ಮನೆ Latest News ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ; ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟ ಡಿ ಕೆ ಸುರೇಶ್

ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ; ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟ ಡಿ ಕೆ ಸುರೇಶ್

0

 

ಬೆಂಗಳೂರು;  ತೆರಿಗೆ ತಾರತಮ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ ಕೆ ಸುರೇಶ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ಕಳೆದ ಬಾರಿಯೇ ಈ ವಿಷಯ ಪ್ರಸ್ತಾಪ ಮಾಡಿದ್ದೆ.ರಾಜ್ಯ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಅಂತ.ನಿನ್ನೆ ಕೇಂದ್ರ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಿದೆ.ದಕ್ಷಿಣ ಭಾರತಕ್ಕೆ ೨೮೧೫೨ ಕೋಟಿ ರೂಪಾಯಿ ನೀಡಿದ್ದಾರೆ.ಉತ್ತರ ಪ್ರದೇಶಕ್ಕೆ ಮಾತ್ರ ೩೨ ಸಾವಿರ ಕೋಟಿ ಕೊಟ್ಟಿದ್ದಾರೆ.ಪದೆ ಪದೆ ಕೆಣಕುವ ಪ್ರಯತ್ನ ನಡೀತಾ ಇದೆ.ದುಃಖದಿಂದ ಈ ಮಾತು ಹೇಳಬೇಕಿದೆ.ರಾಜ್ಯದ ಅಭಿವೃದ್ಧಿಗೆ ಅನ್ಯಾಯವಾಗುತ್ತಿದೆ.ದಕ್ಷಿಣ ಭಾರತದ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು.ಬಿಜೆಪಿಯ ೧೯ ಸಂಸದರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇದೆ.ಆದ್ರೆ ಸಂಸದರು ಧ್ವನಿ ಎತ್ತುತ್ತಿಲ್ಲ.ನಾನು ಒತ್ತಾಯ ಮಾಡುತ್ತೇನೆ.ನಿಮ್ಮ‌ ನೀತಿ ಬದಲಾವಣೆ ಮಾಡಿ.ರಾಜ್ಯಕ್ಕೆ,ದಕ್ಷಿಣ ಭಾರಯಕ್ಕೆ ಹೆಚ್ಚಿನ ತೆರಿಗೆ ನೀಡಿ ಎಂದು ಡಿ ಕೆ ಸುರೇಶ್ ಮನವಿ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ.ತಮಿಳುನಾಡಿನಲ್ಲಿ ಬಹಳ ಹಿಂದೆಯೆ ಇತ್ತು. ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ.ನಾವು ಭಾರತಾಂಬೆಯ ಮಕ್ಕಳು.ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ ಕೆ ಸುರೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

ಹರ್ಯಾಣ ಫಲಿತಾಂಶಕ್ಕೆ ಮೂಡಾ ಕಾರಣ ಎಂಬ ಕೋಳಿವಾಡ ಆರೋಪ: ಕೋಳಿವಾಡ ಹೇಳಿಕೆಗೂ ಹರ್ಯಾಣಕ್ಕೂ ಸಂಬಂಧವಿಲ್ಲ ಎಂದ ಡಿ ಕೆ ಸುರೇಶ್

ಬೆಂಗಳೂರು; ಹರ್ಯಾಣ ಫಲಿತಾಂಶಕ್ಕೆ ಮೂಡಾ ಕಾರಣ ಎಂಬ ಕೋಳಿವಾಡ ಆರೋಪಕ್ಕೆ ಮಾಜಿ ಸಂಸದ ಡಿ ಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ. ಕೋಳಿವಾಡ ಹೇಳಿಕೆಗೂ ಹರ್ಯಾಣಕ್ಕೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.ಇದು ‌ಜನರ‌ ತೀರ್ಪು.ಹರ್ಯಾಣದಲ್ಲಿ ಹಿನ್ನಡೆ ಕಂಡಿದೆ. ಲೋಕಸಭೆ,ವಿಧಾನಸಭೆ ಫಲಿತಾಂಶಗಳೇ ಬೇರೆ.ಒಂದು ರಾಜ್ಯಕ್ಕಿಂತ ಮತ್ತೊಂದು ವಿಭಿನ್ನವಾಗಿರುತ್ತವೆ ಎಂದಿದ್ದಾರೆ. ಅಲ್ಲದೇ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.ನಮ್ಮದು ಅತಿಯಾದ ಆತ್ಮವಿಶ್ವಾಸ .ಅತಿಯಾದ ಆತ್ಮವಿಶ್ವಾಸವನ್ನ ಬಿಡಬೇಕು.ನಾವು ಕೆಲಸದ ಮೇಲೆ ವಿಶ್ವಾಸ ಇಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬುದ್ಧಿ ಮಾತು ಹೇಳಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ,ಮಹದೇವಪ್ಪ ಭೇಟಿ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ.ಪಕ್ಷದ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆಯವರನ್ನ ಭೇಟಿ ಮಾಡ್ತಾರೆ.ಅದಕ್ಕೆ ಬೇರೆ ಅರ್ಥ ಕೊಡೋಕೆ‌ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.ಪಕ್ಷದ ಅಧ್ಯಕ್ಷರನ್ನಲ್ಲದೆ ಇನ್ಯಾರನ್ನ‌ ಭೇಟಿ ಮಾಡೋಕೆ ಸಾಧ್ಯ ಎಂದಿದ್ದಾರೆ.

ಸರ್ಕಾರ ಅವರಾಗೇ ಬೀಳಿಸ್ತಾರೆಂಬ ಬಿಜೆಪಿಯವರ ಮಾತಿಗೆ ಎದಿರೇಟು ಕೊಟ್ಟ ಅವರು ಅವರ ಆ ಗುಂಗಿನಲ್ಲೇ ಇರಲಿ ಎಂದಿದ್ದಾರೆ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಮಾತನಾಡಿದ ಅವರು ನಾನು ದಿನಕ್ಕೊಂದು ಹೇಳಿಕೆ ಕೊಡಲ್ಲ.ನಾವು ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ.ಅವರು ಏನೋ ಹೇಳಿಕೆ ಕೊಡಬೇಕು ಕೊಡ್ತಾರೆ. ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾರೆ.ಅದಕ್ಕೆಲ್ಲ ನಾವು ಹೇಳಿಕೆ ಕೊಡೋಕೆ ಆಗುತ್ತಾ? ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.