ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವಹೇಳನಕಾರಿ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕೇಂದ್ರ ಒಬ್ಬ ಎಡಿಜಿಪಿ ಅಧಿಕಾರಿ, ಹಂದಿ, ಹೊಲಸು ಈ ರೀತಿಯ ಮಾತು ಆಡಿದ್ದು ಇದೇ ಮೊದಲು.ಕಾನೂನಿನಲ್ಲಿ ಮಾತನಾಡಲು ಅವಕಾಶ ಇಲ್ಲ.ಕುಮಾರಸ್ವಾಮಿಗೆ ಬರೆದ ಪತ್ರ ನಾನು ನೋಡಿದ್ದೇನೆ.ಈ ಪತ್ರ ಬರೆದಿರುವುದು ಕುಮಾರಸ್ವಾಮಿಗೆ ಅಲ್ಲ, ಅವರ ಕೆಳ ಅಧಿಕಾರಿಗೆ ಬರೆದಂತೆ ಇದೆ. ದೇವೇಗೌಡರ ಕುಟುಂಬವನ್ನು ಈಗಾಗಲೇ ಟಾರ್ಗೆಟ್ ಮಾಡಿದ್ದಾರೆ.ಇಡೀ ಕುಟುಂಬ ನಿಂದನೆ ಮಾಡುವುದೇ ಕಾಂಗ್ರೆಸ್ ಟಾರ್ಗೆಟ್.ಪ್ರಹ್ಲಾದ್ ಜೋಶಿ ಸಹ ಮಾತನಾಡಿದ್ದಾರೆ.ಲಿಮಿಟ್ ನಲ್ಲಿ ಅಧಿಕಾರಿಗಳು ಮಾತನಾಡಬೇಕು.ಹೀಗೆ ಆದರೆ ನಾಳೆ ಸಿಎಂ ಸಿದ್ದರಾಮಯ್ಯ ಮೇಲೂ ಮಾತಾಡ್ತಾರೆ.ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ.ಕೂಡಲೇ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ತಾರಕಕ್ಕೆರಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಎಡಿಜಿಪಿ ಚಂದ್ರಶೇಖರ್ ಸಮರ; ಚಂದ್ರಶೇಖರ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಸಿ ಗೆ ಜೆಡಿಎಸ್ ದೂರು
ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ಸಮರ ತಾರಕಕ್ಕೇರಿದೆ. ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಸಿ ಗೆ ಜೆಡಿಎಸ್ ದೂರು ನೀಡಿದೆ.ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಡಿಜಿಪಿ ಚಂದ್ರಶೇಖರ್ ವಿರುದ್ಧ ದೂರು ನೀಡಿದ್ದಾರೆ
ಕುಮಾರಸ್ವಾಮಿ ಅವರನ್ನು ಎಡಿಜಿಪಿ ಚಂದ್ರಶೇಖರ್ ಪತ್ರದ ಮೂಲಕ ಹಂದಿಗೆ ಹೋಲಿಸಿದ್ದರು. ಹೀಗಾಗಿ ಕೇಂದ್ರ ಸಚಿವರಿಗೆ ಅಪಮಾನ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಎ ಮಂಜು ಚಂದ್ರಶೇಖರ್ ಹೇಳಿಕೆ ಖಂಡನೀಯ.ವಿಚಾರಣೆ ಮಾಡಿದ ವರದಿ ಕೊಡಬೇಕು. ಆದರೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವರದಿ ಲೀಕ್ ಮಾಡೋದಲ್ಲ.ಅವರೇ ವರದಿ ಲೀಕ್ ಮಾಡಿದ್ರಾ..? ಅಥವಾ ಬೇರೆಯವರು ಲೀಕ್ ಮಾಡಿದ್ರಾ ಗೊತ್ತಿಲ್ಲ. ಕೂಡಲೇ ಚಂದ್ರಶೇಖರ್ ಕ್ಷಮೆಯಾಚನೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದು ಕುಮಾರಸ್ವಾಮಿಗೆ ಆದ ಅವಮಾನ ಅಂತ ಖುಷಿ ಪಡೋದಲ್ಲ.