ಮನೆ Latest News ಹಾವೇರಿಯಲ್ಲಿ ರಾಕ್ ಸ್ಟಾರ್ ಹೋರಿಯ ಸವಿನೆನಪಿಗಾಗಿ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ; ಹೋರಿ ಬೆದರಿಸುವ...

ಹಾವೇರಿಯಲ್ಲಿ ರಾಕ್ ಸ್ಟಾರ್ ಹೋರಿಯ ಸವಿನೆನಪಿಗಾಗಿ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ; ಹೋರಿ ಬೆದರಿಸುವ ಹಬ್ಬ ಭಾರೀ ಅನಾಹುತ

0

 

ಹಾವೇರಿಯಲ್ಲಿ ರಾಕ್ ಸ್ಟಾರ್ ಹೋರಿಯ ಸವಿನೆನಪಿಗಾಗಿ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ಆಯೋಜನೆ ಮಾಡಲಾಗಿತ್ತು. ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ಆಚರಿಸಲಾಯಿತು.

ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ದೆಯಲ್ಲಿ ರಾಣೇಬೆನ್ನೂರು ‌ಕಾ ರಾಜ್, ಶಿವಮೊಗ್ಗದ ಕಿಂಗ್, ಭೀಮ್ ,ಕರ್ಜಗಿ ಓಂ, ಹಾವೇರಿ ಕಾ ರಾಜ್, ಕರಿ ಚಿರತೆ, ಅನ್ನದಾತ ಸೇರಿದಂತೆ ನೂರಾರು ಹೋರಿಗಳು ಭಾಗವಹಿಸಿದ್ದವು. ಅಖಾಡದಲ್ಲಿ ಜಿಂಕೆಯಂತೆ ಕೊಬ್ಬರಿ ಹೋರಿಗಳು ಓಡಿದವು. ಲಕ್ಷಾಂತರ ಜನರ ಕೇಕ್ ಚಪ್ಪಾಳೆ, ಹುಚ್ಚದ್ದು ಕುಣಿಯುತ್ತಿರೋ ಯುವಕರ ಮಧ್ಯೆ ಹೋರಿಗಳು ಓಡಿ ಮನರಂಜಿಸಿದವು. ಕೊಬ್ಬರಿ ಹೋರಿಯ ಮಾಲೀಕರು.ಬಲೂನ್ , ಕೊಬ್ಬರಿ ಕಟ್ಟಿ ಅಖಾಡದಲ್ಲಿ ಹೋರಿಗಳನ್ನ ಬಿಟ್ಟು ಸಂಭ್ರಮಿಸಿದ್ರು. ಹೋರಿಯನ್ನ ಹಿಡಿಯಲು ಪೈಲ್ವಾನ್ ಹರಸಹಾಸ ಪಟ್ರು. ಹೋರಿ ಹಬ್ಬ ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು.

ಹೋರಿ ಹಬ್ಬದಲ್ಲಿ ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಹೋರಿಗಳು ಭಾಗಿಯಾಗಿದ್ದವು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಹಣ ಕೂಡಿಟ್ಟು  ಹಬ್ಬದ ಹೋರಿ ಖರೀಸಿದ್ರು ಜೋಶ್ ನಿಂದ ಭಾಗಿಯಾಗಿದ್ರು.

ಇನ್ನು ಹೋರಿ ಹಬ್ಬದಲ್ಲಿ ಅನಾಹುತವೊಂದು ಕೂಡ ನಡೆದಿದೆ. ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ 30 ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಓರ್ವ ವ್ಯಕ್ತಿಯ ಕಣ್ಣು ಗುಡ್ಡೆಯೇ ಕಿತ್ತು ಹೋಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹಾವೇರಿ ನಾಗೇಂದ್ರನಮಟ್ಟಿಯಲ್ಲಿ ನಡೆದ ರಾಜ್ಯಮಟ್ಟದ ಹೋರಿ ಹಬ್ಬದಲ್ಲಿ ಘಟನೆ ನಡೆದಿದೆ. ಗಾಯಾಳುಗಳು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು. ಇನ್ನೂ ಕೆಲ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೊಬ್ಬರಿ ಸ್ಪರ್ಧೆಯಲ್ಲಿ ಎದೆ ಭಾಗ, ಕೈ ಕಾಲು ಸೇರಿದಂತೆ ವಿವಿಧ ಭಾಗಕ್ಕೆ ಹೋರಿ ತಿವಿದು ಗಾಯಗಳಾಗಿವೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.