ಮನೆ Latest News ಕಾರ್ಯಕರ್ತರಿಗಾಗಿ ನಾವು ಪ್ರವಾಸ ಮಾಡುತ್ತಿದ್ದೇವೆ; ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿಕೆ

ಕಾರ್ಯಕರ್ತರಿಗಾಗಿ ನಾವು ಪ್ರವಾಸ ಮಾಡುತ್ತಿದ್ದೇವೆ; ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿಕೆ

0

ಬೆಂಗಳೂರು; ವಿರೋಧಿಗಳಿಗೆ ತಿರುಗೇಟು ನೀಡಲು  ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಪ್ತ ನಾಯಕರು ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಕಾರ್ಯಕರ್ತರಿಗಾಗಿ ನಾವು ಪ್ರವಾಸ ಮಾಡುತ್ತಿದ್ದೇವೆ. ಇವತ್ತು ನಾವೆಲ್ಲರೂ ಸಮಾನ ಮಾನಸ್ಕರು ಒಟ್ಟು ಸೇರಿದ್ದೇವೆ. ಯಾವುದೇ ಹೋರಾಟ ಅಂತ ಅಲ್ಲ.ಪಕ್ಷ ಸಂಘಟನೆಗೆಗಾಗಿ ಒಂದಾಗಿದ್ದೇವೆ.ಕಾರ್ಯಕರ್ತರಿಗಾಗಿ ನಾವು ಪ್ರವಾಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಮತ್ತೆ ವಿಧಾನಸಭೆಯಲ್ಲಿ ಎಲ್ಲರೂ ಶಾಸಕರಾಗಲಿ ಎಂದು ಸೇರಿದ್ದೇವೆ. ನಾವು ಯಾರ ವಿರುದ್ದವೂ ಸೇರಿಲ್ಲ, ವಿಜಯೇಂದ್ರ ಅವರ ಕೈ ಬಲಪಡಿಸೋದಕ್ಕೆ ಸೇರಿದ್ದೇವೆ. ಎಲ್ಲರ ಮನಸಿನಲ್ಲಿ ನಾವು ಒಟ್ಟಾಗಿದ್ದೇವೆ ಎಂದು  ತೋರಿಸ್ತೀವಿ.ಯಡಿಯೂರಪ್ಪ ಮಾರ್ಗ ದರ್ಶನ ದಲ್ಲಿ ಕೆಲಸ ಮಾಡೋಕೆ ನಾವು ಸಿದ್ದವಾಗಿದ್ದೇವೆ. ಅವರು ಇರೋವರೆಗೂ ಅವರೇ ನಮ್ಮ ನಾಯಕರು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ.ಅವರ ಹೋರಾಟದಿಂದ ನಾವೆಲ್ಲಾ ಇಲ್ಲಿ ಕುಳಿತ್ತಿದ್ದೇವೆ. ಇಲ್ಲಿ ಇರುವ ಪ್ರತಿಯೊಬ್ಬರ ಕ್ಷೇತ್ರಕ್ಕೆ ಯಡಿಯೂರಪ್ಪ ಅವರು ಬಂದಿದ್ದರು, ಪ್ರವಾಸ ಮಾಡಿದ್ದಾರೆ.ಯಡಿಯೂರಪ್ಪ ಅವರ ಬಗ್ಗೆ ಮಾತಾಡೋಕೆ ನೈತಿಕತೆ, ಅಧಿಕಾರ ಇಲ್ಲ. ಅವರ ಜೊತೆ ಗೆ ಕೆಲಸ‌ ಮಾಡೋಕೆ ಮಾತ್ರ ಇದ್ದೀವಿ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬೆನ್ನಿಗೆ ನಿಂತ ಮಾಜಿ ಶಾಸಕರ ಆಪ್ತ ಪಡೆ; ಇಂದಿನಿಂದ ಪ್ರವಾಸ ಕೈಗೊಂಡ ಕಮಲ ನಾಯಕರು

ಬೆಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬೆನ್ನಿಗೆ ನಿಂತ ಮಾಜಿ ಶಾಸಕರ ಆಪ್ತ ಪಡೆ ನಿಂತಿದೆ. ವಿರೋಧಿಗಳಿಗೆ ತಿರುಗೇಟು ನೀಡಲು ಆಪ್ತ ನಾಯಕರು ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಇವತ್ತು ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸೋ ಮ‌ೂಲಕ ಪ್ರವಾಸ ಆರಂಭವಾಗಿದೆ.ಬೆಂಗಳೂರಿನ ಸದಾಶಿವನಗರದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಿಂದ ನಾಯಕರು ತೆರಳಿದ್ದಾರೆ. ಬಸವರಾಜ್ ದಡೇಸೂಗುರು, ದೊಡ್ಡನಗೌಡ ಪಾಟೀಲ್, ಪರಣ್ಣ ಮುನವಳ್ಳಿ, ರೂಪಾಲಿ ನಾಯಕ್, ಹರತಾಳು ಹಾಲಪ್ಪ, ಸುನೀಲ್ ಹೆಗಡೆ, ಬಸವರಾಜ್ ನಾಯ್ಕ್, ಅಶೋಕ್ ಕಾಟವೆ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಇನ್ನು ರೇಣುಕಾಚಾರ್ಯ, ಕಟ್ಟಾ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಿತು.ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರೇಣುಕಾಚಾರ್ಯ ಮಾಜಿ ಶಾಸಕರು ಇವತ್ತು ಮುಳುಬಾಗಿಲು ನಲ್ಲಿರೋ ಕುರುಡುಮಲೆ ವಿನಾಯಕ ದರ್ಶನ ಪಡೆಯುತ್ತೇವೆ. ನಾಳೆ ಚಾಮುಂಡೇಶ್ವರಿ ದರ್ಶನ್ ಪಡೆಯುತ್ತೇವೆ. ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಕೇಳಿಕೊಳ್ಳುತ್ತೇವೆ.ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಬರಬೇಕು. ಈಗಾಗಲೇ ಮುಡಾ ವಿರುದ್ದ ಹೋರಾಡ ಮಾಡಲಾಗಿದೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಹೋರಾಟ‌ ಮಾಡಲಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು ಎಂದಿದ್ದಾರೆ.