ನಾಳೆ ನಿಮಗೂ ಆಗಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಎಡಿಜಿಪಿ ಚಂದ್ರಶೇಖರ್ ಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ವಾರ್ನಿಂಗ್ ಕೊಟ್ಟಿದ್ದಾರೆ.ಚಂದ್ರಶೇಖರ್ ದೇವೇಗೌಡರ ಕುಟುಂಬ ಎಂಥದ್ದು ಅವರ ವ್ಯಕ್ತಿತ್ವ ಏನು ಅಂತ ಅವರ ಮಾವನ ಬಳಿ ಕೇಳಿಕೊಳ್ಳಲಿ.ಬೇರೆ ರಾಜ್ಯದಿಂದ ಬಂದು ಕರ್ನಾಟಕದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿದ್ದಾರೆ ಹೇಗೆ ಗೌರವ ಕೊಡಬೇಕು ಎಂದು ಕಲಿತುಕೊಳ್ಳಬೇಕು.ಯಾರೋ ಒಬ್ಬ ಮಾತನಾಡಿದರೆ ಕುಮಾರಸ್ವಾಮಿಗೆ ಏನು ಆಗುವುದಿಲ್ಲ.ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಸ್ವಾಮಿ ಬಗ್ಗೆ ಒಬ್ಬ ಅಧಿಕಾರಿ ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ತ್ವರಿತವಾಗಿ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ದೂರು ನೀಡಿದ್ದೇವೆ. ಎಡಿಜಿಪಿ ಚಂದ್ರಶೇಖರ್ ಮೇಲೆ ಸರಿಯಾದ ರೀತಿ ಕ್ರಮ ಆಗದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ನಾಟಕದ ಮಾತುಗಳನ್ನು ಕಾಂಗ್ರೆಸ್ನವರು ಆಡಬಾರದು ಇವತ್ತು ಇವರಿಗೆ ಆಗಿದೆ ನಾಳೆ ನಿಮಗೂ ಮಾತನಾಡುತ್ತಾರೆ. ಸಿಎಂ ಅವರ ಮೇಲೆ ನಮಗೆ ಗೌರವ ಇದೆ ಸಿದ್ದರಾಮಯ್ಯನವರೇ ಹೇಳುತ್ತಿದ್ದರು. ನಮಗೆ ಅಧಿಕಾರಿಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಹೇಳುವ ಮೊದಲು ಸರ್ಕಾರ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಚಂದ್ರಶೇಖರ್ ದೇವೇಗೌಡರ ಕುಟುಂಬ ಎಂಥದ್ದು ಅವರ ವ್ಯಕ್ತಿತ್ವ ಏನು ಅಂತ ಅವರ ಮಾವನ ಬಳಿ ಕೇಳಿಕೊಳ್ಳಲಿ. ಕಾನೂನು ರೀತಿಯಲ್ಲಿ ಏನಿದೆ ಅದನ್ನು ಮಾಡಬೇಕು ಅದು ಬಿಟ್ಟು ಈ ರೀತಿಯಾಗಿ ಕುಮಾರಸ್ವಾಮಿ ಮಾತನಾಡಬಾರದು ಎಂದಿದ್ದಾರೆ.
ಬೇರೆ ರಾಜ್ಯದಿಂದ ಬಂದು ಕರ್ನಾಟಕದ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿದ್ದಾರೆ ಹೇಗೆ ಗೌರವ ಕೊಡಬೇಕು ಎಂದು ಕಲಿತುಕೊಳ್ಳಬೇಕು.ಯಾರೋ ಒಬ್ಬ ಮಾತನಾಡಿದರೆ ಕುಮಾರಸ್ವಾಮಿಗೆ ಏನು ಆಗುವುದಿಲ್ಲ. ಆದರೆ ಇಂಥ ಅಧಿಕಾರಿಗಳಿಗೆ ಅಂಕುಶ ಹಾಕಬೇಕು ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.