ಬೆಂಗಳೂರು; ರಾಜ್ಯ ಸರ್ಕಾರ ದುಷ್ಟ ಶಕ್ತಿಗಳ ಕುರಿತ ಜಾಹೀರಾತನ್ನು ಕೊಟ್ಟಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ದುಷ್ಟ ಶಕ್ತಿಗಳ ಕುರಿತ ಜಾಹೀರಾತನ್ನು ರಾಜ್ಯ ಸರ್ಕಾರ ಕೊಟ್ಟಿದೆ.ದುಷ್ಟ ಶಕ್ತಿಗಳು ಅಂದರೆ ಯಾರು? ದುಷ್ಟ ಶಕ್ತಿಗಳು ಯಾರು ಅಂತಾ ಸರ್ಕಾರಕ್ಕೆ ಗೊತ್ತಿದ್ಯಾ? ಯಾರು ಪೊಲೀಸ್ ಠಾಣೆ ಮೇಲೆ ಕಲ್ಲು ಹೊಡೆದರೋ ಅಂತಹ ಘಟನೆಯನ್ನು ವಾಪಸ್ ತೆಗೆದಿದ್ದಾರೆ, ಇವರು ದುಷ್ಟ ಶಕ್ತಿಗಳು.ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಸರ್ಕಾರ ಏನೇನೋ ಜಾಹೀರಾತು ಕೊಡುತ್ತಿದೆ. ಮುಸಲ್ಮಾನ ಗೂಂಡಾಗಳು, ಉಗ್ರವಾದಿಗಳು ಪೊಲೀಸ್ ಜೀಪ್ ಸುಡೋದು, ಧರ್ಮ ಧ್ವಜ ಹಾಕಿ ವಿಜೃಂಭಿಸಿದವರ ಮೇಲಿನ ಕೇಸ್ ವಾಪಸ್ ಪಡೆದಿದೆ.ಈ ಸರ್ಕಾರಕ್ಕೆ ಮತಿ ಇದ್ಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ಭಯೋತ್ಪಾದನೆ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ದುಷ್ಟ ಶಕ್ತಿಗಳ ವಿರುದ್ಧ ಜಯ ಅಂತೆ!.ಅದೂ ಕೂಡಾ ಸರ್ಕಾರದ ದುಡ್ಡಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ.ಜಾಹೀರಾತು ಮತ್ತು ಕೇಸ್ ವಾಪಸ್ ಪಡೆದಿರುವ ಬಗ್ಗೆ ಎರಡು ಮೂರು ದಿನಗಳಲ್ಲಿ ಹೋರಾಟದ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ.ಇದು ದೇಶದ್ರೋಹಿ, ಭಯೋತ್ಪಾದಕರನ್ನು ಸಾಕುತ್ತಿರುವ ಸರ್ಕಾರ.ಕೇಂದ್ರದಿಂದ ತೆರಿಗೆ ಹಣ ಬಂದಿರುವುದರಲ್ಲಿ ಯಾವುದೇ ಅನ್ಯಾಯ ಆಗಿಲ್ಲ.ಯುಪಿಎ ಕಾಲದಲ್ಲಿ ಎಷ್ಟು ಬಂದಿದೆ, ಎನ್ ಡಿಎ ಕಾಲದಲ್ಲಿ ಎಷ್ಟು ಬಂದಿದೆ ಅಂತಾ ಕಾಂಗ್ರೆಸ್ ನವರು ಚರ್ಚೆಗೆ ಬರಲಿ.ನಮ್ಮ ರಾಜ್ಯದಲ್ಲಿ ಎರಡು ಕಾನೂನು ಇದೆ. ಎಸ್ಐಟಿ ನಾಗೇಂದ್ರಗೆ ಕ್ಲೀನ್ ಚಿಟ್ ಕೊಡುತ್ತದೆ.ಡಾ. ಸುಧಾಕರ್ ಅವರಿಗೆ ಕ್ಲೀನ್ ಚಿಟ್ ಕೊಡ್ತಾರಾ, ಎಫ್ ಐಆರ್ ಮಾಡ್ತಾರಾ, ಜೈಲಿಗೆ ಕಳಿಸ್ತಾರಾ ನೋಡೋಣ.ಮುನಿರತ್ನ ಅವರನ್ನು ಬಂಧಿಸಿದ್ದಾರೆ, ಚನ್ನಾರೆಡ್ಡಿ ಪಾಟೀಲ್ ರನ್ನು ಬಂಧಿಸಿಲ್ಲ.ಕಾಂಗ್ರೆಸ್ ನವರಿಗೆ ಕ್ಲೀನ್ ಚಿಟ್ ಕೊಡುವುದು, ಬಿಜೆಪಿಯವರಿಗೆ ಜೈಲಿಗೆ ಕಳಿಸುವುದು ಎಸ್ಐಟಿ ಹುನ್ನಾರ.ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಮಾಡಿದ್ದಾರೆ ಎಂದಿದ್ದಾರೆ.
