ಬೆಂಗಳೂರು; ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ನಡೆಯಿತು.ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪದವೀಧರ ಸಂಘದಿಂದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಇನ್ನು ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಛಲವಾದಿ ನಾರಾಯಣಸ್ವಾಮಿ ಸಹೋದರ ಛಲವಾದಿ ಕುಮಾರ್ ನಿರ್ಮಾಣ ಮಾಡಿರುವ ಸಂಜು Weds ಗೀತಾ 2 ಚಿತ್ರದ ಹಾಡು ಬಿಡುಗಡೆಮ ಮಾಡಲಾಯಿತು. ಈ ವೇಳೆ ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ನಾಗಶೇಖರ್ ಉಪಸ್ಥಿತಿದ್ದರು.
ಅಭಿನಂದನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಉಪಾಧ್ಯಕ್ಷ ಎನ್.ಮಹೇಶ್, ದಲಿತ ಸಮುದಾಯದ ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವರ ಉಪಸ್ಥಿತಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕರಾಗಿದ್ದರು. ಶೋಷಿತರ ಪೀಡಿತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ.ಇದು ಅಪರೂಪದ ಅವಶ್ಯಕವಾದ ಕಾರ್ಯಕ್ರಮ. ಹೋರಾಟ ಮನೋಭಾವನೆಯತ್ತ ಹೋಗುತ್ತಿದೆ.ಪರಿಷತ್ ವಿಪಕ್ಷ ನಾಯಕ ಆಯ್ಕೆ ವಿಚಾರವಾಗಿ ಹಲವು ಚರ್ಚೆ ನಡೆಯುತ್ತಿತ್ತು. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆ ದೂರವಾಣಿ ಮುಖಾಂತರ ಮಾತನಾಡಿದೆ. ಛಲವಾದಿ ನಾರಾಯಣಸ್ವಾಮಿ ಹೋರಾಟಗಾರರಿದ್ದಾರೆ. ಅವರ ನಾಯಕತ್ವ ಗುರುತಿಸಿದ್ರೆ ಸೂಕ್ತ ಎಂಬ ಸಲಹೆ ನೀಡಿದೆ.ಚಿಕ್ಕ ವಯಸ್ಸಿಗೆ ಇಷ್ಟು ಆಲೋಚನೆ ಮಾಡಿದ್ಯ ಒಳ್ಳೆಯ ಬೆಳವಣಿಗೆ ಅಂತ ನನ್ನ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೋರಾಟ ಅಂದ್ರೆ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ನೆನಪಾಗುತ್ತಾರೆ. ಕಳೆದ 3-4 ದಶಕಗಳಿಂದ ಬಿ.ಎಸ್ ಯಡಿಯೂರಪ್ಪ ಹೋರಾಟ ಮಾಡುತ್ತಾ ಬಂದಿದ್ದಾರೆ. ಗುಲ್ಬರ್ಗ, ಬಿಜಾಪುರ, ಬೆಳಗಾವಿಗೆ ಹೋದ್ರೆ ಹೋರಾಟಗಾರ ಯಡಿಯೂರಪ್ಪ ಅಂತ ಜನ ಗುರುತಿಸುತ್ತಾರೆ. ಧ್ವನಿ ಇಲ್ಲದವರ ಪರ ಯಡಿಯೂರಪ್ಪ ಹೋರಾಟ ಮಾಡಿದ್ರು. ರಾಜ್ಯದ ಮತ್ಯಾವ ರಾಜಕಾರಣಿಯೂ ಈ ರೀತಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾತನಾಡಿ ಇಂದು ಬಹಳ ಆನಂದದ ದಿನ. ಸಾಧ್ಯ ಆಗೊಲ್ಲ ಅಂದು, ಸಾಧನೆ ಆದಾಗ ಆನಂದ ಆಗುತ್ತೆ. ಭಾರತೀಯ ಜನತಾ ಪಾರ್ಟಿಗೆ ಮುಸ್ಲಿಂ ವಿರೋಧ ಅಂತ ಹಣೆಪಟ್ಟಿ ಕಟ್ಟಿದ್ರು. ಅಬ್ದುಲ್ ಕಾಲಂ ದೇಶದ ಪ್ರಧಾನಿಯಾಗಿದ್ದರು. ಶಿಕ್ಷಿತ, ದಲಿತ ಮಹಿಳೆಯನ್ನ ದ್ರೌಪದಿ ಮುರ್ಮುರನ್ನ ರಾಷ್ಟ್ರಪತಿಯಾಗಿ ನೇಮಿಸಿದ್ದೇವೆ. ಬಿಜೆಪಿಯ ರಾಜಕೀಯ ಚಟುವಟಿಕೆಗಳನ್ನ ಒಪ್ಪದ ಸಂಘಟನೆಗಳು ಇಲ್ಲಿವೆ. ಛಲದ ಗುಣದಿಂದ ಛಲವಾದಿ ನಾರಾಯಣಸ್ವಾಮಿ ಈ ಸ್ಥಾನಕ್ಕೆ ಬಂದಿದ್ದಾರೆ.ಅಂಬೇಡ್ಕರ್ ಮೂರು ವಿಚಾರವಳನ್ನ ಹೇಳಿದ್ದಾರೆ ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ . ಸಮಾಜ ಮೇಲೆ ಬರಬೇಕು ಅಂದರೆ ಶಿಕ್ಷಣದಿಂದ ಮೇಲೆತ್ತಬೇಕು.ಒಟ್ಟಿಗೆ ಇದ್ದರೆ ಬಲ ಇರುತ್ತೆ ಎಂದ್ರು. ಒಟ್ಟಿಗೆ ಇದ್ರೂ ಬಲ ಇಲ್ಲದೆ ಇದ್ದರೆ ಸಂಘಟನೆ ವ್ಯರ್ಥ. ನ್ಯಾಯ ಸಿಗದೇ ಇದ್ದರೆ ಸಂಘರ್ಷದ ದಾರಿ ಹಿಡಿಯಲೇಬೇಕು ಅಂದ್ರು. ಸಮಾಜಕ್ಕೆ ದಿಕ್ಕು ತೋರಿಸಿದ್ದು ಅಂಬೇಡ್ಕರ್. ದಲಿತರು, ಶೋಶಿತರ ಹೇಳಿಗೆಗೆ ಹಲವರು ಕೆಲಸ ಮಾಡಿದ್ದಾರೆ ಎಂದಿದ್ದಾರೆ.