ಬೆಂಗಳೂರು; ಬಿಪಿಎಲ್ ಕಾರ್ಡ್ ರದ್ದು ವಿಚಾರ ಖಂಡಿಸಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೈ ಮಾರುತಿ ನಗರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕರಾದ ಡಾ. ಅಶ್ವಥ್ ನಾರಾಯಣ, ಕೆ. ಗೋಪಾಲಯ್ಯ, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಭಾಗಿಯಾಗಿದ್ರು. ರದ್ದುಗೊಳಿಸಲ್ಪಟ್ಟ ಬಿಪಿಎಲ್ ಕಾರ್ಡ್ ದಾರರ ಜೊತೆ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ರು.
ಇನ್ನು ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಭಟನಾ ಭಾಷಣ ಮಾಡಿ ಬಡವರ ಮನೆಗೆ ಕನ್ನ ಹಾಕಿದ್ದೀರಲ್ಲಾ ಸಿದ್ದರಾಮಯ್ಯನವರೇ ನಿಮಗೆ ನಾಚಿಕೆ ಆಗಲ್ವಾ?. ನಿಮಗೆ ಸಾಮಾನ್ಯ ಪ್ರಜ್ಞೆಯೂ ಇಲ್ಲವಲ್ಲಾ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದ್ರು. ಬಡವರ ಅನ್ನ ಕಿತ್ತಿದ್ದೀರಲ್ಲಾ ನಿಮಗೆ ದೇವರು ಒಳ್ಳೆಯದು ಮಾಡ್ತಾನಾ?. ಇದು ಪಾಪಿಗಳ ಸರ್ಕಾರ . ರಾಜ್ಯದಲ್ಲಿ 22 ಲಕ್ಷ ಬೋಗಸ್ ಕಾರ್ಡ್ ಗಳಿದ್ದಾವಂತೆ. ಕಾರ್ಡ್ ರದ್ದು ಮಾಡಬೇಕಾದರೆ ಒಂದು ನೋಟಿಸ್ ಕೊಡುವ ಒಂದು ಕಾಮನ್ ಸೆನ್ಸ್ ಇಲ್ಲವೇ?. ನ್ಯಾಯಬೆಲೆ ಅಂಗಡಿಗೆ ಹೋದರೆ ಸಿದ್ದರಾಮಯ್ಯನೇ ಕೇಳಿ ಅಂತಾರಂತೆ. ಅನುದಾನ ಕೊಡದೇ ಇರುವುದಕ್ಕೆ ಸಿದ್ದರಾಮಯ್ಯ ಮನೆಗೆ ಯಾವ ಶಾಸಕರುಗಳು ಹೋಗುತ್ತಿಲ್ಲ. ಬಿಪಿಎಲ್ ಕಾರ್ಡ್ ರದ್ದು ಮಾಡಿದ್ರೆ 10 ಸಾವಿರ ಕೋಟಿ ಉಳಿಸಬಹುದು, ಆ ಹಣವನ್ನು ಶಾಸಕರುಗಳಿಗೆ ಸಮಾಧಾನ ಮಾಡಬಹುದು ಅಂತಾ ಕಾರ್ಡ್ ತೆಗೆಯುತ್ತಿದ್ದಾರೆ ಎಂದರು.
