ಮನೆ Latest News ತೀವ್ರ ಬೆನ್ನುನೋವು ಹಿನ್ನೆಲೆ ; ನಟ ದರ್ಶನ್ ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್

ತೀವ್ರ ಬೆನ್ನುನೋವು ಹಿನ್ನೆಲೆ ; ನಟ ದರ್ಶನ್ ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್

0

ಬಳ್ಳಾರಿ;  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅತೀವವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಬೆನ್ನು ನೋವಿನಿಂದಾಗಿ ಅವರಿಗೆ ನಡೆಯೋದಕ್ಕೂ ಕಷ್ಟವಾಗುತ್ತಿದೆ. ಈಗಾಗಲೇ ಜೈಲಿನಲ್ಲಿ ದರ್ಶನ್ ಬೇಡಿಕೆಯಂತೆ ಮೆಡಿಕಲ್ ಬೆಡ್ ಹಾಗೂ ದಿಂಬು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಹಾಗಾಗಿದ ಇಂದು ಅವರನ್ನು ಬಳ್ಳಾರಿ ಜೈಲಿನಿಂದ ಪೊಲೀಸರು ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ

ಪೊಲೀಸರು ಜೈಲಿನ ಅಂಬುಲೆನ್ಸ್ ನಲ್ಲಿ ನಟ ದರ್ಶನ್ ಅವರನ್ನು ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಒಬ್ಬರು ಡಿವೈಎಸ್ ಪಿ ನಾಲ್ವರು ಸಿಪಿಐ ಭದ್ರತೆಯೊಂದಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.ರೆಡಿಯೋಲಾಜಿಸ್ಟ್ ಡಾ ಸದಾಶಿವಗೌಡ ನೇತೃತ್ವದಲ್ಲಿ ದರ್ಶನ್ ಗೆ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ.  ಈ ವೇಳೆ ನರರೋಗ ತಜ್ಞ ಡಾ ವಿಶ್ವನಾಥ್, ಜಿಲ್ಲಾ ಸರ್ಜನ್ ಡಾ ಬಸಾರೆಡ್ಡಿ, ಅನಸ್ತೇಶಿಯಾ ವೈದ್ಯ ಡಾ ಬಾಲಬಾಸ್ಕರ್ ಉಪಸ್ಥಿತರಿದ್ದರು. ಸದ್ಯ ದರ್ಶನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪತ್ನಿಯನ್ನು ಭೇಟಿಯಾಗುವ ವೇಳೆ ದಾಸನನ್ನು ಕಾಡಿದ ಬೆನ್ನುನೋವು; ಹೆಜ್ಜೆ ಇಡಲು ಪರದಾಡಿದ ಡಿ ಬಾಸ್

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇಂದು ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಆಗಮಿಸಿದ್ದರ. ಈ ವೇಳೆ ದರ್ಶನ್ ಅವರು ಪತ್ನಿಯನ್ನು ಭೇಟಿಯಾಗಲು ತಮ್ಮ ವಿಶೇಷ ಸೆಲ್ ನಿಂದ ಸಂದರ್ಶಕರ ಕೊಠಡಿಗೆ ಆಗಮಿಸಿದ್ರು. ಆಗ ದರ್ಶನ್ ಅವರು ಬೆನ್ನು ನೋವಿನಿಂದಾಗಿ ನಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದದ್ದು ಕಂಡು ಬಂತು.

ತೀವ್ರವಾದ ಬೆನ್ನು ನೋವು ಇರೋದರಿಂದ ದಾಸ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದದ್ದು ಕಂಡು ಬಂತು. ಎಂದಿನಂತೆ ಪತ್ನಿ ವಿಜಯಲಕ್ಷ್ಮೀ ಪತ್ನಿಗಾಗಿ ಹಣ್ಣು, ಬಟ್ಟೆ, ಡ್ರೈ ಫ್ರೂಟ್ಸ್ ತಂದಿದ್ದರು. ಇನ್ನು ವಿಜಯಲಕ್ಷ್ಮೀ ಅವರಿಗೆ ಅವರ ಸಂಬಂಧಿ ಸುಶಾಂತ್ ನಾಯ್ಡು ಅವರು ಸಾಥ್ ನೀಡಿದ್ರು.

ಇನ್ನೊಂದು ಕಡೆ ಬಳ್ಳಾರಿ ಜೈಲಿನಲ್ಲಿ ಡಿ ಬಾಸ್ ದರ್ಶನ್ ಗೆ ಫಿಜಿಯೋ ಥೆರಫಿ ಟ್ರೀಟ್ ಮೆಂಟ್ ಆರಂಭವಾಗಿದೆ. ನ್ಯೂರೋ ಸರ್ಜನ್ ವರದಿ ಆಧರಿಸಿ ಟ್ರೀಟ್ ಮೆಂಟ್ ಶುರು ಮಾಡಲಾಗಿದೆ. ನ್ಯೂರೋ ಸರ್ಜನ್ ಡಾ.ವಿಶ್ವನಾಥ್ ಅವರ ತಪಾಸಣೆ ನಡೆಸಿ ವರದಿ ನೀಡಿದ್ದರು. ಎಂಆರ್ ಐ ಸ್ಕ್ಯಾನ್ ಜೊತೆಗೆ ಫಿಜಿಯೋ ಥೆರಫಿಗೆ ಸೂಚಿಸಿದ್ದರು. ಇಂದಿನಿಂದ ಒಂದು ಗಂಟೆ ಕಾಲ ಫಿಜಿಯೋ ಥೆರಫಿ ಟ್ರೀಟ್ ಮೆಂಟ್ ಆರಂಭವಾಗಿದೆ.ಬೆನ್ನು ನೋವು ಉಲ್ಬಣಿಸಿದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈಲ್ ಅಧಿಕಾರಿಗಳು…ವಿಮ್ಸ್ ನಿಂದ ಫಿಜಿಯೋ ಥೆರಫಿ ಫೋರ್ಟಬಲ್ ಮಿಷನ್ ತರಿಸಿದ್ದಾರೆ. ವಿಮ್ಸ್ ವೈದ್ಯರಿಂದಲೇ ಪ್ರತಿದಿನ 7 ದಿನಗಳ ಕಾಲ ಮಧ್ಯಾಹ್ನ 3 ರಿಂದ 4 ಗಂಟೆಗೆ ಟ್ರಿಟ್ ಮೆಂಟ್ ನಡೆಯಲಿದೆ.