ಎಲ್ಲಿದೆ ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ?; ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಶ್ನೆ
ಬೆಂಗಳೂರು; ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.ಎಲ್ಲಿದೆ ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸಿದ್ದಾರೆ.
ಅಟ್ರಾಸಿಟಿ ಕೇಸ್ ಮುನಿರತ್ನ ಮೇಲೆ ಆಗಿದೆ, ಕ್ರಮ ತೆಗೆದುಕೊಳ್ಳಲು ನಮ್ಮ ಅಡ್ಡಿ ಇಲ್ಲ.ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಮೇಲೆ ಅಟ್ರಾಸಿಟಿ ಕೇಸ್ ಆಗಿದೆ, ಅವರು ಇನ್ನೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ.ಇದೇನಾ ನಿಮ್ಮ ಪ್ರಜಾಪ್ರಭುತ್ವ? ನಾಗಮಂಗಲದಲ್ಲಿ ಗಣಪತಿ ಹಬ್ಬ ಆಚರಣೆ ಮಾಡಿದವರ ಮೇಲೆಯೇ ಕೇಸ್ ಹಾಕಿದ್ದಾರೆ, ಕಲ್ಲು ಎಸೆದು ಬೆಂಕಿ ಹಾಕಿದವರ ಮೇಲೆ ಕ್ರಮ ಇಲ್ಲ.ಇದೇನಾ ಸಿದ್ದರಾಮಯ್ಯನವರ ಸಂವಿಧಾನ ರಕ್ಷಣೆ? ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಯುವಕನೊಬ್ಬ ವಿವಿಐಪಿ ಭದ್ರತೆ ಭೇದಿಸಿ ನುಗ್ಗಿ ಬಂದಿದ್ದಾನೆ.ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ಆಗಿದೆ, ಏನು ಮಾಡ್ತಿದೆ ನಿಮ್ಮ ಗುಪ್ತಚರ ಇಲಾಖೆ?ಕರ್ನಾಟಕ ರಾಜ್ಯದಲ್ಲಿ ಗೃಹ ಇಲಾಖೆಯನ್ನು ಸರ್ಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ಕೈಗೆ ಕೊಟ್ಟುಬಿಟ್ಟಿದೆ.ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಆಗಬಾರದು ಅಂತಾ ಪಾಲಿಸಿ ಮಾಡಿಬಿಟ್ಟಿದೆ.ಹಿಂದೂ ವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ.ಪ್ರತಿ ಹಬ್ಬಕ್ಕೆ ನಿಯಮ ಹಾಕುವ ಸರ್ಕಾರ, ಅಲ್ಪಸಂಖ್ಯಾತರಿಗೆ ಯಾಕೆ ನಿಯಮ ಯಾಕೆ ಮಾಡಿಲ್ಲ?ಪ್ರಸಾದ ವಿತರಣೆಗೆ ಪರೀಕ್ಷೆ ಮಾಡಿ ಹಾಕಬೇಕು ಎನ್ನುತ್ತೀರಿ.ಆದರೆ ಮಾಂಸದ ಅಂಗಡಿಗಳಿಗೆ ಏನು ಮಾಡಿದ್ದೀರಿ?ಗಣಪತಿ ಮೂರ್ತಿಯನ್ನು ಅರೆಸ್ಟ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದಾರೆ.ಗಣಪತಿಯನ್ನು ಅರೆಸ್ಟ್ ಮಾಡಿದ ಎಸ್ಪಿ, ಡಿಸಿಪಿ ಎಲ್ಲರನ್ನೂ ಸಸ್ಪೆಂಡ್ ಮಾಡಬೇಕು.ಸಿಎಂ ಕೂಡಲೇ ಕ್ಷಮೆ ಕೇಳಬೇಕು.ಪ್ರಜಾಪ್ರಭುತ್ವ ದಿನಾಚರಣೆಯನ್ನು ಏಕಪಕ್ಷೀಯವಾಗಿ ಸರ್ಕಾರ ಮಾಡುತ್ತಿದೆ.ವಿಪಕ್ಷವಾಗಿ ನಮಗೆ ಏನೂ ಆಹ್ವಾನ ಬಂದಿಲ್ಲ.ಬೀದರ್ ನಲ್ಲಿ ಮಾತ್ರ ಅಲ್ಲಿನ ಡಿಸಿ ನಮ್ಮ ಶಾಸಕರನ್ನು ಕರೆದಿದ್ದಾರೆ ಅಂತಾ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ.