ಮನೆ ಪ್ರಸ್ತುತ ವಿದ್ಯಮಾನ ಅರಣ್ಯದ ಪಾಲಿಗೆ ಟಾಕ್ಸಿಕ್ ಆದ ಯಶ್ ಸಿನಿಮಾ; ಎಚ್ಎಂಟಿ ಅರಣ್ಯ ಪ್ರದೇಶ ದಲ್ಲಿ ಟಾಕ್ಸಿಕ್ ಸಿನಿಮಾ...

ಅರಣ್ಯದ ಪಾಲಿಗೆ ಟಾಕ್ಸಿಕ್ ಆದ ಯಶ್ ಸಿನಿಮಾ; ಎಚ್ಎಂಟಿ ಅರಣ್ಯ ಪ್ರದೇಶ ದಲ್ಲಿ ಟಾಕ್ಸಿಕ್ ಸಿನಿಮಾ ಚಿತ್ರೀಕರಣ

0

ಬೆಂಗಳೂರು: ಸೆಟ್ಟೇರಿದಾಗಿನಿಂದ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಪ್ರದೇಶ ಬಳಕೆ ಮಾಡಲಾಗಿದ್ದು, ಅಲ್ಲಿ ಸಿನಿಮಾ ಸೆಟ್ ಹಾಕಲು ಸಾವಿರಾರು ಮರಗಳನ್ನೇ ಕಡಿದಿರುವ ಆರೋಪ ಕೇಳಿ ಬಂದಿದೆ.

ಇದೀಗ ಅರಣ್ಯ ಕಡಿದವರ ವಿರುದ್ದ ಕ್ರಮ ಜರುಗಿಸಲು ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.ಈ ಬಗ್ಗೆ ಸ್ಯಾಟಲೈಟ್ ಇಮೇಜ್ ಪಡೆದುಕೊಂಡು ಪರಿಶೀಲನೆ ಮಾಡಿದ್ದಾರೆ.ಸ್ಯಾಟಲೈಟ್ ಇಮೇಜ್ ಪಡೆಯುವ ವೇಳೆ ನೂರಾರು ಮರಗಳು ನೆಲಸಮವಾಗಿದ್ದು ಪತ್ತೆಯಾಗಿದೆ. ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಇನ್ನು ಸೆಟ್ ಹಾಕಿದ್ದ ಸ್ಥಳಕ್ಕೂ ಈಶ್ವರ್ ಖಂಡ್ರೆ ಭೇಟಿ  ನೀಡಿ ಪರಿಶೀಲನೆ ಮಾಡಿದ್ದಾರೆ.

ಇನ್ನು ಈ ಪ್ರತಿಕ್ರಿಯಿಸಿರುವ  ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ ಎಂಟಿ ತನ್ನ ವಶದಲ್ಲಿದ್ದ ಜಮೀನನ್ನ ಮಾರಾಟ ಮಾಡಿದ ಜೊತೆ ಮರ, ಗಿಡ ಎಲ್ಲಾ ಕಡಿತ ಮಾಡಿ ಬಾಡಿಗೆ ಕೊಟ್ಟಿದ್ದಾರೆ. ಚಿತ್ರೀಕರಣಕ್ಕೆ ಬಾಡಿಗೆ ಕೊಟ್ಟಿದ್ದಾರೆ ದುಡ್ಡು ಮಾಡ್ತಿದ್ದಾರೆ.ಎಲ್ಲಾ ರೀತಿಯ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೀತಿದೆ. ನಾನು ಖುದ್ದು ಹೋಗಿ ನೋಡಿದ್ದೇನೆ.ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ. ಏರಿಯಲ್ ಸರ್ವೇಯಲ್ಲಿ ಕಾಣಿಸಿದೆ.ಇದು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ.ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಕಾಯ್ದೆ 24 ರಡಿ ಕೇಸ್ ದಾಖಲಿಸಲು ಅವಕಾಶ ಇದೆ ಎಂದಿದ್ದಾರೆ.

ಈಗಿನ ಪರಿಸ್ಥಿತಿ ತರಿಸಿಕೊಂಡಿದ್ದೇವೆ. ಹಿಂದಿನ ಜಾಗದ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ. ಜಾಗ ಎಚ್ ಎಂಟಿ ವಶದಲ್ಲಿ ಇಲ್ಲ. ಪ್ರಾಥಮಿಕ ಹಂತದಲ್ಲಿ ಮಾಹಿತಿ ಕೊಟ್ಟಿದ್ದೇವೆ. ಒಳಗೊಳಗೆ ಏನಿದೆ ಅಂತಾ ತನಿಖೆ ಆಗಬೇಕು.ಕ್ರಮಕ್ಕೆ ಪತ್ರ ಬರೆದಿದ್ದೇನೆ, ತನಿಖೆ ಆಗಲಿ. ಜಾಗದಲ್ಲಿ ಸಣ್ಣ ವಿಲೇಜ್ ಥರ ಸೆಟ್ ಹಾಕಿದ್ದಾರೆ. ಅರಣ್ಯ ಸಂಕ್ಷರಣೆ ಮಾಡೋದು ನನ್ನ ಕರ್ತವ್ಯ.ಅದ್ರಲ್ಲಿ ಯಾವುದೇ ರೀತಿ ರಾಜಿ ಇಲ್ಲ ಎಂದಿದ್ದಾರೆ.

ಇನ್ನೂ ಏನ್ ಧೃಢೀಕರಣ ಬೇಕು. ಅಂಗೈ ಹುಣ್ಣಿಗೆ ಕನ್ನಡಿ ಅವಶ್ಯಕತೆ ಇಲ್ಲ. ಸರ್ವೋಚ್ಚ ನ್ಯಾಯಾಲಯ ಏನ್ ಹೇಳಿದೆ. ಎಚ್ ಎಂಟಿ ಕೂಡ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಅಲ್ಲಿ ವಿಚಾರಣೆಗೆ ಬರಬೇಕಿದೆ.ಸ್ಯಾಟಲೈಟ್ ಚಿತ್ರ ನೋಡಿದಾಗ ಕಳೆದ ಒಂದು ವರ್ಷದ್ದು ನೋಡಿದ್ದೇವೆ. ಅರಣ್ಯ ಪರವಾನಗಿ ತೆಗೆದುಕೊಂಡಿಲ್ಲ. ಪಾಲಿಕೆಗೆ ದೂರು ಕೊಟ್ಟಿದ್ದೇವೆ. ಕಮಿಟಿ ಮಾಡಿದ್ದಾರೆ, ನೋಟೀಸ್ ಕೊಟ್ಟಿದ್ದಾರೆ. ಚಿತ್ರತಂಡದ ಮೇಲೆ ನಾವು ಹೇಳ್ತಿಲ್ಲ. ಯಾರ್ ತಪ್ಪು ಇದ್ಯೋ ನೋಡಬೇಕು ಎಂದಿದ್ದಾರೆ.