ಮನೆ Latest News ನಮ್ಮೆಲ್ಲರ ನಾಯಕರಾದ ಮೋದಿ, ಅಮಿತ್‌ ಶಾ, ನಡ್ಡಾ ಅವರಿಗೆ ಧನ್ಯವಾದಗಳು; ಬೆಂಗಳೂರಿನಲ್ಲಿ ಶಿಗ್ಗಾವಿ ಕ್ಷೇತ್ರದ ಬಿಜೆಪಿ...

ನಮ್ಮೆಲ್ಲರ ನಾಯಕರಾದ ಮೋದಿ, ಅಮಿತ್‌ ಶಾ, ನಡ್ಡಾ ಅವರಿಗೆ ಧನ್ಯವಾದಗಳು; ಬೆಂಗಳೂರಿನಲ್ಲಿ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿಕೆ

0

ಬೆಂಗಳೂರು; ನಮ್ಮೆಲ್ಲರ ನಾಯಕರಾದ ಮೋದಿ, ಅಮಿತ್‌ ಶಾ, ನಡ್ಡಾ ಅವರಿಗೆ ಧನ್ಯವಾದಗಳು ಎಂದು ಬೆಂಗಳೂರಿನಲ್ಲಿ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಮ್ಮೆಲ್ಲರ ನಾಯಕರಾದ ಮೋದಿ, ಅಮಿತ್‌ ಶಾ, ನಡ್ಡಾ ಅವರಿಗೆ ಧನ್ಯವಾದಗಳು.ಕರ್ನಾಟಕದ ನೆಚ್ಚಿನ ನಾಯಕ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಅವರಿಗೆ ಧನ್ಯವಾದಗಳು.ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ಪಕ್ಷಕ್ಕೆ ಧನ್ಯವಾಗಳು.ತಂದೆ ತಾಯಿ‌ ಆಶೀರ್ವಾದದಿಂದ ಈ ಅವಕಾಸದ ಸಿಕ್ಕಿದೆ. ನಮ್ಮ‌ ತಂದೆ ನಾಲ್ಕು ಬಾರಿ ಗೆದ್ದಿದ್ದಾರೆ.ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನ ಮುಂದುವರಿಸುತ್ತೇನೆ ಎಂದಿದ್ದಾರೆ.

ಶಿಗ್ಗಾವಿ ಜನರ ಕಷ್ಟ ಸುಖದ ಜೊತೆಗೆ ನಾನಿರುತ್ತೇನೆ.ನಾನು ಸೀಟು ಕೇಳಿರಲಿಲ್ಲ, ವರಿಷ್ಠರು ತೀರ್ಮಾನ ಮಾಡಿದ್ದಾರೆ.ಅವರ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ.2018ರಿಂದ ತಂದೆಯ ಜೊತೆ ಚುನಾವಣಾ ಕೆಲಸ ಮಾಡಿಕೊಂಡು ಬಂದಿದ್ದೇನೆ.ಲೋಕಸಭೆ ಚುನಾವಣೆಯಲ್ಲೂ ತಂದೆಯೊಟ್ಟಿಗೆ ಚುನಾವಣೆ ಕೆಲಸ ಮಾಡಿದ್ದೇನೆ ಎಂದರು.

ಇನ್ನು ಶಿಗ್ಗಾಂವಿ ಕ್ಷೇತ್ರಕ್ಕೆ ಬೊಮ್ಮಾಯಿ ಪುತ್ರ ಭರತ್ ಅಭ್ಯರ್ಥಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಮನಸಲ್ಲಿ ಏನೇ ಇದ್ದರೂ ಪಕ್ಷಕ್ಕಾಗಿ, ಸಮಾಜಕ್ಕಾಗಿ, ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗ್ತೇನೆ. ಎರಡು ದಿನ ಸಮಯ ಕೇಳಿದ್ದೆ, ಆದ್ರೆ ಸಮಯ ಕೊಡದೇ ಘೋಷಣೆ ಮಾಡಿದ್ದಾರೆ.ನಡ್ಡಾ ಅವರು ನನಗೆ ಮಾತಾಡೋಕೆ ಅವಕಾಶವೇ ನೀಡಲಿಲ್ಲ.ನಿಮ್ಮ ಮಗನಿಗೆ ಟಿಕೆಟ್ ಅಂದ್ರು.ಅಲ್ಲಿ ನಿಮಗೆ ಹೆಸರಿದೆ ಮತ್ತು ಗೆಲುವು ಮುಖ್ಯ ಅಂದ್ರು.ನಾನು ಎರಡು ದಿನ ಸಮಯ ನೀಡಿ ಎಂದೆ.ಅವರು ಅದಕ್ಕೆ ಅವಕಾಶ ನೀಡಲೆ ಇಲ್ಲ. ನಿರ್ಧಾರ ಆಗಿದೆ, ಸರ್ವೆ ವರದಿ ಕೂಡ ಭರತ್ ಪರ ಇದೆ. ಅಮಿತ್ ಶಾ ಕೂಡ ಅದೇ ಹೇಳಿದರು. ಚುನಾವಣೆ ಎದುರಿಸಬೇಕು. ಚುನಾವಣೆ ಗೆಲ್ಲಬೇಕು ಎಂದರು. ಹೀಗಾಗಿ ನಾನು ವರುಷ್ಠರ ನಿರ್ಧಾರಕ್ಕೆ ತಲೆ ಬಾಗಿದ್ದೇನೆ. ಪಕ್ಷ ತೀರ್ಮಾನ ಮಾಡಿದೆ. ನಂಗೆ ಈ ಬಾರಿ ಭರತ್ ಗೆ ಟಿಕೆಟ್ ಬೇಡ ಅನ್ನೋದು ಇತ್ತು.ಆದರೆ ಪಕ್ಷ ನಂಬಿಕೆ ಇಟ್ಟು ಅವಕಾಶ ಕೊಟ್ಟಿದೆ.ನಾ ಏನೇ ಆಗಿದ್ರು ಅದಕ್ಕೆ ಪಕ್ಷ ಕಾರಣ.ವಿಶ್ವಾಸ ಇಟ್ಟು ಪಕ್ಷ ತೀರ್ಮಾನ ಮಾಡಿರುವಾಗ ನಾನು ಬೇಡ ಎನ್ನಲು ಆಗಲಿಲ್ಲ.ನನ್ನ ಮನಸ್ಸಿನ ಭಾವನೆ ಏನೇ ಇದ್ದರು, ಪಾರ್ಟಿಯೆ ತೀರ್ಮಾನ ಮಾಡಿರುವಾಗ ಒಪ್ಪಿದೆ‌. ಕಾರ್ಯಕರ್ತರು ಸಹ ಕೈ ಬಿಡಬೇಡಿ ಎಂದರು.ಕಾರ್ಯಕರ್ತರು ಸಹ ಭಾವನಾತ್ಮಕ ಮಾತು ಆಡಿದ್ದಾರೆ.ಮನಸ್ಸಿನಲ್ಲಿ ಏನೆ ಇದ್ದರೂ ಸಹ . ನಾನು ಪಕ್ಷಕ್ಕಾಗಿ ಸಮಾಜಕ್ಕೆ ಒಪ್ಪಿದ್ದೇನೆ ಎಂದರು.