ಬೆಂಗಳೂರು; ಹರ್ಯಾಣ ಫಲಿತಾಂಶಕ್ಕೆ ಮೂಡಾ ಕಾರಣ ಎಂಬ ಕೋಳಿವಾಡ ಆರೋಪಕ್ಕೆ ಮಾಜಿ ಸಂಸದ ಡಿ ಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ. ಕೋಳಿವಾಡ ಹೇಳಿಕೆಗೂ ಹರ್ಯಾಣಕ್ಕೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.ಇದು ಜನರ ತೀರ್ಪು.ಹರ್ಯಾಣದಲ್ಲಿ ಹಿನ್ನಡೆ ಕಂಡಿದೆ. ಲೋಕಸಭೆ,ವಿಧಾನಸಭೆ ಫಲಿತಾಂಶಗಳೇ ಬೇರೆ.ಒಂದು ರಾಜ್ಯಕ್ಕಿಂತ ಮತ್ತೊಂದು ವಿಭಿನ್ನವಾಗಿರುತ್ತವೆ ಎಂದಿದ್ದಾರೆ. ಅಲ್ಲದೇ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.ನಮ್ಮದು ಅತಿಯಾದ ಆತ್ಮವಿಶ್ವಾಸ .ಅತಿಯಾದ ಆತ್ಮವಿಶ್ವಾಸವನ್ನ ಬಿಡಬೇಕು.ನಾವು ಕೆಲಸದ ಮೇಲೆ ವಿಶ್ವಾಸ ಇಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬುದ್ಧಿ ಮಾತು ಹೇಳಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ,ಮಹದೇವಪ್ಪ ಭೇಟಿ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ.ಪಕ್ಷದ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆಯವರನ್ನ ಭೇಟಿ ಮಾಡ್ತಾರೆ.ಅದಕ್ಕೆ ಬೇರೆ ಅರ್ಥ ಕೊಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.ಪಕ್ಷದ ಅಧ್ಯಕ್ಷರನ್ನಲ್ಲದೆ ಇನ್ಯಾರನ್ನ ಭೇಟಿ ಮಾಡೋಕೆ ಸಾಧ್ಯ ಎಂದಿದ್ದಾರೆ.
ಸರ್ಕಾರ ಅವರಾಗೇ ಬೀಳಿಸ್ತಾರೆಂಬ ಬಿಜೆಪಿಯವರ ಮಾತಿಗೆ ಎದಿರೇಟು ಕೊಟ್ಟ ಅವರು ಅವರ ಆ ಗುಂಗಿನಲ್ಲೇ ಇರಲಿ ಎಂದಿದ್ದಾರೆ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಮಾತನಾಡಿದ ಅವರು ನಾನು ದಿನಕ್ಕೊಂದು ಹೇಳಿಕೆ ಕೊಡಲ್ಲ.ನಾವು ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ.ಅವರು ಏನೋ ಹೇಳಿಕೆ ಕೊಡಬೇಕು ಕೊಡ್ತಾರೆ. ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾರೆ.ಅದಕ್ಕೆಲ್ಲ ನಾವು ಹೇಳಿಕೆ ಕೊಡೋಕೆ ಆಗುತ್ತಾ? ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರ್ತಾರೆ; ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ
ಬೆಂಗಳೂರು; ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರ್ತಾರೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ ನೀಡಿದ್ದಾರೆ.
ವಿಪಕ್ಷಗಳು ಮುಡಾ ಹಗರಣದಲ್ಲಿ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ಅವರೇ ಸಿಎಂ ಆಗಿ ಐದು ವರ್ಷ ಇರ್ತಾರೆ.ಅವರ ಮೇಲೆ ಚಾಮುಂಡೇಶ್ವರಿ ತಾಯಿಯ ಅಶೀರ್ವಾದವಿದೆ.ಅವರು ಎಲ್ಲ ಸಮಸ್ಯೆಯಿಂದ ಬೇಗ ಹೊರ ಬರ್ತಾರೆ. ಅವರೇ ನಮ್ಮ ನಾಯಕರು. ಸಿದ್ದರಾಮಯ್ಯ ಅವರು ಐದು ವರ್ಷ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದಿದ್ದಾರೆ.
ಜಾತಿಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನಡೆ ಅನುಸರಿಸಬೇಕು.ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡಿಸುತ್ತಿದೆ. ಅವರ ವರದಿ ಬರುವರಗೆ ಸರ್ಕಾರ ಕಾಯಬೇಕು.ಕೇಂದ್ರದಿಂದ ವರದಿ ಬಂದ್ರೆ ಯಾವುದೇ ಗೊಂದಲ ಆಗುವುದಿಲ್ಲ.ಜನಗಣತಿ ಮಾಡಿಸಲು ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿಯವರೆಗೆ ಸಿಎಂ ತಾಳ್ಮೆಯಿಂದ ಕಾಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಂಸದ ಡಿ ಕೆ ಸುರೇಶ್ ಸಲಹೆ ನೀಡಿದ್ದಾರೆ.