ಉಪಚುನಾವಣೆ ಯಲ್ಲಿ ನಮಗೆ ಸೋಲಾಗಿದೆ. ಜಾತಿ, ಹಣ ಬಲದಿಂದ ಕಾಂಗ್ರೆಸ್ ನವರು ಗೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಮಿತ್ರಪಕ್ಷಗಳು ೧೯ ಸ್ಥಾನ ಗೆದ್ದಿದ್ದೇವೆ. ಕಾರ್ಯಕರ್ತರು, ಮುಖಂಡರಲ್ಲಿ ಆತ್ಮಸ್ಥೈರ್ಯ ಮತ್ತು ವಿಶ್ವಾಸ ಹೆಚ್ಚಿಸಲು ಪ್ರವಾಸ ಮಾಡುತ್ತಿದ್ದೇವೆ. ಬಿಜೆಪಿಯಲ್ಲಿ ಕೆವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆಯ ಬೇಕು. ಹಿಂದೆ ಯಡಿಯೂರಪ್ಪ ಅವರು ಪಕ್ಷ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮೊನ್ನೆ ಮೊನ್ನೆ ಬಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ವಯಂ ಘೋಷಿತವಾಗಿ ಹಿಂದು ಹುಲಿ ಎಂದು ಹೇಳುತ್ತಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಿನ್ನೆ ಸದಾನಂದ ಗೌಡರ ಬಗ್ಗೆ ಏನೇನೋ ಹೇಳಿದ್ದಾರೆ.ದಾವಣಗೆರೆ ಯಲ್ಲಿ ಬೃಹತ್ ಸಮಾವೇಶ ಮಾಡುತ್ತಿದ್ದೇವೆ. ಅದನ್ನ ನಾಳೆ ಘೋಷಣೆ ಮಾಡುತ್ತೇವೆ. ಎಲ್ಲರನ್ನೂ ಆಹ್ವಾನ ಮಾಡಿ ದಿನಾಂಕ ಘೋಷಿಸುತ್ತೇವೆ. ಇನ್ನಷ್ಟು ನಾಯಕರು ಬರಬೇಕಿತ್ತು, ಅವರೂ ಬರ್ತಾರೆ. ಕುರುಡುಮಲೆ ಯಲ್ಲಿ ಇವತ್ತು ವಿಶೇಷ ಪೂಜೆ ಸಲ್ಲಿಸುತ್ತೇವೆ. ೩೦ ರಿಂದ ೩೫ ಜನ ಪೂಜೆ ಸಲ್ಲಿಸುತ್ತೇವೆ. ರಾಜ್ಯದಲ್ಲಿ ಸಂಘಟನೆ ಹೆಚ್ಚು ಮಾಡಬೇಕು. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ದ ಮಾತಾಡುತ್ತಾರೆ. ಸ್ವಯಂ ಘೋಷಿತ ಬಂಡಾಯ. ಹೊಲಸು ನಾಲಿಗೆಯಿಂದ ನಾವು ಸೋಲೋದಕ್ಕೆ ಕಾರಣವಾಗಿದೆ. ಬಿಜೆಪಿ ಸೋಲಿಗೆ ಹರಕು ಬಾಯಿ ಕಾರಣವಾಗಿದೆ. ನಡ್ಡಾ ಮೋದಿ ಅವರನ್ನ ಪ್ರಶ್ನೆ ಮಾಡುತ್ತೀರಿ. ಜೋಶಿ, ಶೋಭಾ ನಿಮಗೆ ಬೆಂಬಲ ಕೊಟ್ಟಿಲ್ಲ, ವಕ್ಫ್ ಗೆ ಬೆಂಬಲ ಆದ್ರೆ, ನಿಮ್ಮ ವೈಯಕ್ತಿಕ ಹೋರಾಟಕ್ಕೆ ಅಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಲ್ಲೂ ಬಣ ಇವೆ, ಆದ್ರೆ ಅವರು ತೋರಿಸಿಕೊಳ್ತಿಲ್ಲ. ಹರಕು ಬಾಯಿ ನಿಲ್ಲಿಸಬೇಕು. ಮೋದಿ, ನಡ್ಡಾ, ಯಡಿಯೂರಪ್ಪ, ಸದಾನಂದಗೌಡರನ್ನ ಟೀಕೆ ಮಾಡುತ್ತೀರಿ. ಇದು ಸರಿಯಿಲ್ಲ, ನಿಮ್ಮ ನಡುವಳಿಕೆ ಬದಲಾಗಬೇಕು. ಇವರನ್ನ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದಿದ್ದಾರೆ.