ಮನೆ Latest News ಅರಣ್ಯ ಸಚಿವರು ಕೆಐಒಸಿಎಲ್ ಬಗ್ಗೆ ಸಭೆ ಕರೆಯಲಿ, ನಾನು ಕುಳಿತುಕೊಳ್ಳುತ್ತೇನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ...

ಅರಣ್ಯ ಸಚಿವರು ಕೆಐಒಸಿಎಲ್ ಬಗ್ಗೆ ಸಭೆ ಕರೆಯಲಿ, ನಾನು ಕುಳಿತುಕೊಳ್ಳುತ್ತೇನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

0

ಬೆಂಗಳೂರು; ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿರುವಂತೆ ದೇವದಾರಿ ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ರೂ. ಪಾವತಿಸಿಲ್ಲ.ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ ಕೆಐಓಸಿಎಲ್ ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಸೇರಿದಂತೆ ಇಲಾಖೆಗೆ ಸುಮಾರು 1400 ಕೋಟಿ ರೂ. ಬಾಕಿ ಪಾವತಿಸಬೇಕು ಎಂಬ ಅರಣ್ಯ ಸಚಿವ  ಈಶ್ವರ್ ಖಂಡ್ರೆ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಅವರು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಕೆಐಒಸಿಎಲ್ ಬಗ್ಗೆ ಸಭೆ ಕರೆಯಲಿ.ನಾನು ಕುಳಿತುಕೊಳ್ಳುತ್ತೇನೆ.ಅವರು ಬರಲಿ.ಸಭೆಯಲ್ಲಿ ಎಲ್ಲಾ ಚರ್ಚೆಯಾಗಲಿ.ಸಭೆ ಯಾಕೆ ಕರೆಯಲಾಗುತ್ತಿಲ್ಲ.ಎಲ್ಲಾ ದಾಖಲೆ ಸಮೇತ ಚರ್ಚೆ ಮಾಡೋಣ.ಈಶ್ವರ್ ಖಂಡ್ರೆ ಬೋಗಸ್ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೂ ಹೆಚ್ ಡಿ ಕೆ ಸವಾಲು ಹಾಕಿದ್ದಾರೆ.ಕೆಐಒಸಿಎಲ್ ಸಮಸ್ಯೆ ಬಗ್ಗೆ ಸಿಎಂ ಸಭೆ ಕರೆಯಲಿ.ಏನು ಸಮಸ್ಯೆ ಇದೆ ಅಂತಾ ಚರ್ಚೆ ಮಾಡೋಣ.ಸಮಸ್ಯೆ ಇದ್ದರೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.ಇಂದೇ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.ನನ್ನ ಉಪಯೋಗ ಮಾಡಿಕೊಳ್ಳಲು ಕನಿಷ್ಠ ಸೌಜನ್ಯ ಇಲ್ಲ ನಿಮಗೆ.ಕರ್ನಾಟಕಕ್ಕೆ ಅನ್ಯಾಯ ಆಗಲು ನಾನು ಮೌನಕ್ಕೆ ಶರಣಾಗಲ್ಲ.ಕುದುರೆ ಮುಖ‌ ಕಬ್ಬಿಣದ ಅದಿರು ಕಂಪನಿ ಬಗ್ಗೆ ಸಭೆ ಕರೆಯಿರಿ ನೋಡೋಣ.ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುತ್ತೇನೆ.ಫಾರೆಸ್ಟ್‌ ಮಿನಿಸ್ಟರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುತ್ತಿದ್ದೇನೆ.ಅದೇನ್ ತಪ್ಪಾಗಿದೆ..?ನಾನ್ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.ಮುಖ ಕೊಟ್ಟು ಮಾತಾಡಲ್ಲ ಎಂದಿದ್ದಾರೆ.

