ರಾಯಚೂರಿನ ಮಾನ್ವಿಯಲ್ಲಿ ಸ್ವಾಭಿಮಾನ ಸಮಾವೇಶ ಕಾರ್ಯಕ್ರಮ ನಡೆಯಿತು.ವೇದಿಕೆ ಮೇಲೆ ಸಿಎಂಗೆ ಬೆಳ್ಳಿ ಗದೆ ನೀಡೋ ಮೂಲಕ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಿದ್ರು.ಬಳಿಕ ಸಚಿವ ಎನ್ ಎಸ್ ಬೋಸರಾಜ್ ಹಾಗೂ ಶಾಸಕ ಹಂಪಯ್ಯ ಸಾಹುಕಾರ್ ಅವರು ಉಳಿದ ಸಚಿವರನ್ನು ಸನ್ಮಾನ ಮಾಡಿದ್ದಾರೆ. ಎಲ್ಲ ಸಚಿವರುಗಳಿಗೆ ಬೆಳ್ಳಿ ಖಡ್ಗ ನೀಡೊ ಮೂಲಕ ಗೌರವ ಸಲ್ಲಿಸಿದ್ರೆ, ಮೊಬೈಲ್ ಟಾರ್ಚ್ ಹಿಡಿಯೋ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗೌರವ ಸಲ್ಲಿಸಿದರು. ಈ ವೇಳೆ ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ಎನ್ ಎಸ್ ಬೋಸರಾಜ್ ಗೆ ಸನ್ಮಾನ ಮಾಡಿದ್ರು.
ಇನ್ನು ಸ್ವಾಭಿಮಾನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾನ್ವಿಯ ಅನೇಕ ಅಭಿವೃದ್ಧಿ ಕಾರ್ಯ.ಶಂಕು ಸ್ಥಾಪನೆ ಮಾಡಿದ್ದೇವೆ.ಹಂಪಯ್ಯ ನಾಯಕ್ ಶಾಸಕರಾದ ಮೇಲೆ ಈಗ 458 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಮಾಡಿಸಿದ್ದಾರೆ..ಸಿಂಧನೂರು-ರಾಯಚೂರು ಮಧ್ಯೆ 1698 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ಶಂಕುಸ್ಥಾಪನೆ ಮಾಡಿದ್ದೇವೆ.ಇದು ಶಂಕುಸ್ಥಾಪನೆನೋ,ಗುದ್ದಲಿ ಪೂಜೆಯೋ ನೀವೇ ಹೇಳ್ಬೇಕು.ನಿಮ್ಮಲ್ಲಿ ಭೂಮಿ ಪೂಜೆ ಆಂತಾರೆ.ಬಿಜೆಪಿ ಅವ್ರು ಹೇಳ್ತಾರೆ ಗ್ಯಾರಂಟಿಗಳಿಂದ ಸರ್ಕಾರದಲ್ಲಿ ಹಣವಿಲ್ಲ ಅಂತ ಹಸಿ ಸುಳ್ಳು ಹೇಳ್ತಾರೆ. 458 ಕೋಟಿ ವೆಚ್ಚದಲ್ಲಿ ಮಾನ್ವಿಯಲ್ಲಿ ಗುದ್ದಲಿ ಪೂಜೆ ಮಾಡಲು ಆಗ್ತಿರ್ಲಿಲ್ಲ.ಈ ಅಭಿವೃದ್ಧಿಯಿಂದ ಬಿಜೆಪಿಗೆ ಹೊಟ್ಟೆ ಉರಿಗೆ ಬಿಜೆಪಿ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ.ಇದೇ ಕಾರಣಕ್ಕೆ ಸ್ವಾಭಿಮಾನ ಸಮಾವೇಶ ಮಾಡಿ ನಿಮ್ಮ ಮೂಲಕ ಉತ್ತರ ಕೊಡಲು ಸ್ವಾಭಿಮಾನ ಸಮಾವೇಶ ಮಾಡಲಾಗ್ತಿದೆ ಎಂದರು.
ಇನ್ನು ಇದೇ ವೇಳೆ ಮುಡಾ ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ನನ್ನ ಅಭಿವೃದ್ಧಿ ಕಾರ್ಯ ಸಹಿಸಿಕೊಳ್ಳಲು ಆಗದ ಬಿಜೆಪಿ ಅವ್ರು ಇದನ್ನು ಮಾಡಿದ್ರು. ನನ್ನ ಪತ್ನಿ ಯಾವತ್ತು ರಾಜಕೀಯಕ್ಕೆ ಬಂದೋರಲ್ಲ.ಅಂಥವಳನ್ನ ಬೀದಿಗೆ ತಂದಿದ್ದಿರಲ್ಲಾ,ಹೊರಗೆ ತಂದಿದ್ದಿರಲ್ಲಾ..ನನ್ನದೇನು ತಪ್ಪು ಹೇಳಿ..? ಎಂದು ಪ್ರಶ್ನೆ ಮಾಡಿದ್ರು.ಮಾತೃ ಯೋಜನೆ ಸೇರಿ ಯೋಜನೆಗಳನ್ನ ತಂದಿದ್ದು ತಪ್ಪಾ..?ನಾನೇನು ತಪ್ಪು ಮಾಡಿಲ್ಲ..ನಾನು ಹಿಂದುಳಿದ ಜಾತಿಗೆ ಸೇರಿದವನು ಅಂತ ನನ್ನ ಮೇಲೆ ದ್ವೇಷ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಕುರಿ ಕಾಯುತ್ತಿದ್ದವನ ಮಗ. ಎರಡನೇ ಬಾರಿಗೆ ಸಿಎಂ ಆದನಲ್ಲಾ ಅನ್ನೋ ಹೊಟ್ಟೆ ಉರಿ.ಅಶೋಕ್,ಬಿಎಸ್ ವೈ,ವಿಜಯೇಂದ್ರ,ಕುಮಾರಸ್ವಾಮಿಗೆ ಹೊಟ್ಟೆ ಉರಿ.ನನ್ನದು ಒಂದೇ ತಪ್ಪೇನು ಅಂದ್ರೆ ಬಡವರಿಗೆ ಶಕ್ತಿ ತುಂಬಬೇಕು ಅನ್ನೋದು. ನಿಮಗೆ ಶಿಕ್ಷಣ ಸಿಗಬೇಕಲ್ಲಾ..? ಇದು ನಾನು ಮಾಡಿದ ತಪ್ಪು.ವಾಜಪೇಯಿ ಪ್ರಧಾನಿ ಆಗಿದ್ದಾಗ,371(j) ಮಾಡಿ ಅಂತ ಅಂದಿನ ಸಿಎಂ ಎಸ್ ಎಂ ಕೃಷ್ಣಾ ಪತ್ರ ಬರೆದಿದ್ರು. ಆದ್ರೆ ಅಡ್ವಾನಿ ಆಗಲ್ಲ ಅಂತ ವೈರಿಂಗ್ ಅಲ್ಲಿ ಕೊಟ್ರು.ಕೊಟ್ರೆ ಬೇರೆ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳತ್ರೆ ಅಂದ್ರು.ಆದ್ರೆ ಇವ್ರಿಗೆ ನಾಚಿಕೆ ಆಗಬೇಕು.371(j)ಅನ್ನ ಮಲ್ಲಿಕಾರ್ಜುನ ಖರ್ಗೆ,ಧರ್ಮ ಸಿಂಗ ಅವರ ಪ್ರಯತ್ನದಿಂದ ಸಂವಿಧಾನಕ್ಕೆ ತಿದ್ದುಪಡಿ ಆಯ್ತು ಎಂದಿದ್ದಾರೆ.