲೂ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿಲ್ಲ.ಡಿಕೆಶಿ ಜೊತೆ ಶಾಮೀಲು ಆಗಿದ್ದಾರೆ ಎಂದಿದ್ದಾರೆ. ಡಿಕೆ ಸುರೇಶ್ ಗೆ ಮಾನ ಮರ್ಯಾದೆ ಇದ್ರೆ ಒಂದೇ ಒಂದು ಫ್ರೂಫ್ ಕೊಡಲಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಡಿಕೆಶಿ ಡಿಸಿಎಂ ಆದ ಮೇಲೆ ನಾನು ಒಮ್ಮೆ ಒಮ್ಮೆ ಭೇಟಿಯಾಗಿಲ್ಲ.. ನಾನು ಯಾವುದಕ್ಕೂ ಸಹಿ ಹಾಕಿಸಿಕೊಂಡಿಲ್ಲ..ಡಿಕೆಶಿ ಮತ್ತು ವಿಜಯೇಂದ್ರ ಅನೋನ್ಯವಾಗಿದ್ದಾರೆ ನಾನು ಯಾಕೆ ಹೋಗ್ಲಿ.. ಹಾಗಾದ್ರೆ ಡಿಕೆಶಿ ವಿರುದ್ದ ಸಿಬಿಐ ಕೇಸ್ ಯಾಕೆ ಹಾಕುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.