ಬಿಪಿಎಲ್ ಕಾರ್ಡ್ ಇಲ್ಲದೇ ಸರ್ಕಾರದ ಯಾವುದೇ ಸಬ್ಸಿಡಿ ಸಿಗುವುದಿಲ್ಲ. ಅದಕ್ಕಾಗಿ ನಾವು ನಮ್ಮ ಎಲ್ಲಾ ಶಾಸಕರು ಬೀದಿಗಳಿದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಬಾರದು. ರದ್ದುಗೊಂಡ ಕಾರ್ಡ್ ಆದೇಶವನ್ನು ವಾಪಸ್ಸು ಪಡೆಯಬೇಕು. ಎಷ್ಟು ಜನ ಕಾಂಗ್ರೆಸ್ ನವರು ಹೆಲಿಕಾಪ್ಟರ್ ಇಟ್ಟುಕೊಂಡಿದ್ದೀರಾ?. ಅವತ್ತು ಕಾಕಾ ಪಾಟೀಲ್ ಗೆ, ಮಹದೇವಪ್ಪಗೆ ಫ್ರೀ ಅಂದ್ರಲ್ಲಾ. ಇದು ಬೆಂಗಳೂರು, ಕರ್ನಾಟಕದ ಸಮಸ್ಯೆ. ಇದರ ವಿರುದ್ಧ ಜನರ ದಂಗೆ ಎದ್ದೇಳಬೇಕು. ಅನ್ನ ಕಿತ್ತರೆ ನರಕ ಗ್ಯಾರಂಟಿ, ಆ ನರಕಕ್ಕೆ ನೀವು ಹೋಗೋದು.ಸರ್ಕಾರಿ ನೌಕರರು ಇದ್ದರೆ ಕಿತ್ತು ಹಾಕಿ ಯಾರು ಬೇಡ ಅಂತಾರೆ. ಬೋಗಸ್ ಅಂತೀರಲ್ಲಾ ಆಗ ಎಲ್ಲಾ ಮಣ್ಣು ತಿಂತಿದ್ರಾ. ಬೋಗಸ್ ಕಾರ್ಡ್ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಧಮ್, ತಾಕತ್ ಇಲ್ಲ ನಿಮಗೆ. ಅದಕ್ಕೆ ಬಡವರ ಮೇಲೆ ನಿಮ್ಮ ಕೋಪ. ಕೂಡಲೇ ನಿಲ್ಲಿಸಬೇಕು, ವಕ್ಪ್ ಬೋರ್ಡ್ ಆದೇಶದಂತೆ ಇದಕ್ಕೂ ಆದೇಶ ಹೊರಡಿಸಬೇಕು.ಅಧಿಕಾರಿಗಳೇ ನಿಮ್ಮ ಆಫೀಸ್ ಗೆ ಬಂದು ಬೀಗ ಹಾಕುತ್ತೇನೆ ಎಂದರು.
ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿಯಾಗಿದೆ. ಕಾರ್ಡ್ ರದ್ದು ತಕ್ಷಣ ನಿಲ್ಲಿಸಬೇಕು. ನ್ಯಾಯಯುತ ಅವಶ್ಯಕತೆ ಇರುವುದನ್ನು ರದ್ದು ಮಾಡುವುದು ತಪ್ಪು. ಬಿಪಿಎಲ್ ಕಾರ್ಡ್ ಇದ್ದರೆ ವ್ಯಕ್ತಿ ಭರವಸೆಯಿಂದ ಬದುಕಲು ಸಾಧ್ಯ. ಮುಖ್ಯಮಂತ್ರಿಗಳೇ ಬಡವರ ವಿರೋಧಿಯಾಗಬೇಡಿ.ಜನರಿಗೆ ಅನ್ಯಾಯ ಮಾಡುವ ಕೆಲಸ ಬೇಡ.ಬೋಗಸ್ ಕಾರ್ಡ್ ಗಳನ್ನು ಇರುವುದು ಮಾತ್ರ ತೆಗೆದು ಹಾಕಿ ಎಂದರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ; ಬಿಪಿಎಲ್ ಕಾರ್ಡ್ ರದ್ದುಗೊಂಡ ಕಾರ್ಡ್ ದಾರರ ಮನೆಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ
ಬೆಂಗಳೂರು; ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಪಿಎಲ್ ಕಾರ್ಡ್ ರದ್ದುಗೊಂಡ ಕಾರ್ಡ್ ದಾರರ ಮನೆಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದರು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಪಿಎಲ್ ಕಾರ್ಡ್ ದಾರರ ಮನೆಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದರು. ಇದೇ ವೇಳೆ ಬಿಪಿಎಲ್ ಕಾರ್ಡ್ ರದ್ದುಗೊಂಡ ಕಾರ್ಡ್ ದಾರರು ಕಾರ್ಡ್ ರದ್ದತಿಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕಾರ ಮಾಡಿದರು.
ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೈ ಮಾರುತಿ ನಗರದಲ್ಲಿ ಬಿಪಿಎಲ್ ಕಾರ್ಡ್ ಅನರ್ಹತೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ಶಾಸಕರಾದ ಡಾ. ಅಶ್ವಥ್ ನಾರಾಯಣ ಮತ್ತು ಕೆ. ಗೋಪಾಲಯ್ಯ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸಾಥ್ ನೀಡಿದರು.