ಮೂರು ತಿಂಗಳಲ್ಲಿ ರಾಜ್ಯಕ್ಕೆ ಇಂತಹ ಸಮಸ್ಯೆ ಅಂತ ಯಾರು ಬಂದಿದ್ದಿರಾ.ಬೀದಿಯಲ್ಲಿ ಭಾಷಣ ಮಾಡಿದ್ರೆ ಆಯ್ತಾ. ತಮಿಳುನಾಡನ್ನ ಒಪ್ಪಿಸಲು ನಿಮಗೆ ಏನ್ ಆಗಿದೆ.ಅಲ್ಲಿನ ರೈತರು ಕೂಡ ಜಲಾಶಯ ಬೇಕು ಅಂತ ಹೇಳಿದ್ದಾರೆ‌.ಈ ರೀತಿ ಚಿಲ್ಲರೆ ರಾಜಕೀಯ ಬಿಡಿ.. ರಾಜ್ಯ ಹಾಳಾಗುತ್ತಿದೆ.ಯಾವ ಹೂಡಿಕೆದಾರರು ಬರ್ತಿದ್ದಾರೆ, ಖಾಲಿ ಮಾಡಿಕೊಂಡು ಹೋಗ್ತಿದ್ದಾರೆ.136 ಶಾಸಕರನ್ನ ಜನ ಗೆಲ್ಲಿಸಿದ್ದಾರೆ.. ಅಭಿವೃದ್ಧಿ ಕೆಲಸ ಮಾಡಿ.ರಾಜುಕಾಗೆ ಏನ್ ಹೇಳಿಕೆ ಕೊಟ್ಟಿದ್ದಾರೆ ಸಿಎಂ ಅವರೇ.ಬೆಂಗಳೂರು ಅಭಿವೃದ್ಧಿ 9 ಸಾವಿರ ಕೋಟಿ ಕೊಟ್ಟಿದ್ದೆ ನಾನು ಸಿಎಂ ಆಗಿದ್ದಾಗ.ಅಭಿವೃದ್ಧಿ ಹೆಸರಿನಲ್ಲಿ ಎಷ್ಟು ಲೂಟಿ ಮಾಡ್ತಿರಾ‌.ರಾಜಕಾಲುವೆ ಅಭಿವೃದ್ಧಿ ಮಾಡಲು ಎಷ್ಟು ದಿನಬೇಕು.ಪ್ರತಿ ವರ್ಷ ಬೆಂಗಳೂರು ಜನರಿಗೆ ಸಂಕಷ್ಟ ಬರ್ತಿದೆ.. ಅವರು ಟ್ಯಾಕ್ಸ್ ಕಟ್ಟಲ್ವಾ.ಇಂತಹ ಕೆಟ್ಟ ಸರ್ಕಾರ ಹಿಂದೆ ಬಂದಿಲ್ಲ ಮುಂದೆ ಬರಲ್ಲ.ಕುದುರೆ ಮುಖ ಬಗ್ಗೆ ಹೇಳಿರೋದು ಎಲ್ಲ ಭೋಗಸ್.ಅದರ ಪರ್ಮಿಯನ್ ಬಗ್ಗೆ ನಾನೇ ಕೊಡಿಸುತ್ತೇನೆ,ನಾನೇ ಜವಾಬ್ದಾರಿ. ಸುಮ್ಮನೆ ಸುಮ್ಮನೆ ಆರೋಪ ಮಾಡ್ತಿದ್ದಿರಾ.ಇದರ ಬಗ್ಗೆ ಮೀಟಿಂಗ್ ಕರೆಯಿರಿ ಅಂತ ಸಿಎಂ ಲೇಟರ್ ಬರೆಯುತ್ತೇನೆ..ನಾನು ದಾಖಲೆ ತರಲಿ, ಅವರು ತರಲಿ ಚರ್ಚೆ ಮಾಡೋಣ.ನನ್ನ ಹತ್ರ ಎಲ್ಲ ದಾಖಲೆಗಳು ಇದ್ದಾವೆಇದನ್ನ ಸರಿಪಡಿಸಲು ಮೀಟಿಂಗ್ ಯಾಕ್ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.