ಬೆಂಗಳೂರು; ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಉಸ್ತುವಾರಿ ತೆಗೆದುಕೊಂಡವರ ಬಗ್ಗೆ ನನಗೆ ಆತಂಕ ಇದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಉಸ್ತುವಾರಿ ತೆಗೆದುಕೊಂಡವರ ಬಗ್ಗೆ ನನಗೆ ಆತಂಕ ಇದೆ. ಸಂಡೂರಿನಲ್ಲಿ ಜೈಲಿನಿಂದ ಹೊರಬಂದ ನಾಗೇಂದ್ರ ಉಸ್ತುವಾರಿ. ಶಿಗ್ಗಾಂವ್ ನಲ್ಲಿ ಜಮೀರ್ ಅಹಮದ್. ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್.ಸಿದ್ದರಾಮಯ್ಯ ನಿನ್ನೆ ಲೋಕಾಯುಕ್ತಕ್ಕೆ ಹೋಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಮೂರೂ ಉಸ್ತುವಾರಿಗಳು ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆದವರು ಎಂದಿದ್ದಾರೆ.
ಇನ್ನು ಜಮೀರ್ ಬಗ್ಗೆ ಈಗ ಮಾತನಾಡುವುದೇ ಅಸಹ್ಯ. ಕೊಳ್ಳೆ ಹೊಡೆದ ಹಣವನ್ನು ಚುನಾವಣೆಯಲ್ಲಿ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಾಂಗ್ರೆಸ್ ಉಸ್ತುವಾರಿಗಳ ಮೇಲೆ ಚುನಾವಣಾ ಆಯೋಗ ನಿಗಾ ಇಡಬೇಕು ಇಲ್ಲದಿದ್ದರೆ ಹಣದ ಪ್ರಭಾವದ ಚುನಾವಣೆಯಾಗಿ ಮಾಡುತ್ತಾರೆ.ಇಲ್ಲದಿದ್ದರೆ ಇದು ನ್ಯಾಯ ಸಮ್ಮತ ಚುನಾವಣೆ ಆಗುವುದಿಲ್ಲ.ಮೂರೂ ಉಸ್ತುವಾರಿಗಳ ಮೇಲೆ ನಿಗಾ ವಹಿಸಿ ಅವರ ಅಂಡರ್ ಗ್ರೌಂಡ್ ಡೀಲಿಂಗ್ ಗಳನ್ನು ಚುನಾವಣಾ ಆಯೋಗ ಹ್ಯಾಂಡಲ್ ಮಾಡಬೇಕು. ಇಲ್ಲದಿದ್ದರೆ ಜನ ಸಾಮಾನ್ಯರ ತಲೆ ಹಾಳು ಮಾಡಿ ಬಿಡುತ್ತಾರೆ.ಜನ ಆಮಿಷಕ್ಕೆ ಬಲಿಯಾದರೆ 17 ತಿಂಗಳಲ್ಲಿ ಹಗರಣದ ಆಡಳಿತ ನಡೆಯುತೋ ಅದು ಮತ್ತೆ ಮುಂದುವರಿಯುತ್ತದೆ ಬಿಜೆಪಿ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವುದು ನಿಜ ಎಂದಿದ್ದಾರೆ.